ಆರೋಗ್ಯಾಧಿಕಾರಿ ಕುಟುಂಬ ಮೂವರು ಸೋಂಕಿಗೆ ಬಲಿ

By Kannadaprabha NewsFirst Published Jul 25, 2020, 7:17 AM IST
Highlights

‘ಕೊರೋನಾ ವಾರಿಯರ್‌’ ಆಗಿರುವ ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರ ಕುಟುಂಬದ ಮೂವರು ನಾಲ್ಕು ದಿನಗಳ ಅಂತರದಲ್ಲಿ ಕೊರೋನಾಗೆ ಬಲಿಯಾಗಿದ್ದಾರೆ. ಪಾಲಿಕೆಯ ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿಯ 70 ವರ್ಷದ ತಂದೆ, 65 ವರ್ಷದ ತಾಯಿ ಹಾಗೂ 49 ವರ್ಷದ ಭಾವ ಕೊರೋನಾಗೆ ಬಲಿಯಾದವರು.

ಬೆಂಗಳೂರು(ಜು.25): ‘ಕೊರೋನಾ ವಾರಿಯರ್‌’ ಆಗಿರುವ ಬಿಬಿಎಂಪಿ ಆರೋಗ್ಯಾಧಿಕಾರಿಯೊಬ್ಬರ ಕುಟುಂಬದ ಮೂವರು ನಾಲ್ಕು ದಿನಗಳ ಅಂತರದಲ್ಲಿ ಕೊರೋನಾಗೆ ಬಲಿಯಾಗಿದ್ದಾರೆ. ಪಾಲಿಕೆಯ ಬೊಮ್ಮನಹಳ್ಳಿ ವಲಯದ ಆರೋಗ್ಯಾಧಿಕಾರಿಯ 70 ವರ್ಷದ ತಂದೆ, 65 ವರ್ಷದ ತಾಯಿ ಹಾಗೂ 49 ವರ್ಷದ ಭಾವ ಕೊರೋನಾಗೆ ಬಲಿಯಾದವರು.

ಬಿಬಿಎಂಪಿ ಆರೋಗ್ಯಾಧಿಕಾರಿಯ ತಂದೆ ಸೋಮವಾರ ಸೋಂಕಿಗೆ ಬಲಿಯಾದರೆ, ಬುಧವಾರ ಭಾವ ಮೃತಪಟ್ಟಿದ್ದರು. ಮಾರನೇ ದಿನವೇ ಅಂದರೆ ಗುರುವಾರ ರಾತ್ರಿ ತಾಯಿಯೂ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದಾರೆ. ಕುಟುಂಬದ ಈ ಸಾಲು ಸಾವಿನಿಂದ ನೊಂದಿರುವ ಆರೋಗ್ಯಾಧಿಕಾರಿಯೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Latest Videos

ದಿನ ಭವಿಷ್ಯ: ಈ ರಾಶಿಯವರು ಕೆಲಸದಲ್ಲಿ ಎಚ್ಚರಿಕೆಯಿಂದಿರಿ!

ದುರಂತವೆಂದರೆ, ಸ್ವತಃ ಆರೋಗ್ಯಾಧಿಕಾರಿಯಾಗಿದ್ದರೂ ತಮ್ಮ ಕುಟುಂಬದ ಸದಸ್ಯರಿಗೆ ಸೂಕ್ತ ಚಿಕಿತ್ಸೆ ದೊರಕಿಸಿಕೊಡಲು ಆಗಿಲ್ಲ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದಿರುವುದೇ ಸೋಂಕಿತರ ಸಾವಿಗೆ ಕಾರಣ ಎನ್ನಲಾಗಿದೆ. ಪಾಲಿಕೆ ಅಧಿಕಾರಿಯ ಕುಟುಂಬಕ್ಕೆ ಹೀಗಾದರೆ ಜನಸಾಮಾನ್ಯರ ಪಾಡೇನು ಎನ್ನುವ ಪ್ರಶ್ನೆ ಎದ್ದಿದೆ. ವೈದ್ಯರ ಕುಟುಂಬಕ್ಕೆ ಸೂಕ್ತ ಚಿಕಿತ್ಸೆ ಸಿಗದಿರುವುದು ಇದೀಗ ತೀವ್ರ ಟೀಕೆಗೆ ಗುರಿಯಾಗಿದೆ. ರಾಜ್ಯ ಸರ್ಕಾರ ಖಡಕ್‌ ಸೂಚನೆ ನಡುವೆಯೂ ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಆಸ್ಪತ್ರೆಗಳಿಗೆ ಅಲೆದಾಟ:

