Covid 3rd Wave: ಬೆಂಗ್ಳೂರಲ್ಲಿ ಮತ್ತೆ 26,000+ ಕೇಸ್‌..!

By Kannadaprabha NewsFirst Published Jan 24, 2022, 6:09 AM IST
Highlights

*  15,457 ಪುರುಷರು ಮತ್ತು 10,841 ಮಹಿಳೆಯರಲ್ಲಿ ಸೋಂಕು ಪತ್ತೆ
*  2,31,833 ಸಕ್ರಿಯ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ
*  ಕಂಟೈನ್ಮೆಂಟ್‌ ವಲಯಗಳ ಸಂಖ್ಯೆ 255ಕ್ಕೆ ಇಳಿಕೆ

ಬೆಂಗಳೂರು(ಜ.24):  ನಗರದಲ್ಲಿ(Bengaluru) ಕೊರೋನಾ ಪ್ರಕರಣಗಳ ಏರಿಳಿತ ಮುಂದುವರಿದಿದ್ದು, ಭಾನುವಾರ ಹೊಸದಾಗಿ 26,299 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. 8 ಸೋಂಕಿತರು ಮೃತಪಟ್ಟಿದ್ದಾರೆ(Death).

15,457 ಪುರುಷರು ಮತ್ತು 10,841 ಮಹಿಳೆಯರಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ15,85,657ಕ್ಕೆ ಏರಿಕೆ ಆಗಿದೆ. ಒಂದೇ ದಿನ 7,485 ಪುರುಷರು ಮತ್ತು 5,302 ಮಂದಿ ಮಹಿಳೆಯರು ಸೇರಿ 12,787 ಮಂದಿ ಗುಣಮುಖರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 13,37,325ಕ್ಕೆ ತಲುಪಿದೆ. ಎಂಟು ಮಂದಿ ಸಾವಿನಿಂದ ಈವರೆಗೆ ಸಾವಿಗೀಡಾದವರ ಸಂಖ್ಯೆ 16,499 ಏರಿಕೆಯಾಗಿದೆ. ಸದ್ಯ ಸೋಂಕಿಗೆ ಒಳಗಾಗಿರುವ ಒಟ್ಟು 2,31,833 ಸಕ್ರಿಯ ಸೋಂಕಿತರಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ(Treatment) ನೀಡಲಾಗುತ್ತಿದೆ. ಒಂದೇ ದಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 1,03,535 ಕೊರೋನಾ ಪರೀಕ್ಷೆ ಮಾಡಲಾಗಿದೆ ಎಂದು ಬಿಬಿಎಂಪಿ(BBMP) ತಿಳಿಸಿದೆ.

Yadgir: ಸತ್ತವರಿಗೂ ಲಸಿಕೆ: ವ್ಯಾಕ್ಸಿನೇಶನ್ ಆಟೋ ಅಪ್ಡೇಟ್: ಏನಿದು..?

ಕಳೆದ ಹತ್ತು ದಿನದಲ್ಲಿ ಬಿಬಿಎಂಪಿ ವ್ಯಾಪ್ತಿಯ ಹಗದೂರು ವಾರ್ಡ್‌ನಲ್ಲಿ 100ಕ್ಕೂ ಅಧಿಕ(126) ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಬೇಗೂರು 92, ಹೊರಮಾವು 59, ಎಚ್‌ಎಸ್‌ಆರ್‌ ಬಡಾವಣೆ 55, ವರ್ತೂರು 54, ದೊಡ್ಡಾನೆಕ್ಕುಂದಿ 50, ಹಗದೂರು ಮತ್ತು ಆರ್‌.ಆರ್‌.ನಗರದಲ್ಲಿ ತಲಾ 49, ಹೊಸ ತಿಪ್ಪಸಂದ್ರ 48 ಹಾಗೂ ಕೋರಮಂಗಲದಲ್ಲಿ 45 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ.

ನಗರದಲ್ಲಿ ಕೊರೋನಾ ಸೋಂಕಿನ ತೀವ್ರತೆ ತುಸು ಇಳಿಕೆ ಕಂಡ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್‌ ವಲಯಗಳ(Containment Zones) ಸಂಖ್ಯೆ 255ಕ್ಕೆ ಇಳಿಕೆಯಾಗಿದೆ. ಯಲಹಂಕ 66, ಮಹದೇವಪುರ 58, ಪೂರ್ವ 50, ಬೊಮ್ಮನಹಳ್ಳಿ 42, ಪಶ್ಚಿಮ 20, ದಕ್ಷಿಣ 14, ಆರ್‌ಆರ್‌ನಗರ 4 ಮತ್ತು ದಾಸರಹಳ್ಳಿಯಲ್ಲಿ 1ಕಂಟೈನ್ಮೆಂಟ್‌ ವಲಯಗಳು ಸಕ್ರಿಯವಾಗಿವೆ ಎಂದು ಪಾಲಿಕೆ ಕೋವಿಡ್‌ ವರದಿ ತಿಳಿಸಿದೆ.

