* 690 ಮಂದಿ ಚೇತರಿಕೆ
* ಶೇ.1.82 ಪಾಸಿಟಿವಿಟಿ ದರ ದಾಖಲು
* 4408 ಸಕ್ರಿಯ ಪ್ರಕರಣಗಳು
ಬೆಂಗಳೂರು(ಫೆ.25): ನಗರದಲ್ಲಿ ಗುರುವಾರ 353 ಮಂದಿಯಲ್ಲಿ ಕೋವಿಡ್(Covid-19) ಪತ್ತೆಯಾಗಿದೆ. 14 ಮಂದಿ ಮರಣವನ್ನಪ್ಪಿದ್ದಾರೆ. 690 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್ ಪೀಡಿತರಲ್ಲಿ 222 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 16 ಮಂದಿ ವೆಂಟಿಲೇಟರ್ ಸಹಿತ ತೀವ್ರ ನಿಗಾ ವಿಭಾಗ, 61 ಮಂದಿ ತೀವ್ರ ನಿಗಾ ವಿಭಾಗ, 17 ಮಂದಿ ಎಚ್‌ಡಿಯು ಮತ್ತು 128 ಮಂದಿ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ.
25,195 ಕೋವಿಡ್ ಪರೀಕ್ಷೆ(Covid Test) ನಡೆದಿದ್ದು ಶೇ.1.82 ಪಾಸಿಟಿವಿಟಿ ದರ(Positivity Rate) ದಾಖಲಾಗಿದೆ. ಕಂಟೈನ್ಮೆಂಟ್ ವಲಯಗಳ ಸಂಖ್ಯೆ 8ಕ್ಕೆ ಕುಸಿದಿದೆ. ನಗರದಲ್ಲಿ ಈವರೆಗೆ 17.77 ಲಕ್ಷ ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದ್ದು 17.56 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 4,408 ಸಕ್ರಿಯ ಪ್ರಕರಣಗಳಿವೆ. 16,871 ಮಂದಿ ಮರಣವನ್ನಪ್ಪಿದ್ದಾರೆ. 36,048 ಮಂದಿ ಕೋವಿಡ್ ಲಸಿಕೆ(Vaccine) ಪಡೆದಿದ್ದಾರೆ. 1,959 ಮಂದಿ ಮೊದಲ ಡೋಸ್, 31,204 ಮಂದಿ ಎರಡನೇ ಡೋಸ್ ಮತ್ತು 2,885 ಮಂದಿ ಮುನ್ನೆಚ್ಚರಿಕೆ ಡೋಸ್(Booster Dose) ಪಡೆದಿದ್ದಾರೆ. ಬಿಬಿಎಂಪಿ(BBMP)ವ್ಯಾಪ್ತಿಯಲ್ಲಿ ಈವರೆಗೆ 1.77 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.
undefined
Omicron Silent Killer: ಸೋಂಕಿಗೆ ತುತ್ತಾಗಿ 25 ದಿನವಾದರೂ ಇನ್ನೂ ಸುಧಾರಿಸಿಕೊಳ್ಳುತ್ತಿದ್ದೇನೆ: CJI NV Ramana
ಕೋವಿಡ್ ಭಾರಿ ಇಳಿಕೆ: ನಿನ್ನೆ ಕೇವಲ 588 ಕೇಸ್
ಬೆಂಗಳೂರು: ರಾಜ್ಯದಲ್ಲಿ(Karnataka) ಗುರುವಾರ 588 ಮಂದಿಯಲ್ಲಿ ಕೊರೋನಾ(Coronavirus) ಸೋಂಕು ಪತ್ತೆಯಾಗಿದೆ. 19 ಮಂದಿ ಮೃತರಾಗಿದ್ದಾರೆ(Death). 2022ರ ಸಾಲಿನ ಕನಿಷ್ಠ ಪ್ರಕರಣ ಮತ್ತು ಅತ್ಯಂತ ಕಡಿಮೆ ಪಾಸಿಟಿವಿಟಿ ದರ (ಶೇ.0.84) ಗುರುವಾರ ದಾಖಲಾಗಿದೆ.
ಕಳೆದ ಡಿಸೆಂಬರ್ 29ಕ್ಕೆ 566 ಪ್ರಕರಣ ದಾಖಲಾದ ಬಳಿಕದ ಕನಿಷ್ಠ ಪ್ರಕರಣ ಇದಾಗಿದೆ. 1692 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ 8,255ಕ್ಕೆ ಇಳಿದಿದೆ. 69,388 ಕೋವಿಡ್ ಪರೀಕ್ಷೆ ನಡಿದಿದೆ.
ಬೆಂಗಳೂರು(Bengaluru) ನಗರದಲ್ಲಿ 353, ಮೈಸೂರು 28, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಲಾ 23, ಬೆಳಗಾವಿ 18, ಕೊಡಗು ಮತ್ತು ಉಡುಪಿ ಜಿಲ್ಲೆಯಲ್ಲಿ ತಲಾ 15, ಬಳ್ಳಾರಿ 14, ಕಲಬುರಗಿ 11 ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೊಪ್ಪಳದಲ್ಲಿ ಹೊಸ ಪ್ರಕರಣ ವರದಿಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಒಂದಂಕಿಯಲ್ಲಿ ಪ್ರಕರಣ ದಾಖಲಾಗಿದೆ.
Corona Crisis: ಕೋವಿಡ್ ಆಸ್ಪತ್ರೆಗಳಲ್ಲಿ ಇದೀಗ ಕೋವಿಡೇತರರಿಗೂ ಚಿಕಿತ್ಸೆ
ಬೆಂಗಳೂರು ನಗರದಲ್ಲಿ 14 ಮಂದಿ ಮೃತರಾಗಿದ್ದು, ಕಲಬುರಗಿ, ಕೊಡಗು, ಧಾರವಾಡ, ದಕ್ಷಿಣ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.39 ಲಕ್ಷ ಮಂದಿಯಲ್ಲಿ ಕೋವಿಡ್ ಪತ್ತೆಯಾಗಿದ್ದು 38.91 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 39,885 ಮಂದಿ ಮರಣವನ್ನಪ್ಪಿದ್ದಾರೆ. 37 ಸೋಂಕಿತರು ಅನ್ಯ ಕಾರಣದಿಂದ ಅಸುನೀಗಿದ್ದಾರೆ.
1.05 ಲಕ್ಷ ಜನರಿಗೆ ಲಸಿಕೆ:
ಗುರುವಾರ 1.05 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. 6,298 ಮಂದಿ ಮೊದಲ ಡೋಸ್, 93,225 ಮಂದಿ ಎರಡನೇ ಡೋಸ್ ಮತ್ತು 6,372 ಮಂದಿ ಮುನ್ನೆಚ್ಚರಿಕಾ ಡೋಸ್ ಪಡೆದಿದ್ದಾರೆ. ಈವರೆಗೆ ಒಟ್ಟು 5.21 ಕೋಟಿ ಮೊದಲ ಡೋಸ್, 4.70 ಕೋಟಿ ಎರಡನೇ ಮತ್ತು 11.71 ಲಕ್ಷ ಮಂದಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದಿದ್ದಾರೆ. ಈವರೆಗೆ ಒಟ್ಟು 10.03 ಕೋಟಿ ಡೋಸ್ ಲಸಿಕೆ ನೀಡಲಾಗಿದೆ.