MYsuru : ಕಾವೇರಿಯಿಂದ ಕುಡಿಯುವ ನೀರಿಗೆ 38 ಕೋಟಿ ರು. ಅನುದಾನ

By Kannadaprabha News  |  First Published Dec 20, 2022, 6:20 AM IST

ಲಾಳಂದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರದಿಂದ 38 ಕೋಟಿ ರು.ಗಳ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೆ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.


ಕೆ.ಆರ್‌. ನಗರ (ಡಿ. 20): ಲಾಳಂದೇವನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡಲು ಸರ್ಕಾರದಿಂದ 38 ಕೋಟಿ ರು.ಗಳ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲಿಯೆ ಟೆಂಡರ್‌ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ತಾಲೂಕಿನ ಲಾಳನಹಳ್ಳಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಮೂರು ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.

Latest Videos

undefined

ಜಾತಿ, ಪಕ್ಷ ಮೀರಿ ಎಲ್ಲರನ್ನು ಸಮಾನವಾಗಿ ಕಂಡು ಅಭಿವೃದ್ಧಿ ಕೆಲಸ ಮಾಡುತ್ತಿದ್ದು, ಎಲ್ಲ ಕ್ಷೇತ್ರ ಉತ್ತಮ ಅಭಿವೃದ್ಧಿ ಕಾರ್ಯಗಳೊಂದಿಗೆ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಮೊದಲ ಸ್ಥಾನದಲ್ಲಿದೆ ಎಂದರು.

ವಿರೋಧಿಗಳಿಗೆ ನನ್ನ ಬಗ್ಗೆ ಮಾತನಾಡಲು ಯಾವುದೆ ವಿಚಾರಗಳು ಇಲ್ಲದ ಕಾರಣ ಅಪ ಪ್ರಚಾರದಲ್ಲಿ ತೊಡಗಿದ್ದು, ಇದಕ್ಕೆ ಯಾರು ಕಿವಿಗೊಡಬೇಡಿ ಎಂದು ಮನವಿ ಮಾಡಿದರಲ್ಲದೆ, ಜನರು ನನಗೆ ನೀಡಿರುವ ಅಧಿಕಾರವನ್ನು ಅವರ ಸೇವೆಗೆ ಪ್ರಾಮಾಣಿಕವಾಗಿ ಬಳಕೆ ಮಾಡಿರುವ ತೃಪ್ತಿ ಇದೆ ಎಂದು ತಿಳಿಸಿದರು.

ಗ್ರಾಮದ ಪುರಾತನ ದೇವಾಲಯವನ್ನು ಕೆಡವಿ ಕಾಮಗಾರಿ ನಡೆಸದ ಬಗ್ಗೆ ಗ್ರಾಪಂ ಸದಸ್ಯ ಉಮೇಶ್‌ ಪ್ರಶ್ನಿಸಿದಾಗ ಮುಂದಿನ ಜನವರಿ ವೇಳೆಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ಪುರಾತನ ಇಲಾಖೆಯ ಸಹಯೋದಲ್ಲಿ ದೇವಾಲಯ ಕಾಮಗಾರಿ ಪ್ರಾರಂಭವಾಗಲಿದ್ದು ಇದರಲ್ಲಿ ಯಾವುದೆ ಸಂದೇಹ ಬೇಡ ಎಂದು ಭರವಸೆ ನೀಡಿದರು.

ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ನವನಗರ ಅರ್ಬನ್‌ ಬ್ಯಾಂಕ್‌ ಅಧ್ಯಕ್ಷ ಕೆ.ಎನ್‌. ಬಸಂತ್‌, ಪುರಸಭೆ ಸದಸ್ಯರಾದ ಕೆ.ಪಿ. ಪ್ರಭುಶಂಕರ್‌, ತೋಂಟದಾರ್ಯ, ಮಾಜಿ ಸದಸ್ಯ ಶೇಷಾದ್ರಿ, ಗ್ರಾಪಂ ಸದಸ್ಯರಾದ ಉಮೇಶ್‌, ಬಾಲಾಜಿ, ಮಾಜಿ ಸದಸ್ಯ ಪುಟ್ಟರಾಜು, ತಾಲೂಕು ಜೆಡಿಎಸ್‌ ವಕ್ತಾರ ಕೆ.ಎಲ್‌. ರಮೇಶ್‌, ಪ್ರಧಾನ ಕಾರ್ಯದರ್ಶಿ ಮಹೇಶ್‌, ಮುಖಂಡರಾದ ಕೆ.ಸಿ. ಲೋಕೇಶ್‌, ಗಣೇಶ್‌ ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ಬೋರಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರು

