ರಾಯಚೂರು ಜಿಲ್ಲೆಯಲ್ಲಿ ಶುಕ್ರವಾರ ಸುರಿದ ಭಾರೀ ಮಳೆ ಹಲವು ಕಡೆಗಳಲ್ಲಿ ಅವಾಂತರಗಳನ್ನು ಸೃಷ್ಟಿಸಿದ್ದು, ಪ್ರಕೃತಿ ವಿಕೋಪಕ್ಕೆ 24 ತಾಸುಗಳಲ್ಲಿ ಆರು ಜನರು ಸಾವನ್ನಪ್ಪಿದ್ದಾರೆ.
ರಾಯಚೂರು, (ಜುಲೈ. 24): ರಾಯಚೂರು ಇಲ್ಲಿಗೆ ಇಂದು ಕರಾಳ ಶುಕ್ರವಾರ ಅಂತನೇ ಹೇಳಬಹುದು. ಯಾಂಕದ್ರೆ ಸಂಜೆ ದೇವದುರ್ಗದಲ್ಲಿ ಬಂಡೆ ಉರುಳಿ ಬಾಲಕರಿಬ್ಬರು ಮೃಪಟ್ಟಿದ್ದರು. ಇದೀಗ ಸಿಡಿಲಿನ ಹೊಡೆತಕ್ಕೆ ಇಬ್ಬರು ಸಹೋದರರು ಬಲಿಯಾಗಿರುವ ದಾರುಣ ಘಟನೆ ನಡೆದಿದೆ.
ದೇವದುರ್ಗ ತಾಲೂಕಿನ ಸಿಂಗನೋಡಿ ಗ್ರಾಮದ ಹೊರವಲಯದ ಹೊಲದಲ್ಲಿ ಸಿಡಿಲು ಬಡಿದು ರವಿಚಂದ್ರ (23), ವಿಷ್ಣು (18) ಎಂಬ ಸಹೋದರರು ಮೃತಪಟ್ಟಿದ್ದಾರೆ, ಇವರಿಬ್ಬರ ತಾಯಿ ಮಹಾದೇವಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ರಾಯಚೂರು: ಏಕಾಏಕಿ ನುಗ್ಗಿದ ನೀರು ತಂದೆ ಮಗ ಕೊಚ್ಚಿಹೋದರು, ನಡುಗಡ್ಡೆಯಲ್ಲಿ ಯುವಕ
undefined
ತಂದೆ ಗೋವಿಂದ ಜತೆ ತಾಯಿ, ಸಹೋದರರಿಬ್ಬರು ಜಮೀನಿನಲ್ಲಿ ಹಾಕಿದ್ದ ಜೋಪಡಿಯಲ್ಲಿ ಕುಳಿತಿದ್ದರು. ಆ ಸಂದರ್ಭದಲ್ಲಿ ಜೋಪಡಿಗೇ ಸಿಡಿಲು ಬಡಿದಿದೆ. ತಂದೆ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಯಾಪಲದಿನ್ನಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
24 ಗಂಟೆಳಲ್ಲಿ 6 ಸಾವು
ಹೌದು ರಾಯಚೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಪ್ರಕೃತಿ ವಿಕೋಪಕ್ಕೆ ಆರು ಜನರು ಬಲಿಯಾಗಿದ್ದಾರೆ. ದೇವದುರ್ಗದಲ್ಲಿ ಬಂಡೆ ಉರುಳಿ ಬಾಲಕರಿಬ್ಬರು ಮೃಪಟ್ಟಿದ್ರೆ, ಗುರುವಾರ ಸಂಜೆ ಗೋಪಲ್ಲಿ ಫಾಲ್ಸ್‌ನಲ್ಲಿ ಇಬ್ಬರು ಕೊಚ್ಚಿ ಹೋಗಿದ್ದು, ಇದೀಗ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ.