ತುಮಕೂರು: ಒಂದೇ ದಿನ ಆಪರೇಷನ್‌ ಆಗಿದ್ದ 3 ಮಹಿಳೆಯರು ಸಾವು ಪ್ರಕರಣ, ಪ್ರಸೂತಿ ತಜ್ಞೆ ಸೇರಿ ಮೂವರ ಅಮಾನತು

Published : Feb 27, 2024, 01:35 PM ISTUpdated : Feb 27, 2024, 02:25 PM IST
ತುಮಕೂರು: ಒಂದೇ ದಿನ ಆಪರೇಷನ್‌ ಆಗಿದ್ದ 3 ಮಹಿಳೆಯರು ಸಾವು ಪ್ರಕರಣ, ಪ್ರಸೂತಿ ತಜ್ಞೆ ಸೇರಿ ಮೂವರ ಅಮಾನತು

ಸಾರಾಂಶ

ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಕೇಂದ್ರ ಸಚಿವ ಹಾಗೂ ಈ ಭಾಗದ ಸಂಸದ ಎ.ನಾರಾಯಣಸ್ವಾಮಿ ರಾತ್ರಿ 8 ಗಂಟೆಗೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪಾವಗಡ(ಫೆ.27): ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮಹಿಳೆಯರಿಬ್ಬರು ಸಾವನ್ನಪ್ಪಿದ ಬೆನ್ನಲ್ಲೇ ಸೋಮವಾರ ಗರ್ಭಕೋಶ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ದೆಯೊಬ್ಬರು ಮೃತರಾದ ಘಟನೆ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಸರಣಿ ಸಾವು ಆತಂಕ ತಂದಿದ್ದು, ಘಟನೆಯು ಸಾರ್ವಜನಿಕರ ಆಕ್ರೋಶಕ್ಕೆ ಎಡೆ ಮಾಡಿದೆ.

ಶಸ್ತ್ರಚಿಕಿತ್ಸೆ ವೈಫಲ್ಯ ಮೂವರು ಮಹಿಳೆಯರ ಸಾವು ಪ್ರಕರಣ  ಸಂಬಂಧ ಶಸ್ತ್ರ ಚಿಕಿತ್ಸೆ ಮಾಡಿದ್ದ ವೈದ್ಯೇ ಸೇರಿ ಮೂವರನ್ನು ಅಮಾನತು ಮಾಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಡಾ ಪೂಜಾ-ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ, ಪದ್ಮಾವತಿ- ಶೂಶ್ರಷಣಾಧಿಕಾರಿ, ಹಾಗೂ ಕಿರಣ್, ಒ.ಟಿ ತಂತ್ರಜ್ಞರು, ಅಮಾನತು ಮಾಡಲಾಗಿದೆ.

ಒಂದೇ ದಿನ ಆಪರೇಷನ್‌ ಮಾಡಿಸಿಕೊಂಡ ಮೂವರು ಮಹಿಳೆಯರು ಸಾವು, ಇದೆಂಥಾ ಸರ್ಕಾರಿ ಆಸ್ಪತ್ರೆ!

ಈ ಸಂಬಂಧ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ (ಎಎಂಒ)ಡಾ,ಕಿರಣ್‌ ಸುದ್ದಿಗಾರರೊಂದಿಗೆ ಮಾತನಾಡಿ, ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ, ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತರಾದ ಬಗ್ಗೆ ಮಾಹಿತಿ ಇದೆ. ಈ ಸಂಬಂಧ ಹೆರಿಗೆ ವೈದ್ಯರಿಂದ ಮಾಹಿತಿ ಪಡೆದಿದ್ದು ಸೋಂಕಿನಿಂದ ಈ ರೀತಿ ಆಗಿರಬಹುದು. ಈ ಬಗ್ಗೆ ಹೆಚ್ಚಿನ ಪರೀಕ್ಷೆಗೆ ರಕ್ತ ಹಾಗೂ ಇತರೆ ಚಿಕಿತ್ಸೆಯ ಮೆಡಿಷನ್‌ ಲ್ಯಾಬ್‌ಗೆ ಕಳುಹಿಸಲಾಗಿದೆ. ಇದೇ ರೀತಿ ಗರ್ಭಕೋಶ ಸಮಸ್ಯೆಯಿಂದ ಬ್ಯಾಡನೂರು ನರಸಮ್ಮ ನಿಧನರಾಗಿದ್ದು, ಇವರ ಸಾವಿನ ಕಾರಣ ತಿಳಿಯಲು ಅಗತ್ಯ ಷಂಪಲ್‌ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಲ್ಯಾಬ್‌ ವರದಿ ಬಂದ ಕೂಡಲೇ ಸತ್ಯ ಹೊರಬೀಳುವುದಾಗಿ ಅವರು ತಿಳಿಸಿದ್ದಾರೆ. ಇನ್ನೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಕೇಂದ್ರ ಸಚಿವ ಹಾಗೂ ಈ ಭಾಗದ ಸಂಸದ ಎ.ನಾರಾಯಣಸ್ವಾಮಿ ರಾತ್ರಿ 8 ಗಂಟೆಗೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತುಮಕೂರು : ಕುಡಿಯುವ ನೀರಿಗಾಗಿ ಪಂಚಾಯಿತಿಗೆ ಬೀಗ

ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿ ಸಾವನ್ನಪ್ಪಿದ ಇಬ್ಬರ ಮಹಿಳೆಯರ ವಿವರ ಮತ್ತು ಗರ್ಭಕೋಶ ಸಮಸ್ಯೆಯಿಂದ ನರಳುತ್ತಿದ್ದ ಬ್ಯಾಡನೂರು ನರಸಮ್ಮನ ಸಾವಿನ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದರು. ಬಳಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಕಿರಣ್‌ ಹಾಗೂ ತಾ,ಆರೋಗ್ಯಾಧಿಕಾರಿ ತಿರುಪತಯ್ಯನ ನಿರ್ಲಕ್ಷ್ಯ ಹಾಗೂ ಕಾರ್ಯ ವೈಖರಿ ವಿರುದ್ಧ ತೀವ್ರ ಆಸಮಾಧಾನ ವ್ಯಕ್ತಪಡಿಸಿದರು.

ಆಸ್ಪತ್ರೆಯ ಆಡಳಿತಾಧಿಕಾರಿ ಡಾ,ಕಿರಣ್‌ ನಿರ್ಲಕ್ಷ್ಯ ಹಾಗೂ ಉದಾಸೀನತೆಯ ಪರಿಣಾಮ ಇಂತಹ ಅವಘಡ ಸಂಭವಿಸಲು ಸಾಧ್ಯವಾಗಿದೆ.ಆಸ್ಪತ್ರೆಯ ನಿರ್ವಹಣೆಯಲ್ಲಿ ವಿಫಲರಾದ ಎಎಂಒ ಡಾ.ಕಿರಣ್‌ ಸ್ಥಳೀಯ ರಾಜಕಾರಣದಲ್ಲಿ ನಿರತರಾಗಿದ್ದು, ರೋಗಿಗಳ ಬಗ್ಗೆ ಕಾಳಜಿ ಇಲ್ಲ.ಇಂತಹ ಉದಾಸೀನತೆಯ ವೈದ್ಯನನ್ನು ಕೂಡಲೇ ಆಮಾನತು ಪಡಿಸಬೇಕು.ಇಂತಹ ವೈದ್ಯರಿಂದ ಆಸ್ಪತ್ರೆ ಸುಧಾರಣೆ ಕಾಣುವುದಿಲ್ಲ. ಹೆಚ್ಚಿನ ಸಾವು ನೋವು ಸಂಭವಿಸುವ ಮುನ್ನ ಇಂತಹ ಬೇಜವಾಬ್ದಾರಿ ವೈದ್ಯನ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ತಾಲೂಕು ಜೆಡಿಎಸ್‌ ಅಧ್ಯಕ್ಷ ಎನ್‌.ಎ.ಈರಣ್ಣ ಹಾಗೂ ಮಹಾ ಅಧಿಗ ಹೋರಾಟ ಸಮಿತಿಯ ಅಧ್ಯಕ್ಷ ಕನ್ನಮೇಡಿ ಕೃಷ್ಣಮೂರ್ತಿ ಸರ್ಕಾರ ಹಾಗೂ ಜಿಲ್ಲಾ ಡಿಎಚ್‌ಒಗೆ ಒತ್ತಾಯಿಸಿದ್ದಾರೆ.

PREV
Read more Articles on
click me!

Recommended Stories

Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!
ಕೆಕೆಆರ್‌ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್ ಸ್ಥಿತಿ ಗಂಭೀರ!