
ಬೆಂಗಳೂರು (ಜು.10): ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಎರಡು ಹಾಗೂ ಮೂರನೇ ದರ್ಜೆಯ ಟೊಮೆಟೋ ಬೆಲೆ ಕಡಿಮೆಯಾಗುತ್ತಿದೆ. ಕೇಜಿಗೆ 130 ರವರೆಗೂ ಹೋಗಿದ್ದ ಟೊಮೆಟೋ ಭಾನುವಾರ 60-100ರವರೆಗೆ ಮಾರಾಟವಾಗಿದೆ. ಕಲಾಸಿಪಾಳ್ಯ, ಕೆ.ಆರ್.ಮಾರುಕಟ್ಟೆಹಾಗೂ ಯಶವಂತಪುರ ಸೇರಿದಂತೆ ಇತರೆ ಸಗಟು ಮಾರುಕಟ್ಟೆಗೆ ಗುಣಮಟ್ಟದ ಟೊಮೆಟೋ ಜೊತೆಗೆ ಎರಡು, ಮೂರನೇ ದರ್ಜೆಯ ಉತ್ಪನ್ನವೂ ಹೆಚ್ಚಾಗಿ ಬಂದಿದೆ. ಇವುಗಳ 22 ಕೇಜಿ ಬಾಕ್ಸ್‌ಗೆ 1200-1300 ದರವಿತ್ತು.
ಹೀಗಾಗಿ ನಗರದ ಜಯನಗರ, ಗಾಂಧಿಬಜಾರ್, ವಿಜಯನಗರ, ಮಲ್ಲೇಶ್ವರ ಸೇರಿದಂತೆ ವಿವಿಧೆಡೆಯ ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮೆಟೋ ದರ ಕೆಜಿಗೆ 20-30ವರೆಗೂ ಕಡಿಮೆಯಾಗಿತ್ತು. ಗುಣಮಟ್ಟದ ಟೊಮೆಟೋ 100 ಇದ್ದರೆ, ಮೂರನೇ ದರ್ಜೆಯದ್ದು .60-.80ಗೆ ಮಾರಾಟವಾಗಿದೆ. ಇನ್ನೊಂದು ವಾರ ಇದೇ ರೀತಿ ಬೆಲೆ ಮುಂದುವರಿಯಬಹುದು. ಸುತ್ತಲಿನ ಗ್ರಾಮೀಣ ಪ್ರದೇಶ ಸೇರಿ ಅನ್ಯ ಜಿಲ್ಲೆಗಳಿಂದ ಉತ್ಪನ್ನ ಬಂದಿದೆ ಎಂದು ವ್ಯಾಪಾರಿಗಳು ಹೇಳಿದರು.
ಅಮರನಾಥಕ್ಕೆ ತೆರಳಿದ್ದ ರಾಜ್ಯ ಯಾತ್ರಿಕರು ಸೇಫ್: ಯಾತ್ರೆಗೆ ತೆರಳಿದ್ದು 80 ಅಲ್ಲ, 300 ಕನ್ನಡಿಗರು
ಹಸಿ ಮೆಣಸು ದರ ಗಗನಕ್ಕೆ: ಟೊಮೆಟೋ ಬೆಲೆ ಇಳಿಯುತ್ತಿದ್ದರೆ, ಹಸಿಮೆಣಸು ಕೇಜಿಗೆ 200 ತಲುಪಿದೆ. ಬೀನ್ಸ್ ಬೆಲೆ ಕೇಜಿಗೆ .120 ದಾಟಿದೆ. ಇನ್ನು ಕ್ಯಾಪ್ಸಿಕಾಂ .100 ನಷ್ಟಿದ್ದರೆ, ಹಸಿಶುಂಠಿ .300 ದಾಟಿದೆ. ಕೇಜಿ ನುಗ್ಗಿಕಾಯಿ 80-100 ಬೆಲೆಯಿತ್ತು. ಹಾಪ್‌ಕಾಮ್ಸ್‌ನಲ್ಲಿ ಎಂದಿನ ಬೆಲೆಗಳೇ ಮುಂದುವರಿದಿದ್ದು, ಚಿಲ್ಲರೆ ಮಾರುಕಟ್ಟೆಗೆ ಹೋಲಿಸಿದರೆ 5-10 ದರ ಹೆಚ್ಚಿದೆ. ಸದ್ಯ ವಿವಿಧೆಡೆ ಮಳೆಯಾಗುತ್ತಿದ್ದು, ಬೆಲೆ ತಹಬದಿಗೆ ಬರುವ ವಿಶ್ವಾಸವಿದೆ. ಆದರೆ, ಅತಿವೃಷ್ಟಿಆದರೆ, ಪುನಃ ಬೆಲೆ ಏರುವ ಸಾಧ್ಯತೆ ಇದೆ ಎಂದು ಹೋಲ್ ಸೆಲ್ ತರಕಾರಿ ವರ್ತಕರು ಹೇಳುತ್ತಾರೆ.
ಡಿಕೆಶಿ ದಿಢೀರ್ ಸಿಟಿ ರೌಂಡ್ಸ್: ಇಂದಿರಾ ಕ್ಯಾಂಟೀನ್ನಲ್ಲಿ ಉಪಹಾರ, ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಭೇಟಿ
ನಗರದ ಹೋಟೆಲ್‌ನಲ್ಲಿ ಟೊಮೆಟೋಗೆ ಕೋಕ್: ನಗರದ ಹೋಟೆಲ್‌ಗಳಲ್ಲಿ ಟೊಮೆಟೋ ಬಳಕೆಯ ಪ್ರಮಾಣವನ್ನೇ ಕಡಿಮೆ ಮಾಡಲಾಗಿದೆ. ಟೊಮೆಟೋ ಸೂಪ್, ದೋಸೆ, ವಿಶೇಷ ಖಾದ್ಯಗಳು, ಬಾತ್, ಸಾಂಬಾರ್‌ಗೆ ಅಥವಾ ರಸಂಗಳಿಗೆ ಬಳಸಲಾಗುವ ಟೊಮೆಟೋ ಪ್ರಮಾಣವನ್ನು ಇಳಿಸಲಾಗಿದೆ. ಇದರಿಂದ ಹೆಚ್ಚುವರಿ ಆರ್ಥಿಕ ಹೊರೆಯನ್ನು ತಪ್ಪಿಸಲಾಗುತ್ತಿದೆ ಎಂದು ಹೋಟೆಲ್ ಮಾಲಿಕರೊಬ್ಬರು ಹೇಳಿದರು. ಜೊತೆಗೆ ಸಲಾಡ್‌ಗೆ ಈರುಳ್ಳಿ, ಸೌತೆಕಾಯಿ ಜೊತೆಗೆ ನೀಡುತ್ತಿದ್ದ ಟೊಮೆಟೋ ಹಲವೆಡೆ ನಿಲ್ಲಿಸಲಾಗಿದೆ.