ಮೈಲಾರಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿ 36,85,930 ಭಕ್ತರ ಕಾಣಿಕೆಯಿಂದ ಸಂಗ್ರಹ| ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನ| 2019 ಸೆಪ್ಟೆಂಬರ್ 30ರಿಂದ 17, ಜನವರಿ 2020 ರವರೆಗೆ ಈ ಹಣ ಸಂಗ್ರಹ|
ಹೂವಿನಹಡಗಲಿ(ಜ.20): ತಾಲೂಕಿನ ಮೈಲಾರಲಿಂಗೇಶ್ವರ ದೇವಸ್ಥಾನದ ಹುಂಡಿಯಲ್ಲಿ 36,85,930 ಭಕ್ತರ ಕಾಣಿಕೆಯಿಂದ ಸಂಗ್ರಹವಾಗಿದೆ ಎಂದು ದೇವಸ್ಥಾನದ ಕಾರ್ಯ ನಿರ್ವಾಹಕಾಧಿಕಾರಿ ಯು.ಎಚ್. ಪ್ರಕಾಶ ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಕಡೆಗಳಲ್ಲಿ ಇಡಲಾಗಿದ್ದ 8 ಹುಂಡಿಗಳಲ್ಲಿ ಸಂಗ್ರಹವಾಗಿರುವ ಹಣ ಎಣಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್, ಧಾರ್ಮಿಕ ದತ್ತಿ ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿ ಯು.ಎಚ್. ಪ್ರಕಾಶರಾವ್, ಅಧೀಕ್ಷಕ ಮಲ್ಲಪ್ಪ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಸಹಾಯಕ ವ್ಯವಸ್ಥಾಪಕ ಪಿ.ಎ. ಮನ್ನಂಗಿ, ಬಸವರಾಜಪ್ಪ ಒಡೆಯರ್, ಮುಖಂಡರಾದ ಜಗದೀಶಗೌಡ, ಮಾಲತೇಶ, ಶಂಕರಗೌಡ ಸೇರಿದಂತೆ ಇತರರಿದ್ದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
2019 ಸೆಪ್ಟೆಂಬರ್ 30ರಿಂದ 17, ಜನವರಿ 2020 ರವರೆಗೆ ಈ ಹಣ ಸಂಗ್ರಹವಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದ್ದಾರೆ.