ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಜೂ.28 ರ ಮಧ್ಯಾಹ್ನದ ಬಳಿಕ ಸ್ವಯಂ ಘೋಷಿತ ಲಾಕ್‌ಡೌನ್ ನಡೆಸಲು ನಿರ್ಧರಿಸಲಾಗಿದ್ದು, ಜು.10 ರ ತನಕ ಇರಲಿದೆ ಎಂದು ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಪ್ರಕಟಿಸಿದರು.
ಗುಂಡ್ಲುಪೇಟೆ(ಜೂ.28): ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಹಿನ್ನೆಲೆ ಜೂ.28 ರ ಮಧ್ಯಾಹ್ನದ ಬಳಿಕ ಸ್ವಯಂ ಘೋಷಿತ ಲಾಕ್‌ಡೌನ್ ನಡೆಸಲು ನಿರ್ಧರಿಸಲಾಗಿದ್ದು, ಜು.10 ರ ತನಕ ಇರಲಿದೆ ಎಂದು ಶಾಸಕ ಸಿ.ಎಸ್.ನಿರಂಜನ್‌ಕುಮಾರ್ ಪ್ರಕಟಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಎಲ್.ಸುರೇಶ್ ಹಾಗು ಕನ್ನಡಪರ ಸಂಘಟನೆಗಳ ಆಯೋಜಿಸಿದ್ದ ಸಭೆಯಲ್ಲಿ ವಿವಿಧ ಮುಖಂಡರ ಅಭಿಪ್ರಾಯ ಬಳಿಕ ಮಾತನಾಡಿದರು.
ಸೂರ್ಯನ ಹತ್ತು ವರ್ಷದ ವಿಡಿಯೋ ಒಂದೇ ತಾಸಲ್ಲಿ ನೋಡಿ!
ಗುಂಡ್ಲುಪೇಟೆಯಲ್ಲಿ ಇಂದಿನ ತನಕ 18 ಪಾಟಿಸಿವ್ ಕೇಸುಗಳು ಬಂದಿವೆ. ಇದರಿಂದ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ವಹಿವಾಟು ನಡೆಯಲಿದ್ದು, 3 ಗಂಟೆಯ ಬಳಿಕ ಸಂಪೂರ್ಣ ಲಾಕ್‌ಡೌನ್‌ಗೆ ಇರಲಿದ್ದು, ಜನರು ಸಹಕರಿಸಿ. ಲಾಕ್‌ಡೌನ್ ಮಾಡುವ ಉದ್ದೇಶ ಈ ಸಭೆಯ ಉದ್ದೇಶವಲ್ಲ.ಆದರೆ ಕೊರೋನಾ ವೈರಸ್ ವ್ಯಾಪಿಸದಂತೆ ತಡೆಯಲು ಜನರಲ್ಲಿ ಜಾಗೃತಿಗಾಗಿ ಸ್ವಯಂ ಘೋಷಿತ ಲಾಕ್‌ಡೌನ್ ಮಾಡಲಾಗುತ್ತಿದೆ ಎಂದರು.
ಜಿಲ್ಲೆಯ ಕೊರೋನಾ ಪ್ರಯೋಗಾಲಯವೇ ಸೀಲ್‌ಡೌನ್!
ಸಭೆಯಲ್ಲಿ ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ತಾಪಂ ಅಧ್ಯಕ್ಷ ಎಸ್.ಎಸ್.ಮಧುಶಂಕರ್, ಸಭೆಯ ಆಯೋಜಕ ಎಲ್.ಸುರೇಶ್, ಬಿಜೆಪಿ ಮಂಡಲ ಅಧ್ಯಕ್ಷ ಡಿ.ಪಿ.ಜಗದೀಶ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎನ್.ಮಲ್ಲೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಪಿ.ಗಿರೀಶ್, ರಮೇಶ್, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಪಿ.ಸುನೀಲ್, ಎಪಿಎಂಸಿ ಅಧ್ಯಕ್ಷ ಬೆಂಡಗಳ್ಳಿಮಾದಪ್ಪ, ಜಿಪಂ ಮಾಜಿ ಅಧ್ಯಕ್ಷ ಎಸ್.ಶಿವಬಸಪ್ಪ, ರೈತಸಂಘದ ಕಡಬೂರುಮಂಜು, ಕುಂದಕೆರೆಸಂಪತ್ತು, ಪುರಸಭೆ ಸದಸ್ಯ ಎನ್.ಕುಮಾರ್ ಇನ್ನಿತರರು ಇದ್ದರು.