ಚಿಕ್ಕಮಗಳೂರು (ಡಿ.16): ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ಅಂತರ್ಜಲ ಚಿಮ್ಮಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಚಿಕ್ಕದೇವನೂರು ಗ್ರಾಮದಲ್ಲಿ ನಡೆದಿದೆ. ಸತತ ಬರಗಾಲದಿಂದಾಗಿ ಒಣಗದ್ದ ಕೊಳವೆಬಾವಿಯೊಂದರಲ್ಲಿ ನೀರು ಚಿಮ್ಮುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. 

ಜಿಲ್ಲೆಯ ಕಡೂರು ತಾಲ್ಲೂಕಿನ ಚಿಕ್ಕದೇವನೂರು ಗ್ರಾಮದ ಶೇಖರಪ್ಪ ಎಂಬುವವರ ಜಮೀನಿನಲ್ಲಿದ್ದ ಹಳೆಯ 150 ಅಡಿ ಆಳದ ಕೊಳವೆ ಬಾವಿಯು ಸುಧೀರ್ಘ ಬರಗಾಲದಿಂದಾಗಿ ಬತ್ತಿ ಹೋಗಿತ್ತು. ಈ ವರ್ಷ ಭಾರೀ ಮಳೆಯಾದ ಹಿನ್ನೆಲೆಯಲ್ಲಿ ತೆಂಗಿನ ತೋಟ ಉಳಿಸಿಕೊಳ್ಳುವ ಅನಿವಾರ್ಯತೆಯಿಂದ ನಿನ್ನೆ ಹಳೆಯ ಕೊಳವೆ ಬಾವಿ ಪಕ್ಕದಲ್ಲಿ ಹೊಸದಾಗಿ ಮತ್ತೊಂದು ಕೊಳವೆಬಾವಿ ಕೊರೆಸಲು ಮುಂದಾದಾಗ ಕೇವಲ 50 ಅಡಿಗೆ ನೀರು ಕಾಣಿಸಿಕೊಂಡಿದ್ದು, ಪಕ್ಕದಲ್ಲಿದ್ದ ಹಳೆಯ ಕೊಳವೆಬಾವಿಯಲ್ಲಿ ನೀರು ಬಾನೆತ್ತರಕ್ಕೆ ಚಿಮ್ಮುತ್ತಿದ್ದು ನಿರಂತರವಾಗಿ ಮುಂದುವರೆದಿತ್ತು.

