
ಮೈಸೂರು (ಮಾ.18): ಭಾರತೀಯ ರಿಸರ್ವ್ ಬ್ಯಾಂಕಿನ ನೌಕರರೆಂದು ಹೇಳಿಕೊಂಡು ಹಣ ದುಪ್ಪಟ್ಟು ಆಸೆ ತೋರಿಸಿ ವಂಚಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
ಕಡಿಮೆ ಅವಧಿಯಲ್ಲಿ ಹಣ ದ್ವಿಗುಣ ಮಾಡಿಸಿಕೊಡುವುದಾಗಿ ವ್ಯಕ್ತಿಯೊಬ್ಬರಿಗೆ 30 ಲಕ್ಷ ಹಣ ವಂಚಿಸಿದ್ದ ಇಬ್ಬರು ಈಗ ಪೊಲೀಸರ ಅತಿಥಿಗಳಾಗಿದ್ದಾರೆ. ಹೆಬ್ಬಾಳ ನಿವಾಸಿ ಮಂಜು (30) ಹಾಗೂ ಶ್ರೀರಾಂಪುರದ ನಿವಾಸಿ ಬಿ.ಶಂಕರ್ (42) ಎಂಬುವವರನ್ನು ಬಂಧಿಸಲಾಗಿದೆ.
ನಿವೃತ್ತ ನೌಕರರನ್ನೇ ಗುರಿಯಾಗಿರಿಸಿಕೊಂಡಿದ್ದ ಆಸಾಮಿಗಳು ತಾವು ಆರ್‌ಬಿಐ ನೌಕರರು ಎಂದು ಮೊದಲು ಪರಿಚಯಿಸಿಕೊಳ್ಳುತ್ತಿದ್ದರು. ಆರ್‌ಬಿಐನಲ್ಲಿ ಕೆಲವೊಂದು ಯೋಜನೆಗಳಲ್ಲಿ ಹಣ ತೊಡಗಿಸಿದರೆ ಕಡಿಮೆ ಅವಧಿಯಲ್ಲಿ ಹಣ ದ್ವಿಗುಣವಾಗುತ್ತದೆ ಎಂದು ನಂಬಿಸಿ ವಂಚಿಸುತ್ತಿದ್ದರು. ನಕಲಿ ಬಾಂಡ್‌ಗಳನ್ನು ನೀಡಿ ವಂಚನೆ ಮಾಡುತ್ತಿದ್ದರು.
ಗಂಡನ ಆಭರಣದೊಂದಿಗೆ ಮದುವೆ ಆದ ದಿನವೇ ವಧು ಪರಾರಿ! ...
ಸದ್ಯ ಬಂಧಿತರಿಂದ 25 ನಕಲಿ ಬಾಂಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಮಾನದಲ್ಲಿ ಬೆಂಗಳೂರು, ದೆಹಲಿ, ಮುಂಬೈ ಹಾಗೂ ಇತರೆ ಸ್ಥಳಗಳಿಗೆ ತೆರಳಿ ಪಂಚತಾರಾ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡುತಿದ್ದರು. ಇದೀಗ ಮೇಟಗಳ್ಳಿ ಪೊಲೀಸರು ಆರೋಪಿಗಳನ್ನು ಬಂಧಿಸಿ ನಕಲಿ ಜಾಲ ಪತ್ತೆ ಮಾಡಿದ್ದಾರೆ.