ನಗರದಲ್ಲಿ 30,000 ಹಾಸಿಗೆ ವ್ಯವಸ್ಥೆಗೆ ಯೋಜನೆ: ಡಿಸಿಎಂ

By Kannadaprabha NewsFirst Published Jul 28, 2020, 7:27 AM IST
Highlights

ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಆರೈಕೆಗೆ 20,000ದಿಂದ 30,000 ಹಾಸಿಗೆ ವ್ಯವಸ್ಥೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಇದರ ಭಾಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) 6,500 ಹಾಸಿಗೆ ಆರೈಕೆ ಕೇಂದ್ರವನ್ನು ಮೊದಲ ಹಂತದಲ್ಲಿ ಚಾಲನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಬೆಂಗಳೂರು(ಜು.28): ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಆರೈಕೆಗೆ 20,000ದಿಂದ 30,000 ಹಾಸಿಗೆ ವ್ಯವಸ್ಥೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿದ್ದು, ಇದರ ಭಾಗವಾಗಿ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) 6,500 ಹಾಸಿಗೆ ಆರೈಕೆ ಕೇಂದ್ರವನ್ನು ಮೊದಲ ಹಂತದಲ್ಲಿ ಚಾಲನೆ ನೀಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

ಸೋಮವಾರ ಬಿಐಇಸಿಯ ಕೊರೋನಾ ಆರೈಕೆ ಕೇಂದ್ರಕ್ಕೆ ಚಾಲನೆ ನೀಡಿದ ಅವರು, ಬಿಐಇಸಿ ಸೇರಿದಂತೆ ನಗರದಲ್ಲ ಒಟ್ಟು 9 ಆರೈಕೆ ಕೇಂದ್ರವನ್ನು ಆರಂಭಿಸಲಾಗಿದೆ. ಬಿಐಇಸಿಯಲ್ಲಿ ಸೋಂಕಿನ ಲಕ್ಷಣ ಇಲ್ಲದ ಮತ್ತು ಮಧ್ಯಮ ಸೋಂಕಿನ ಲಕ್ಷಣ ಇರುವ ಸೋಂಕಿತರಿಗೆ ಆರೈಕೆ ನೀಡಲಾಗುತ್ತಿದೆ.

ಕೊರೋನಾ ವರದಿ ಕೇಳದೆ ಆಸ್ಪತ್ರೆಗೆ ದಾಖಲಿಸಿಕೊಳ್ಳಿ: ಸರ್ಕಾರ ಖಡಕ್‌ ಆದೇಶ

ಅವಶ್ಯಕತೆಗೆ ಅನುಗುಣವಾಗಿ ಹಾಸಿಗೆ ಸಂಖ್ಯೆ ಏರಿಸಲಾಗುವುದು. ಬಿಐಇಸಿಯಲ್ಲಿ 10,000 ಹಾಸಿಗೆ ವರೆಗೆ ವ್ಯವಸ್ಥೆ ಮಾಡುವುದಕ್ಕೆ ಅವಕಾಶವಿದೆ ಎಂದು ತಿಳಿಸಿದರು. ಇನ್ನು ಅರಮನೆ ಮೈದಾನ, ಪೊಲೀಸ್‌ ಕಾಲೋನಿ, ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ವಿವಿಧ ಕಡೆ ಆರಂಭಿಸುವ ಯೋಜನೆ ಇದೆ. ಮನೆಯಲ್ಲಿ ಆರೈಕೆಗೆ ಅವಕಾಶ ನೀಡಲಾಗಿದೆ ಎಂದರು.

24 ಗಂಟೆಯಲ್ಲಿ ಫಲಿತಾಂಶ:

ದಿನಕ್ಕೆ ಒಟ್ಟು 23 ಸಾವಿರ ಕೊರೋನಾ ಪರೀಕ್ಷೆ ನಡೆಸುವ ಸಾಮರ್ಥ್ಯ ಇದೆ. ಪ್ರತಿದಿನ 20 ಸಾವಿರ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸುತ್ತಿದ್ದೇವೆ. 24 ಗಂಟೆಯಲ್ಲಿ ಪರೀಕ್ಷಾ ಫಲಿತಾಂಶ ದೊರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. ಈ ಹಿಂದೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಮಾಣ ಮಾದರಿ ಸಂಗ್ರಹಿಸಿದ ಪರಿಣಾಮ ವರದಿ ವಿಳಂಬವಾಗುತ್ತಿತ್ತು.

