ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್ : ಕಿಂಗ್ ಪಿನ್ ಸೇರಿ ಮೂವರು ಅರೆಸ್ಟ್

Suvarna News   | Asianet News
Published : Mar 18, 2021, 11:53 AM IST
ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್ : ಕಿಂಗ್ ಪಿನ್ ಸೇರಿ ಮೂವರು ಅರೆಸ್ಟ್

ಸಾರಾಂಶ

ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ ಸೇರಿ ಮೂವರು ಅರೆಸ್ಟ್ ಆಗಿದ್ದಾರೆ. ಇನ್ನುಳಿದ ಐವರು ಖತರ್ನಾಕ್ ಗ್ಯಾಂಗ್ ಸದ್ಯರಿಗಾಗಿ ಹುಡುಕಾಟ ಆರಂಭವಾಗಿದೆ. 

ಮೈಸೂರು (ಮಾ.18):   ಹಣಕ್ಕಾಗಿ ಸಿನಿಮಾ ಸ್ಟೈಲ್ ನಲ್ಲಿ‌ ಕಿಡ್ನಾಪ್ ಹಾಗೂ ಲೋಕೇಷನ್ ತಿಳಿದುಕೊಂಡು ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಅರೆಸ್ಟ್ ಮಾಡಲಾಗಿದೆ. 

ಮಂಡ್ಯ, ಮೈಸೂರು, ಹಾಸನ, ಬೆಂಗಳೂರಿನ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುಂಪಿನಲ್ಲಿದ್ದ ಇನ್ನುಳಿದ ಐವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. 
ಜಾವೀದ್ ಖಾನ್ ಅಲಿಯಾಸ್ ಸೈನೆಡ್ ಜಾವೀದ್, ಮೊಹಮ್ಮದ್ ನಜೀಬ್, ಶಾಕೀರುದ್ದೀನ್ ಎಂಬುವರನ್ನು ಬಂಧಿಸಲಾಗಿದ್ದು, ಇದರಲ್ಲಿ ಜಾವೀದ್ ಖಾನ್ ನಟೋರಿಯಸ್ ಆರೋಪಿಯಾಗಿದ್ದಾನೆ.

ಗಂಡನ ಆಭರಣದೊಂದಿಗೆ ಮದುವೆ ಆದ ದಿನವೇ ವಧು ಪರಾರಿ!

ಸದ್ಯ ಚಾಮರಾಜನಗರದ ಜಬೀಖಾನ್ ಅಪಹರಣ ಮಾಡಿದ್ದು,  ಗ್ರಾನೈಟ್ ಕಮಿಷನ್ ವ್ಯವಹಾರ ಮಾಡುತ್ತಿದ್ದ ಜಬೀಖಾನ್ ಬಳಿ  1 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ. 

ಕಿಡ್ನಾಪರ್ಸ್‌ಗಳಿಂದ ಗಂಡನ ಪ್ರಾಣ ಉಳಿಸಲು ಚಿನ್ನಾಭರಣ ಅಡವಿಟ್ಟು ಆರೂವರೆ ಲಕ್ಷ ರು. ಹಣವನ್ನ ಜಬೀಖಾನ್ ಪತ್ನಿ ಕೊಟ್ಟಿದ್ದರು. ಆದರೂ ಅವರಿಗೆ ಮನೆಯಿಂದ ಹೊರಬಾರದಂತೆ, ಪೊಲೀಸರಿಗೆ ದೂರು ನೀಡದಂತೆ ನಿರಂತರ ಬೆದರಿಕೆ ಇಡಲಾಗಿತ್ತು. ಈ ಘಟನೆ ನಡೆದು ಸುಮಾರು ಎರಡು ತಿಂಗಳ ಬಳಿಕ ಜಬೀಖಾನ್ ಪೊಲೀಸರಿಗೆ ದೂರು ನೀಡಿದ್ದರು. 

ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದ ನಂಜನಗೂಡು ಪೊಲೀಸರು. ಮೂವರನ್ನು ಬಂಧಿಸಿ ಒಂದು ಕಾರು, ರಿವಾಲ್ವಾರ್, ಚಾಕುಗಳ ವಶಕ್ಕೆ ಪಡೆದಿದ್ದಾರೆ. ನಂಜನಗೂಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಈ ಸಂಬಂಧ ಮೈಸೂರು ಎಸ್ಪಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.

PREV
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
ಉಡುಪಿ: 2 ಗಂಟೆ ಕಾದರೂ ಬರಲಿಲ್ಲ 108 ಆಂಬುಲೆನ್ಸ್‌, ಗೂಡ್ಸ್ ಟೆಂಪೋದಲ್ಲಿ ಸಾಗಿಸಿ ವೃದ್ಧನ ರಕ್ಷಣೆ!