ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುಗೆರೋಡಿಯ ಮೂರು ವರ್ಷದ ಬಾಲಕ ಪೃಥ್ವಿರಾಜ್, 30 ಕಂಪನಿಗಳನ್ನು ಅವುಗಳ ಲೋಗೋಗಳ ಮೂಲಕ ಗುರುತಿಸಿ ವಿಶಿಷ್ಟದಾಖಲೆ ಮಾಡಿದ್ದಾನೆ.
ಸುಳ್ಯ(ಜು.11): ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಮುಗೆರೋಡಿಯ ಮೂರು ವರ್ಷದ ಬಾಲಕ ಪೃಥ್ವಿರಾಜ್, 30 ಕಂಪನಿಗಳನ್ನು ಅವುಗಳ ಲೋಗೋಗಳ ಮೂಲಕ ಗುರುತಿಸಿ ವಿಶಿಷ್ಟದಾಖಲೆ ಮಾಡಿದ್ದಾನೆ.
2 ವರ್ಷ 11 ತಿಂಗಳಿನಲ್ಲಿ ಈ ಸಾಧನೆ ಮಾಡಿದ್ದು, ಇದು ಈಗ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ದಾಖಲಾಗಿದೆ. ಈ ಅಪೂರ್ವ ಸಾಧನೆಗಾಗಿ ಬಾಲಕನಿಗೆ ಪ್ರಮಾಣಪತ್ರ ಹಾಗೂ ಮೆಡಲ್ ನೀಡಿ ಗೌರವಿಸಲಾಗಿದೆ. ಈತ ರತ್ನಾಕರ ಮುಗೆರೋಡಿ ಹಾಗೂ ಹರ್ಷಿತಾ ಪ್ರಿಯಂವದಾ ದಂಪತಿ ಪುತ್ರನಾಗಿದ್ದು, ಪ್ರಸ್ತುತ ಎಡಮಂಗಲ ಗ್ರಾಮದಲ್ಲಿ ನೆಲೆಸಿದ್ದಾರೆ.
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಬೆಂಗಳೂರು ಬಾಲಕ
ಕೇವಲ 18 ತಿಂಗಳ ಗವ್ಯಜಿಮೂರ್ತಿ ಎನ್ನುವ ಈ ಪುಟ್ಟ ಕಂದ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಳು. ಅರೇ ಇದೇನಿದು 18 ತಿಂಗಳ ಬಾಲಕಿ ಈ ಸಾಧನೆ ಮಾಡಲು ಸಾಧ್ಯ ನಾ ಎಂದು ಅಚ್ಚರಿಯಾಗುತ್ತೆ ಅಲ್ವಾ. ಅಚ್ಚರಿ ಎನಿಸಿದರೂ ಇದು ಸತ್ಯ. ಹಾಸನ ಮೂಲದ ಗುರುಮೂರ್ತಿ ಮತ್ತು ಹೇಮಾ ದಂಪತಿಗಳ ಮಗಳಾದ ಗವ್ಯಜಿಮೂರ್ತಿ ಈ ಸಾಧನೆ ಮಾಡಿದ್ದಾಳೆ.