'ಸಮಾಧಾನ ಇಲ್ದಿದ್ರೆ ಜನ ಓಟ್ ಹಾಕ್ತಿದ್ರಾ' ತಿಪ್ಪೆ ಸಾರಿಸಿದ ಜಿಗಜಿಣಗಿ

By Web Desk  |  First Published Oct 3, 2019, 4:53 PM IST

ಮತ್ತೆ ಕೇಂದ್ರದ ಪರಿಹಾರ ವಿಳಂಬ ಕುರಿತು ಸಂಸದರ ಪ್ರಶ್ನೆ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ/  ಸಮಾಧಾನ ಇಲ್ಲದೆ ಜನ ಮತ ಹಾಕಿದ್ರಾ? / ವಿಜಯಪುರದಲ್ಲಿ ರಮೇಶ್ ಜಿಗಜಿಣಗಿ ಪ್ರಶ್ನೆ


ವಿಜಯಪುರ(ಅ.03)  ಸಂಸದ ಹಾಗೂ ಸಚಿವ ಸ್ಥಾನ ಜನರು ನೀಡಿದ ಭಿಕ್ಷೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿಕೆ ನೀಡಿದ್ದಾರೆ. ಅದು ಅವರ ಅಭಿಪ್ರಾಯ, ಜನ ಓಟ್ ಹಾಕಿದವರು ಇಲ್ಲಿ ಇದ್ದಾರೆ ಅವರಿಗೆ ಕೇಳ್ರಿ!  ಜನರಿಗೆ ಸಮಾಧಾನ ಇಲ್ಲದಿದ್ರೆ 2 ಲಕ್ಷ 58 ಸಾವಿರ ಜನರ ಓಟ್ ಹಾಕ್ತಿದ್ರಾ? ಎಂದು ವಿಜಯಪುರದಲ್ಲಿ ರಮೇಶ ಜಿಗಜಿಣಗಿ ಪ್ರಶ್ನೆ ಮಾಡಿದ್ದಾರೆ.

ನಾನು ಹೇಳೋದು ನನ್ನ ಬಗ್ಗೆ ಮಾತ್ರ, ಬೇರೆಯವರ ಬಗ್ಗೆ ಹೇಳೋದಕ್ಕೆ ನಿನಗೇನು ಅಧಿಕಾರವಿದೆ, ನನಗೇನು ಅಧಿಕಾರವಿದೆ? ಟೀಕೆ ಮಾಡೋದು ಒಳ್ಳೇದಲ್ಲ ಅನ್ನೋದು ಅವರಿಗೂ ಗೊತ್ತಿದೆ, ಆದ್ರೂ ಮಾಡ್ತಾರೆ, ಅವರನ್ನೇ ಶಾಸಕರನ್ನೇ ಕೇಳಿರಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವವರಿಗೂ ಟಾಂಗ್ ನೀಡಿದರು.

Latest Videos

undefined

ಪ್ರಶ್ನೆ ಕೇಳಿದ ಸೂಲಿಬೆಲೆ, ಸುವರ್ಣ ನ್ಯೂಸ್‌ಗೆ ಗೌಡರಿಂದ ಬ್ಲಾಕ್ ಭಾಗ್ಯ, ಆದ್ರೇನಾಯ್ತು!

ಕೇಂದ್ರದಿಂದ ಎಲ್ಲೂ ಪರಿಹಾರ ಬಂದಿಲ್ಲ, ದೇಶದ ಯಾವ ಮೂಲೆಯಲ್ಲೂ ಇವತ್ತಿಗೂ ಒಂದು ಪೈಸಾ ಪರಿಹಾರ ಕೊಟ್ಟಿಲ್ಲ. ಕೊಟ್ಟಲ್ಲವೆಂದ್ರೆ ಕೊಡಬಾರದು ಎಂದಲ್ಲ, ಕೊಡ್ತೆವೆ ಎಂದು ಹೇಳಿದ್ದಾರೆ. ಯಾವುದೋ ಒಂದು ಅನಾನುಕೂಲದಿಂದ ಆಗಿಲ್ಲ, ಮುಂದಿನ ದಿನಗಳಲ್ಲಿ ಪರಿಹಾರ ಕೊಡ್ತಾರೆ.  ನಿಯೋಗ ಫಿಕ್ಸ್ ಮಾಡಲು ಹೇಳಿದ್ದೇನೆ, ಫಿಕ್ಸ್ ಆದ ತಕ್ಷಣ ಪ್ರಧಾನಿ ಬಳಿಗೆ ಹೋಗುತ್ತೇವೆ ಎಂದು ರಮೇಶ್  ತಿಪ್ಪೆ ಸಾರಿಸುವ ಮಾತುಗಳನ್ನು ಆಡಿದರು.

ಒಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಪರಿಹಾರ ಬಂದಿಲ್ಲ.. ರಾಜ್ಯದ ಸಂಸದರು ಈ ಬಗ್ಗೆ ಪ್ರಯತ್ನ ಮಾಡುತ್ತಿಲ್ಲ ಎಂಬ ವಿಚಾರ  ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದ್ದರೆ ಇನ್ನೊಂದು ಕಡೆ ಬಿಜೆಪಿ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

 

 

 

click me!