ಭೀಕರ ಅಪಘಾತ: ಕಾರು ನುಜ್ಜುಗುಜ್ಜು, ಬಸ್ ಪಲ್ಟಿ, ಮೂವರು ಸಾವು

Published : Oct 03, 2019, 07:24 PM IST
ಭೀಕರ ಅಪಘಾತ: ಕಾರು ನುಜ್ಜುಗುಜ್ಜು, ಬಸ್ ಪಲ್ಟಿ, ಮೂವರು ಸಾವು

ಸಾರಾಂಶ

ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಭೀಕರ ಅಪಘಾತ| ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜು| ಸ್ಥಳದಲ್ಲಿಯೇ ಮೂವರು ಸಾವು| ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದ ಬಳಿ ಈ ಅವಘಡ.

ಧಾರವಾಡ, [ಅ.03]: ಹುಬ್ಬಳ್ಳಿ-ಗದಗ ಹೆದ್ದಾರಿಯಲ್ಲಿ ಕಾರು ಮತ್ತು ಸಾರಿಗೆ ಸಂಸ್ಥೆ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.

ಅಣ್ಣಿಗೇರಿ ತಾಲೂಕಿನ ಭದ್ರಾಪೂರ ಗ್ರಾಮದ ಬಳಿ ಈ ಅವಘಡ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಬಸ್​ ಕೂಡ ಉರುಳಿಬಿದ್ದಿದೆ. 

ಕಾರು ಆಂಧ್ರ ಪ್ರದೇಶದ ಮೂಲದ್ದಾಗಿದ್ದು, ಕಾರಿನಲ್ಲಿ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿ ಹುಬ್ಬಳ್ಳಿಯ ಕೀಮ್ಸ್​ ಆಸ್ಪತ್ರೆಗೆ  ದಾಖಲಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

PREV
click me!

Recommended Stories

ಹಿಂದೂಗಳಿಗಿಂತ ಮುಸ್ಲಿಮರ ಮೇಲೆ ಹೆಚ್ಚು ಬಾಂಡ್: ಎಸ್‌ಡಿಪಿಐ ಆರೋಪಕ್ಕೆ ಅಂಕಿ-ಅಂಶ ಸಮೇತ ಕಮಿಷನರ್ ತಿರುಗೇಟು!
ಕರೆಂಟ್‌ ಅಕೌಂಟಲ್ಲಿ ₹150 ಕೋಟಿ ಅಲ್ಲ, ₹1 ಸಾವಿರ ಕೋಟಿ ವಹಿವಾಟು