ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ 34,374 ಕ್ಯುಸೆಕ್‌ ನೀರು

By Kannadaprabha NewsFirst Published Jul 12, 2020, 7:33 AM IST
Highlights

ಶನಿವಾರ ಜಲಾಶಯದ ನೀರಿನ ಮಟ್ಟವು 1598.85 ಅಡಿಗಳು ಇತ್ತು ಹಾಗೂ ಜಲಾಶಯದಲ್ಲಿ 18.24 ಟಿಎಂಸಿ ನೀರು ಶೇಖರಣೆಯಾಗಿತ್ತು| ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟವು 1582.43 ಅಡಿಗಳು ಇತ್ತು|
ಜಲಾಶಯದಲ್ಲಿ ಕೇವಲ 5 ಟಿಎಂಸಿ ನೀರು ಶೇಖರಣೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 16 ಅಡಿಗಳಷ್ಟು ಅಧಿಕ ನೀರು ಸಂಗ್ರಹ|

ಮುನಿರಾಬಾದ್‌(ಜು.12): ಹೈದರಾಬಾದ್‌ ಕರ್ನಾಟಕ ರೈತರ ಜೀವನಾಡಿಯಾದ ತುಂಗಭದ್ರಾ ಜಲಾಶಯಕ್ಕೆ ಶನಿವಾರ 34,374 ಕ್ಯುಸೆಕ್‌ ನೀರು ಹರಿದು ಬಂದಿದೆ. ಇದು ಪ್ರಸಕ್ತ ಸಾಲಿನಲ್ಲಿ ಜಲಾಶಯಕ್ಕೆ ಹರಿದು ಬಂದ ಅತ್ಯಧಿಕ ನೀರಾಗಿದೆ.

ಶನಿವಾರ ಜಲಾಶಯದ ನೀರಿನ ಮಟ್ಟವು 1598.85 ಅಡಿಗಳು ಇತ್ತು ಹಾಗೂ ಜಲಾಶಯದಲ್ಲಿ 18.24 ಟಿಎಂಸಿ ನೀರು ಶೇಖರಣೆಯಾಗಿತ್ತು. ಕಳೆದ ವರ್ಷ ಇದೇ ದಿನದಂದು ಜಲಾಶಯದ ನೀರಿನ ಮಟ್ಟವು 1582.43 ಅಡಿಗಳು ಇತ್ತು. ಜಲಾಶಯದಲ್ಲಿ ಕೇವಲ 5 ಟಿಎಂಸಿ ನೀರು ಶೇಖರಣೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಲಾಶಯದಲ್ಲಿ 16 ಅಡಿಗಳಷ್ಟುಅಧಿಕ ನೀರು ಸಂಗ್ರಹವಾಗಿದೆ.

ಟಿಬಿ ಡ್ಯಾಂಗೆ ಸಮಾನಾಂತರ ಡ್ಯಾಂ: ಸಮೀಕ್ಷೆಗೆ ಸರ್ಕಾರ ಅಸ್ತು

4 ದಿನಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ 84,513 ಕ್ಯುಸೆಕ್‌ ನೀರು

ಕಳೆದ 4 ದಿನಗಳಲ್ಲಿ ತುಂಗಭದ್ರಾ ಜಲಾಶಯಕ್ಕೆ 84,513 ಕ್ಯುಸೆಕ್‌ ನೀರು ಹರಿದು ಬಂದಿದೆ. ಇದರಿಂದ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಬುಧವಾರ 7,321 ಕ್ಯುಸೆಕ್‌ ನೀರು, ಗುರುವಾರ 16,211 ಕ್ಯುಸೆಕ್‌ ನೀರು, ಶುಕ್ರವಾರ 26,607 ಕ್ಯುಸೆಕ್‌ ನೀರು ಹಾಗೂ ಶನಿವಾರ ಜಲಾಶಯಕ್ಕೆ 34,374 ಕ್ಯುಸೆಕ್‌ ನೀರು ಹರಿದು ಬಂದು 4 ದಿನಗಳಲ್ಲಿ ಜಲಾಶಯಕ್ಕೆ 84,513 ಕ್ಯುಸೆಕ್‌ ನೀರು ಹರಿದು ಬಂದಿರುತ್ತದೆ.
 

click me!