ಕರ್ನಾಟಕದಲ್ಲಿ ಒಂದೇ ದಿನ ಅರ್ಧ ಲಕ್ಷ ಕೊರೋನಾ ಕೇಸ್ ಪತ್ತೆ

ಕರ್ನಾಟಕ ಸರ್ಕಾರ (Karnataka Government) ಹಲವು ಕಠಿಣ ಕ್ರಮಗಳನ್ನ ಕೈಗೊಂಡಿದ್ದರೂ ಸಹ ಕೊರೋನಾ (Coronavirus) ದಿನದಿಂದ ದಿನಕ್ಕೆ ಹೆಚ್ಚಾಗುಲೇ ಇದೆ. ಇಂದು(ಭಾನುವಾರ) ಒಂದೇ ದಿನ ಕರ್ನಾಟಕದಲ್ಲಿ ಅರ್ಧ ಲಕ್ಷಕ್ಕೂ ಹೆಚ್ಚು ಕೊರೋನಾ ಕೇಸ್‌ಗಳು ಪತ್ತೆಯಾಗಿವೆ. 

ಹೌದು.. ಕಳೆದ 24 ಗಂಟೆಗಳಲ್ಲಿ 50,210 ಜನರಿಗೆ  ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿದ್ದು, ಸೋಂಕಿನಿಂದ 19 ಮಂದಿ ಸಾವನ್ನಪ್ಪಿದ್ದಾರೆ. 22,842 ಜನರು ಸೋಂಕುಗಳಿಂದ ಚೇತರಿಸಿಕೊಂಡಿದ್ದು, ವಿವಿಧ ಆಸ್ಪತ್ರೆಗಳಿಂದ ಡಿಸ್​ಚಾರ್ಜ್ ಆಗಿದ್ದಾರೆ. 

Omicron Crisis: ಸಮುದಾಯಕ್ಕೆ ಹಬ್ಬುತ್ತಿದೆ ಒಮಿಕ್ರೋನ್‌: ಹೆಚ್ಚಿನ ಸೋಂಕಿತರಲ್ಲಿ ರೋಗಲಕ್ಷಣವೇ ಇರಲ್ಲ

ರಾಜ್ಯದಲ್ಲಿ ಪ್ರಸ್ತುತ 3,57,796 ಸಕ್ರಿಯ ಪ್ರಕರಣಗಳಿದ್ದು (Positive Case), ಕೊವಿಡ್​ನಿಂದ (Covid 19) ಈವರೆಗೆ ಒಟ್ಟು 38,582 ಜನರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇ 22.77 ಇದೆ. ರಾಜ್ಯದಲ್ಲಿ ಈವರೆಗೆ ಒಟ್ಟು 35,17,682  ಜನರಲ್ಲಿ ಸೋಂಕು ದೃಢಪಟ್ಟಿದ್ದು, 31,21,274 ಜನರು ಚೇತರಿಸಿಕೊಂಡಿದ್ದಾರೆ. ಸೋಂಕಿನಿಂದ ಸಾಯುವವರ ಪ್ರಮಾಣ ಶೇ 0.03 ಇದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಕೇಸ್?

ಬೆಂಗಳೂರು ನಗರ 26,299, ಬಾಗಲಕೋಟೆ 331, ಬಳ್ಳಾರಿ 904, ಬೆಳಗಾವಿ 885, ಬೆಂಗಳೂರು ಗ್ರಾಮಾಂತರ 925, ಬೀದರ್ 368, ಚಾಮರಾಜನಗರ 664, ಚಿಕ್ಕಬಳ್ಳಾಪುರ 554, ಚಿಕ್ಕಮಗಳೂರು 144, ಚಿತ್ರದುರ್ಗ 246, ದಕ್ಷಿಣ ಕನ್ನಡ 770, ದಾವಣಗೆರೆ 495, ಧಾರವಾಡ 955, ಗದಗ 274, ಹಾಸನ 1922, ಹಾವೇರಿ 165, ಕಲಬುರ್ಗಿ 853, ಕೊಡಗು 1139, ಕೋಲಾರ 824, ಕೊಪ್ಪಳ 510, ಮಂಡ್ಯ 1455, ಮೈಸೂರು 4539, ರಾಯಚೂರು 410, ರಾಮನಗರ 199, ಶಿವಮೊಗ್ಗ 611, ತುಮಕೂರು 1963, ಉಡುಪಿ 947, ಉತ್ತರ ಕನ್ನಡ 641, ವಿಜಯಪುರ 249, ಯಾದಗಿರಿ 151.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?

ಬೆಂಗಳೂರು ನಗರ 8, ಶಿವಮೊಗ್ಗ, ತುಮಕೂರು ತಲಾ ಇಬ್ಬರು, ಬಳ್ಳಾರಿ, ಚಾಮರಾಜನಗರ, ದಕ್ಷಿಣ ಕನ್ನಡ, ಧಾರವಾಡ, ಮೈಸೂರು, ರಾಯಚೂರು ತಲಾ ಒಬ್ಬರು ಸಾವನ್ನಪ್ಪಿದ್ದಾರೆ.
 

click me!