ಬೆಂಗಳೂರು: 50 ವರ್ಷದ ಹಳೆಯ ಪ್ರತಿಷ್ಠಿತ ಬೇಕರಿ ಮಾಲೀಕ ಕೊರೋನಾಗೆ ಬಲಿ

ಇದೀಗ ವ್ಯವಸ್ಥೆ ಸರಿಪಡಿಸಲಾಗಿದೆ. ಇನ್ನು ಅರ್ಧ ಗಂಟೆಯಲ್ಲಿ ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ಫಲಿತಾಂಶ ನೀಡಲಾಗುತ್ತಿದೆ. 3 ಲಕ್ಷ ರಾರ‍ಯಪಿಡ್‌ ಆ್ಯಂಟಿಜೆನ್‌ ಪರೀಕ್ಷೆ ನಡೆಸಲು ಕಿಟ್‌ ನೀಡಲಾಗಿದೆ. ಇನ್ನು ಎರಡು ಲಕ್ಷ ಕಿಟ್‌ ವಿತರಣೆ ಮಾಡಲಾಗುವುದು. ತದ ನಂತರ ಮತ್ತೆ 5 ಲಕ್ಷ ಪರೀಕ್ಷೆ ನಡೆಸಲಾಗುವುದು ಎಂದು ವಿವರಿಸಿದರು.

ಕೊರೋನಾ ಬಂದ ಮೇಲೆ 1000 ಹೊಸ ವೆಂಟಿಲೇಟರ್‌

ಕೊರೋನಾ ಸೋಂಕು ಆರಂಭವಾದ ಮೇಲೆ ರಾಜ್ಯದಲ್ಲಿ ಒಂದು ಸಾವಿರ ಹೊಸ ವೆಂಟಿಲೇಟರ್‌ ಹಾಗೂ ಐದು ಸಾವಿರ ಆಕ್ಸಿಜನ್‌ ಸೌಲಭ್ಯ ಇರುವ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ. ಸಿಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಸೋಂಕು ಆರಂಭವಾದ ಮೇಲೆ ರಾಜ್ಯಾದ್ಯಂತ ಒಂದು ಸಾವಿರ ವೆಂಟಿಲೇಟರ್‌, ಐಸಿಯು, ಸಿಪಾಪ್‌, ಬೈಪಾಪ್‌ ಹಾಗೂ ಐದು ಸಾವಿರ ಆಕ್ಸಿಜನ್‌ ಸೌಲಭ್ಯ ಇರುವ ಹಾಸಿಗೆಯನ್ನು ಸೇರ್ಪಡೆ ಮಾಡಲಾಗಿದೆ.

ಐಜಿಪಿ ರೂಪಾ ಖಡಕ್‌ ವಾರ್ನಿಂಗ್‌ ಬೆಚ್ಚಿದ ಖಾಸಗಿ ಆಸ್ಪತ್ರೆ: 24 ಲಕ್ಷ ರೂ. ವಾಪಸ್!

ಇನ್ನೂ ಹೆಚ್ಚಾಗಿ ಆಕ್ಸಿಜನ್‌ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಲ್ಲಿ ಆರೋಗ್ಯ ವ್ಯವಸ್ಥೆ, ಸಿಬ್ಬಂದಿ, ಹಾಸಿಗೆ ವ್ಯವಸ್ಥೆ ಸುಸಜ್ಜಿತವಾಗಿದೆ. ಗ್ರಾಮ ಪಂಚಾಯತಿಯಿಂದ ನಗರದವರೆಗೆ ಮಾಹಿತಿ ಸಂಗ್ರಹಣೆ ಮಾಡಿ ಎಲ್ಲ ಕಡೆ ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

click me!