ಮಾನವ ಹಕ್ಕು ಆಯೋಗ ತನ್ನ ಕರ್ತವ್ಯದಿಂದ ವಿಮುಖವಾಗಿದೆ: ಶಾಸಕ ಎಚ್.ಕೆ. ಪಾಟೀಲ|ಗೌರವಯುತ ಸಂಸ್ಕಾರ, ಅಗತ್ಯ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆ, ಸಕಾಲಕ್ಕೆ ಚಿಕಿತ್ಸೆ ಇವೆಲ್ಲವೂ ಮಾನವ ಹಕ್ಕುಗಳೇ ಆದರೆ ಸರ್ಕಾರ ಇವುಗಳ ಉಲ್ಲಂಘನೆ ಮಾಡುತ್ತಲೇ ಇದೆ|
ಗದಗ(ಜು.11): ಮಾನವ ಹಕ್ಕುಗಳ ಉಲ್ಲಂಘನೆ ತಡೆದು, ಅಂತಹ ಘಟನೆ ಮರುಕಳಿಸದಂತೆ ತಡೆದು ಸರ್ಕಾರವನ್ನು ಎಚ್ಚರಿಸುವುದು ಹಾಗೂ ಉಲ್ಲಂಘನೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದು ಮಾನವ ಹಕ್ಕುಗಳ ಆಯೋಗದ ಕರ್ತವ್ಯವಾಗಿದೆ. ಆದರೆ ಪ್ರಸಕ್ತ ಕೋವಿಡ್ ಸಂದರ್ಭದಲ್ಲಿ ಆಯೋಗ ತನ್ನ ಕರ್ತವ್ಯದಿಂದ ವಿಮುಖವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಶಾಸಕ ಎಚ್.ಕೆ. ಪಾಟೀಲ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಪ್ರಸಕ್ತ ದಿನಗಳಲ್ಲಿ ಕೊರೋನಾದಿಂದ ರಾಜ್ಯ ವಿಲ ವಿಲ ಎಂದು ಒದ್ದಾಡುತ್ತಿದೆ. ಆದರೆ ಸರ್ಕಾರ ಯಾವುದೇ ಸ್ಪಷ್ಟವಾದ ನಿಲುವುಗಳಿಲ್ಲದೇ ಅಗತ್ಯ ಕ್ರಮ ಕೈಗೊಳ್ಳುವದರಲ್ಲಿ ವಿಫಲವಾಗಿದೆ. ಸೋಂಕಿತರನ್ನು ಕರೆದೊಯ್ಯಲು ಆಂಬ್ಯುಲೆನ್ಸ್‌ಗಳ ಸೇವೆ ಸರಿಯಾಗಿ ದೊರೆಯುತ್ತಿಲ್ಲ. ಇದರಿಂದ 2-3 ದಿನಗಳ ವರೆಗೆ ಸೋಂಕಿತರು ಆಸ್ಪತ್ರೆಗೆ ತೆರಳಲಾಗುತ್ತಿಲ್ಲ. ಇದಲ್ಲದೇ ಬಳ್ಳಾರಿ, ರಾಯಚೂರ, ದಾವಣಗೆರೆ, ಚಿತ್ರದುರ್ಗ ಬೆಂಗಳೂರಿನಲ್ಲಿ ಭಾವನೆಗಳಿಗೆ ಘಾಸಿಯಾಗುವ ರೀತಿ ಮೃತಪಟ್ಟ ಸೋಂಕಿತರ ಶವಸಂಸ್ಕಾರ ನಡೆದಿರುವುದು ಹೃದಯ ವಿದ್ರಾವಕ.
undefined
ಖರ್ಚಿಲ್ಲದೆ ಜಿಂಕೆ ಕಾಟ ತಪ್ಪಿಸಿಕೊಂಡ ರೈತ: ಕಾಡು ಪ್ರಾಣಿಗಳಿಗೆ ತೊಂದರೆಯಾಗದಂತೆ ಹೊಸ ಪ್ಲಾನ್..!
ಗೌರವಯುತ ಸಂಸ್ಕಾರ, ಅಗತ್ಯ ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸೇವೆ, ಸಕಾಲಕ್ಕೆ ಚಿಕಿತ್ಸೆ ಇವೆಲ್ಲವೂ ಮಾನವ ಹಕ್ಕುಗಳೇ. ಆದರೆ ಸರ್ಕಾರ ಇವುಗಳ ಉಲ್ಲಂಘನೆ ಮಾಡುತ್ತಲೇ ಇದೆ. ಹಗಲು ರಾತ್ರಿ ಈ ರೀತಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದ್ದರೂ ಆಯೋಗ ಮೂಕ ಪ್ರೇಕ್ಷಕನಾಗಿದೆಯೇ.? ಆಯೋಗ ಮಾನವ ಹಕ್ಕುಗಳ ಆಯೋಗವನ್ನು ವಿಶೇಷ ಉದ್ದೇಶಗಲಿಗೆ ಸ್ಥಾಪಿಸಲಾಗಿದ್ದು, ಜನರ ನಿರೀಕ್ಷೆಯತೆ ಕರ್ತವ್ಯ ನಿರ್ವಹಣೆಗೆ ಆಯೋಗ ಸನ್ನದ್ಧವಾಗಬೇಕು ಎಂದು ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದ್ದಾರೆ.