ಬಳ್ಳಾರಿ ಜಿಲ್ಲೆಯಲ್ಲಿ ಮತ್ತೆ ಕೊರೋನಾ ಸ್ಫೋಟ: ಬೆಚ್ಚಿಬಿದ್ದ ಜನತೆ

By Kannadaprabha News  |  First Published Jun 28, 2020, 9:47 AM IST

ಒಂದೇ ದಿನದಲ್ಲಿ 35 ಪ್ರಕರಣಗಳು| ಹೊಸಪೇಟೆ, ಬಳ್ಳಾರಿ, ಸಂಡೂರಿನಲ್ಲಿ ಹೆಚ್ಚಿದ ಪ್ರಕರಣಗಳು| ರಾಜ್ಯ ಸರ್ಕಾರ ಜಿಂದಾಲ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರು| ಶನಿವಾರ 224 ಜನರ ಗಂಟಲುದ್ರವ ತೆಗೆದು ವೈದ್ಯಕೀಯ ಪರೀಕ್ಷೆಗೆ ರವಾನೆ| ಕೊರೋನಾ ಸೋಂಕಿತ 344 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ| ಇನ್ನು 362 ಜನರ ಗಂಟಲುದ್ರವದ ವೈದ್ಯಕೀಯ ವರದಿ ಬರಬೇಕಾಗಿದೆ|


ಬಳ್ಳಾರಿ(ಜೂ.28): ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಶನಿವಾರ ಮತ್ತೆ ಕೊರೋನಾ ಪ್ರಕರಣಗಳ ಸ್ಫೋೕಟವಾಗಿದೆ! ಒಂದೇ ದಿನ 35 ಪ್ರಕರಣಗಳು ಬೆಳಕಿಗೆ ಬಂದಿದ್ದು ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ದಿನದಿನಕ್ಕೆ ಏರಿಕೆಯ ಕ್ರಮಾಂಕದಲ್ಲಿದೆ. ಈ ವರೆಗೆ ಜಿಲ್ಲೆಯಲ್ಲಿ ಒಟ್ಟು 645 ಜನರಿಗೆ ಸೋಂಕು ಹರಡಿದಂತಾಗಿದೆ. ಶನಿವಾರ ಪತ್ತೆಯಾದ ಪ್ರಕರಣಗಳಲ್ಲಿ ಹೊಸಪೇಟೆ, ಬಳ್ಳಾರಿ ಹಾಗೂ ಸಂಡೂರಿನವು ಹೆಚ್ಚಾಗಿವೆ.

ಸಂಡೂರಿನ 6 ವರ್ಷದ ಹಾಗೂ ಹೊಸಪೇಟೆಯ 7 ವರ್ಷದ ಬಾಲಕನಿಗೂ ಕೊರೋನಾ ಸೋಂಕು ತಗಲಿದ್ದು, 18ರಿಂದ 35 ವರ್ಷದೊಳಗಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸಂಡೂರು 8, ಹೊಸಪೇಟೆ 10, ಬಳ್ಳಾರಿ 16 ಹಾಗೂ ಕೂಡ್ಲಿಗಿಯ 1 ವರ್ಷದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ. ಶನಿವಾರ ಪತ್ತೆಯಾದ ಪ್ರಕರಣಗಳಲ್ಲಿ ಜಿಂದಾಲ್‌ಗೆ ಸೇರಿದ 7 ಪ್ರಕರಣಗಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಉಳಿದ ಸೋಂಕಿತರ ಪ್ರಥಮ ಸಂಪರ್ಕಿತರ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ. ಶನಿವಾರ 224 ಜನರ ಗಂಟಲುದ್ರವ ತೆಗೆದು ವೈದ್ಯಕೀಯ ಪರೀಕ್ಷೆಗೆ ಕಳಿಸಲಾಗಿದೆ. ಕೊರೋನಾ ಸೋಂಕಿತ 344 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 362 ಜನರ ಗಂಟಲುದ್ರವದ ವೈದ್ಯಕೀಯ ವರದಿ ಬರಬೇಕಾಗಿದೆ.

Tap to resize

Latest Videos

ಬಳ್ಳಾರಿ: ಕೊರೋನಾಗೆ ಮತ್ತೊಂದು ಬಲಿ, ಒಂದೇ ದಿನ ಹೊಸ 47 ಪಾಸಿಟಿವ್‌ ಕೇಸ್‌

ಸಾರ್ವಜನಿಕರಲ್ಲಿ ಆತಂಕ:

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಸೋಂಕಿನಿಂದ ಸಾರ್ವಜನಿಕರು ಭಯಭೀತರಾಗಿದ್ದಾರೆ. ಮರಣ ಪ್ರಮಾಣದ ಏರಿಕೆ ಜನರಲ್ಲಿ ಮತ್ತಷ್ಟುಆತಂಕವನ್ನು ಸೃಷ್ಟಿಸಿದೆ. ಜಿಲ್ಲೆಯಲ್ಲಿ ಈ ವರೆಗೆ 9 ಜನರು ಕೊರೋನಾ ಸೋಂಕಿತರು ಮರಣ ಹೊಂದಿದ್ದಾರೆ. ಜಿಂದಾಲ್‌ನಿಂದಾಗಿಯೇ ಜಿಲ್ಲೆಯಲ್ಲಿ ಸೋಂಕು ಹೆಚ್ಚುತ್ತಿದೆ ಎಂಬ ಆತಂಕದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಬಳ್ಳಾರಿ, ಹೊಸಪೇಟೆ, ಸಂಡೂರು ಸೇರಿದಂತೆ ಅನೇಕ ಪ್ರದೇಶಗಳಿಂದ ಜಿಂದಾಲ್‌ಗೆ ತೆರಳಿ ಕೆಲಸ ಮಾಡುತ್ತಿದ್ದ ನೌಕರರಿಗೆ ಕೊರೋನಾ ಸೋಂಕು ಆವರಿಸಿಕೊಳ್ಳುತ್ತಿದ್ದು, ಇದು ಜಿಲ್ಲೆಯ ನಾನಾ ಕಡೆ ಹರಡಲು ಕಾರಣವಾಗುತ್ತಿದೆ. ಇಷ್ಟಾಗಿಯೂ ರಾಜ್ಯ ಸರ್ಕಾರ ಜಿಂದಾಲ್‌ನಲ್ಲಿ ಸೋಂಕು ನಿಯಂತ್ರಣಕ್ಕೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗುತ್ತಿವೆ.
 

click me!