ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ಶಾಕ್ ತಗುಲಿ ಮೂವರು ಸ್ಥಳದಲ್ಲೇ ಸಾವು

By Suvarna News  |  First Published Sep 24, 2020, 2:25 PM IST

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವಿಗೀಡಾದ ದುರ್ಘಟನೆ ನಡೆದಿದೆ. ವಿದ್ಯುತ್ ಶಾಕ್ ತಗುಲಿ ಸಾವು ಸಂಭವಿಸಿದೆ.


ಶಿವಮೊಗ್ಗ (ಸೆ.24): ವಿದ್ಯುತ್ ಕಂಬಕ್ಕೆ ಟಾಟಾ ಇಂಡಿಕಾ ಕಾರು ಡಿಕ್ಕಿಯಾದ ಪರಿಣಾಮ ವಿದ್ಯುತ್ ಶಾಕ್ ನಿಂದ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗರ್ತಿಕೆರೆ ಸಮೀಪ ಕಾರು ಅಪಘಾತವಾಗಿದೆ.

Tap to resize

Latest Videos

ಕಾರು ಕಭಕ್ಕೆ ಡಿಕ್ಕಿಯಾದ ವೇಳೆ ವಿದ್ಯುತ್ ಶಾಕ್ ತಗುಲಿ ಕಲಾವತಿ (65), ಲೋಹಿತ್ (36), ಶಶಾಂಕ್ (10) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಛೇ.. ತಾಯಿ, ಗರ್ಭಿಣಿ ಮಗಳ ಶವ 4 ದಿನದಿಂದ ರಸ್ತೆ ಮಧ್ಯೆ ಬಿದ್ದಿತ್ತು! ..

ಕಾರಿನಲ್ಲಿದ್ದ ಇನ್ನುಳಿದ ಮೂರು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಎಲ್ಲರೂ ರಿಪ್ಪನ್ ಪೇಟೆಯ ನಿವಾಸಿಗಳಾಗಿದ್ದು, ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. 
 
ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

click me!