Chikkamagaluru: ಸಾಗುವಳಿ ಚೀಟಿ ನಂಬರ್ ಬಳಸಿ ಅಕ್ರಮ: ರೆವಿನ್ಯೂ ಇನ್‌ಸ್ಪೆಕ್ಟರ್ ಬಂಧನ

ಕಳೆದ ಎರಡು ವರ್ಷಗಳಿಂದ ಬರದ ತವರು ಕಡೂರಲ್ಲಿ ಸಮೃದ್ಧ ಮಳೆ: ಶಾಶ್ವತ ಬರಗಾಲ ಪೀಡಿತ ಪ್ರದೇಶ ಎನ್ನುವ ಹಣೆಪಟ್ಟಿಯನ್ನು ಹೊಂದಿದ್ದ ಕಡೂರು ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷಗಳಿಂದ ಸಮೃದ್ಧ ಮಳೆಯಾಗಿದೆ. ಇದರಿಂದ ಅಂರ್ತಜಲ ವೃದ್ದಿಯಾಗಿರುವುದು ಈ ಘಟನೆ ಸಾಕ್ಷಿಯಾಗಿದೆ. ಹೊಸ ಬೋರ್ ಕೊರೆಯುವಾಗ ಹಳೇ ಬೋರಲ್ಲಿ ಮುಗಿಲೆತ್ತರಕ್ಕೆ ಚಿಮ್ಮಿದ ನೀರಿನಿಂದ ಹೊಸ ಬೋರ್ ಕೇವಲ 200 ಅಡಿ ಕೊರೆಯುವಷ್ಟರಲ್ಲಿ ಬೋರ್ವೆಲ್ ಲಾರಿಯವರು ಹರಸಾಹಸಪಟ್ಟಿದ್ದು, ಜಮೀನು ಮಾಲೀಕ ಶೇಖರಪ್ಪ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರುಗಳ ಮುಖದಲ್ಲಿ ಮಂದಹಾಸ ಮೂಡಿದೆ. ಇನ್ನೂ ಹಳೆಯ ಬೋರ್ವೆಲ್ ಕೇಸಿಂಗ್ ಪೈಪ್ ಅನ್ನು ಬಂದ್ ಮಾಡಿ ನಂತರ ಕೊರೆಯಲು ಆರಂಭಿಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ನನ್ನ ಅಭಿವೃದ್ಧಿ ಕಾರ್ಯ ಕಣ್ಣಿದ್ದವರು ನೋಡುತ್ತಾರೆ: ಸಿ.ಟಿ.ರವಿ

ಸತತ ಬರಗಾಲದಿಂದಾಗಿ ನಮ್ಮ ತೋಟದಲ್ಲಿದ್ದ ಬೋರ್ಗಳು ನೀರಿಲ್ಲದೆ ಒಣಗಿ ಹೋಗಿದ್ದವು, 3 ವರ್ಷಗಳ ಹಿಂದೆ ಸಾವಿರ ಅಡಿ ಕೊರೆಯಿಸಿದರೂ ನೀರು ಸಿಗುತ್ತಿರಲಿಲ್ಲ, ಕಳೆದ ವರ್ಷ ಮತ್ತು ಈ ವರ್ಷ ಅರಕೆರೆ ಕೆರೆ, ನಮ್ಮ ದೇವನೂರು ಕೆರೆ ತುಂಬಿರುವುದರಿಂದ ಕೇವಲ 50 ಅಡಿಗೆ ನೀರು ಸಿಗುತ್ತಿರುವುದು ನಮ್ಮ ಪುಣ್ಯ. ಹಳೆಯ ಕೊಳವೆ ಬಾವಿಯಲ್ಲಿ ಲಾರಿಗಿಂತಲೂ ಎತ್ತರಕ್ಕೆ ನೀರು ಚಿಮ್ಮುತ್ತಿದ್ದು ಅದನ್ನು ನೋಡಲು ತಂಡೋಪತಂಡವಾಗಿ ಜನಸಾಗರ ಹರಿದುಬಂದಿತ್ತು. ಒಟ್ಟಾರೆ ಬರಪೀಡಿತ ಪ್ರದೇಶದಲ್ಲಿ ಸಮೃದ್ದಿ ಮಳೆಯಿಂದ ರೈತರಲ್ಲೂ ಹರ್ಷ ಮೂಡಿಸಿದ್ದು ಲಕ್ಷಾಂತರ ರೂಪಾಯಿ ಬೋರ್ ಗಾಗಿ ಖರ್ಚು ಮಾಡುತ್ತಿದ್ದ ರೈತರು ಇದೀಗ ಕಡಿಮೆ ವೆಚ್ಚದಲ್ಲಿ ನೀರಾವರಿ ಸೌಲಭ್ಯ ಪಡೆಯುವ ಮೂಲಕ ಕೃಷಿಯಲ್ಲಿ ಆರ್ಥಿಕವಾಗಿ ಸದೃಡವಾಗಲು ಸಹಕಾರಿಯಾಗುತ್ತಿದೆ.

click me!