ತ್ರಿವಳಿ ತಲಾಖ್‌: ಉಡುಪಿ ಜಿಲ್ಲೆಯಲ್ಲಿ 2ನೇ ಪ್ರಕರಣ

By Kannadaprabha News  |  First Published Oct 7, 2019, 1:17 PM IST

19 ವರ್ಷದ ದಾಂಪತ್ಯ ಜೀವನಕ್ಕೆ ತ್ರಿವಳಿ ತಲಾಖ್ ಮೂಲಕ ಇತಿಶ್ರೀ ಹಾಡಿದ ವ್ಯಕ್ತಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ದಂಪತಿಗೆ ಮೂವರು ಮಕ್ಕಳಿದ್ದು, ಏಕಾಏಕಿ ತಲಾಖ್ ಎನ್ನುವ ಮೂಲಕ ಸಂಬಂಧ ಮುರಿಯಲು ಪ್ರಯತ್ನಿಸಿದ್ದಾನೆ.


ಉಡುಪಿ(ಅ.07): ನಿಷೇಧಿತ ತ್ರಿವಳಿ ತಲಾಖ್‌ ನೀಡಿದ 2ನೇ ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದೆ. ಉಡುಪಿ ಸಮೀಪದ ಹಯಗ್ರೀವ ನಗರದ ನಿವಾಸಿ ಶಬನಾ ಅವರು ನೀಡಿದ ದೂರಿನ ಮೇರೆಗೆ ಶಕೀಲ್‌ ಅಹಮ್ಮದ್‌ನನ್ನು ಪೊಲೀಸರು ಬಂಧಿಸಿದ್ದಾರೆ.

19 ವರ್ಷಗಳ ಹಿಂದೆ ಮಂಗಳೂರಿನ ಪೆರ್ಮುದೆಯ ಮಸೀದಿಯೊಂದರಲ್ಲಿ ಶಕೀಲ್‌- ಶಬನಾ ಮದುವೆಯಾಗಿದ್ದು, ಅವರಿಗೆ 3 ಮಂದಿ ಮಕ್ಕಳಿದ್ದಾರೆ. ಜಗಳವಾಗಿ ಶಕೀಲ್‌ ಪತ್ನಿಗೆ ನಿರಂತರವಾಗಿ ದೈಹಿಕ- ಮಾನಸಿಕ ಹಿಂಸೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ. ಆತ ಮಾಚ್‌ರ್‍ ತಿಂಗಳಿನಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ.

Latest Videos

undefined

ಬುಲ್ ಟ್ರಾಲ್ ಫಿಶಿಂಗ್, ನಾಡ ದೋಣಿ ಮೀನುಗಾರರಿಗೆ ಬರೆ..

ಸೆ.16ರಂದು ರಸ್ತೆಯಲ್ಲಿ ಶಬನಾ ಹೋಗುತ್ತಿದ್ದಾಗ ಅಲ್ಲಿಗೆ ಬಂದ ಶಕೀಲ್‌, ತಾನು ಬೇರೆ ಮದುವೆ ಆಗುತ್ತಿದ್ದೇನೆ ಎಂದು 3 ಬಾರಿ ತಲಾಖ್‌ ಹೇಳಿದ, ಇದನ್ನು ವಿರೋಧಿಸಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಶಬನಾ ಉಡುಪಿ ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇನ್ನು ಭಾನುವಾರ ಮನೆಯಲ್ಲಿ ಶಕೀಲ್‌ ಮದುವೆಗೆ ಸಿದ್ಧತೆ ನಡೆದಿತ್ತು. ಪೊಲೀಸರು ಆತನನ್ನು ಬಂಧಿಸಿದರು. ಕಳೆದ ತಿಂಗಳು ಕುಂದಾಪುರದಲ್ಲಿ ಜಿಲ್ಲೆಯ ಪ್ರಥಮ ತ್ರಿವಳಿ ತಲಾಕ್‌ ಪ್ರಕರಣ ದಾಖಲಾಗಿತ್ತು.

ತಲಾಕ್‌ ನೀಡಿದ ಮ್ಯಾನೇಜರ್‌ ಅರೆಸ್ಟ್

click me!