ಮೊದಲಿಗೆ ಆರೋಗ್ಯಾಧಿಕಾರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ತಮ್ಮ ತಂದೆ ಮತ್ತು ತಾಯಿಯನ್ನು ಖಾಸಗಿ ಹೋಟೆಲ್‌ನಲ್ಲಿ ಪ್ರತ್ಯೇಕವಾಗಿ ಇರಿಸಿದ್ದರು. ಆದರೂ ಅವರ ತಂದೆ, ತಾಯಿ ಸೋಂಕಿಗೆ ತುತ್ತಾಗಿದ್ದಾರೆ. ಈ ನಡುವೆ ಅವರ ಮನೆಗೆ ಬಂದು ಹೋಗುತ್ತಿದ್ದ ತಂಗಿಯ ಗಂಡನಿಗೂ ಸೋಂಕು ಕಾಣಿಸಿಕೊಂಡಿದೆ. ಹೀಗಾಗಿ ತಕ್ಷಣ ನಗರದ ಬಿಜಿಎಸ್‌, ರಾಜಶೇಖರ್‌ ಮತ್ತು ಎಸ್‌ಎಂಆರ್‌ವಿ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಕೊಡಿಸಲು ಕರೆದೊಯ್ಯಲಾಗಿದೆ. ಆದರೆ, ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಲು ಹಾಸಿಗೆ ಖಾಲಿ ಇಲ್ಲ ಎಂದು ದಾಖಲಿಕೊಳ್ಳಲು ನಿರಾಕರಿಸಿದ್ದಾರೆ.

ಧಾರವಾಡ: ಸತ್ತ ವ್ಯಕ್ತಿ ನೀರು ಕುಡಿದನೆಂದು ಆಸ್ಪತ್ರೆಗೆ ಓಡೋಡಿ ಬಂದ ಜನರು..!

ಬಳಿಕ ದಯಾನಂದ ಸಾಗರ್‌ ಆಸ್ಪತ್ರೆಗೆ ಕರೆತಂದಿದ್ದು, ಆರಂಭದಲ್ಲಿ ಅಲ್ಲಿಯೂ ಹಾಸಿಗೆ ಇಲ್ಲ ಎಂದು ಸಬೂಬು ಹೇಳಿದ್ದಾರೆ. ಆದರೆ, ಸೋಂಕಿತರ ಕಡೆಯವರು ಪ್ರತಿಭಟನೆ ಮಾಡಿದ ಪರಿಣಾಮ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡಿದ್ದಾರೆ. ಆದರೆ ಮೂವರಿಗೂ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಆಸ್ಪತ್ರೆಯಲ್ಲಿ ವೆಂಟಿಲೇಟರ್‌ ಕೊರತೆ ಉಂಟಾಗಿದೆ. ಹೀಗಾಗಿ ಭಾವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಮತ್ತು ತಂದೆ ಹಾಗೂ ತಾಯಿಯನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುರಂತವೆಂದರೆ, ಮೂವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆಸ್ಪತ್ರೆಗಳ ನಿರ್ಲಕ್ಷ್ಯ ಹಾಗೂ ಸಕಾಲಕ್ಕೆ ಚಿಕಿತ್ಸೆ ಸಿಗದೆ ಮೂವರು ಮೃತಪಟ್ಟರು. ಆರೋಗ್ಯಾಧಿಕಾರಿ ಕುಟುಂಬಕ್ಕೆ ಈ ಪರಿಸ್ಥಿತಿ ಬಂದರೆ ಸಾಮಾನ್ಯರ ಜನರ ಪಾಡೇನು. ಅನ್ಯಾಯವಾಗಿ ಅಮಾಯಕರು ಜೀವ ಕಳೆದುಕೊಳ್ಳುವಂತಾಗಿದೆ ಎಂದು ಮೃತರ ಸಂಬಂಧಿ ಸಂಪತ್‌ ತಿಳಿಸಿದ್ದಾರೆ.

click me!