Vegetable Price: ನೂರರ ಗಡಿದಾಟಿದ್ದ ತರಕಾರಿ ಬೆಲೆ ಇಳಿಕೆಯತ್ತ: ಗ್ರಾಹಕರಿಗೆ ನೆಮ್ಮದಿ

By Kannadaprabha NewsFirst Published Jan 24, 2022, 5:15 AM IST
Highlights

*   ಟೋಮೊಟೋ 30, ಕ್ಯಾಪ್ಸಿಕಂ 60-90, ಬೀನ್ಸ್‌ 50-60, ಕ್ಯಾರೆಟ್‌ 60-80 ರು.ಗೆ ಇಳಿಕೆ
*   ಎಲ್ಲ ಮಾರುಕಟ್ಟೆಗಳು ತರಹೇವಾರಿ ತರಕಾರಿಗಳಿಂದ ತುಂಬಿವೆ
*   ದುಬಾರಿ ಬೆಲೆಗೆ ತರಕಾರಿ ಕೊಂಡು ಹೈರಾಣಾಗಿದ್ದ ಜನರು 

ಬೆಂಗಳೂರು(ಜ.24):  ತಿಂಗಳ ಹಿಂದೆ ನಿರಂತರ ಮಳೆಯಿಂದ(Rain) ಏರಿಕೆಯಾಗಿದ್ದ ತರಕಾರಿಗಳ(Vegetable) ದರ ಕಡಿಮೆಯಾಗುತ್ತಿದ್ದು, ಜನರ ಆರ್ಥಿಕ ಹೊರೆಯನ್ನು ತುಸು ಕಡಿಮೆ ಮಾಡಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಡಿಮೆ ಆಗಲಿದೆ. ನಿರಂತರ ಮಳೆಯಿಂದಾಗಿ ಸೃಷ್ಟಿಯಾಗಿದ್ದ ತರಕಾರಿ ಪೂರೈಕೆ ಕೊರತೆ, ಬೆಲೆ ಏರಿಕೆ ಸ್ಥಿತಿ ಇದೀಗ ಮಾಯವಾಗಿದೆ. ನಗರದ ಎಲ್ಲ ಮಾರುಕಟ್ಟೆಗಳು(Markets) ತರಹೇವಾರಿ ತರಕಾರಿಗಳಿಂದ ತುಂಬಿವೆ. ಹೀಗಾಗಿ ತಿಂಗಳುಗಳ ಹಿಂದೆ 100ರ ಗಡಿ ದಾಟಿದ್ದ ಕೆ.ಜಿ. ಟೋಮೊಟೋ ಭಾನುವಾರ 30ಕ್ಕೆ, ಕ್ಯಾಪ್ಸಿಕಂ 60-90, ಬೀನ್ಸ್‌ 50-60, ಕ್ಯಾರೆಟ್‌ 60-80 ರು.ಗೆ ಮಾರಾಟವಾಗಿದೆ.

ಇವುಗಳ ಜತೆಗೆ ದುಬಾರಿಯಾಗಿದ್ದ ಬದನೆಕಾಯಿ 35-40, ಸೌತೆಕಾಯಿ 25, ಆಲೂಗಡ್ಡೆ .30, ಹಾಗಲಕಾಯಿ .40-55, ಈರುಳ್ಳಿ .30-45ಗೆ ಬಿಕರಿಗೊಂಡಿದೆ. ಇನ್ನು ಏಲಕ್ಕಿ ಬಾಳೆಹಣ್ಣು .50 ಮತ್ತು ಪಚ್ಚ ಬಾಳೆಹಣ್ಣಿನ ದರ ಕೆ.ಜಿ.ಗೆ .30 ಆಗಿದ್ದರೆ, ಒಂದು ಕಟ್ಟು ಕೊತ್ತಂಬರಿ .10-20, ಪಾಲಕ್‌ ಸೊಪ್ಪು .15, ಪುದಿನ ಮತ್ತು ದಂಟಿನ ಸೊಪ್ಪು ತಲಾ .10 ತಲುಪಿದೆ. ಹಾಪ್‌ಕಾಮ್ಸ್‌ನಲ್ಲೂ ಬಹುತೇಕ ತರಕಾರಿಗಳ ಬೆಲೆ ಇಳಿಮುಖಗೊಂಡಿದೆ.

Vegetable Price Hike : ಗ್ರಾಹಕರು ಕಂಗಾಲು - ವಾರದಿಂದ ಮತ್ತೆ ಬೆಲೆ ಏರಿಕೆ ಬಿಸಿ

ಚಿಕ್ಕಬಳ್ಳಾಪುರ(Chikkaballapur), ಕೋಲಾರ(Kolar), ಚಿಂತಾಮಣಿ, ಮಂಡ್ಯ, ರಾಮನಗರ, ತುಮಕೂರು ಸೇರಿದಂತೆ ಬೆಂಗಳೂರಿನ(Bengaluru) ಸುತ್ತಮುತ್ತಲಿನ ಗ್ರಾಮೀಣ ಭಾಗದಲ್ಲಿ(Rural Area) ತರಕಾರಿ ಬೆಳೆ ಚೆನ್ನಾಗಿದೆ. ನೆರೆ ರಾಜ್ಯದಿಂದಲೂ ತರಕಾರಿ ನಗರಕ್ಕೆ ಬರುತ್ತಿದೆ. ಇದರಿಂದ ತಿಂಗಳುಗಳ ಕಾಲ ದುಬಾರಿ ಬೆಲೆಗೆ ತರಕಾರಿ ಕೊಂಡು ಹೈರಾಣಾಗಿದ್ದ ಜನರಿಗೆ, ಒಂದೆರಡು ವಾರದಿಂದ ಕೈಗೆಟುಕುವ ಬೆಲೆಗೆ ತರಕಾರಿಗಳು ಸಿಗುತ್ತಿವೆ. ಮುಂದಿನ ಎರಡು ವಾರದಲ್ಲಿ ತರಕಾರಿಗಳ ಬೆಲೆ ಮತ್ತಷ್ಟು ಇಳಿಕೆ ಆಗಬಹುದೆಂದು ದಾಸನಪುರ ಎಪಿಎಂಸಿಯ ತರಕಾರಿ ವರ್ತಕ ಗೋವಿಂದಪ್ಪ ತಿಳಿಸಿದ್ದಾರೆ.

ಹಸಿ ಮೆಣಸಿನಕಾಯಿ ಕೇಜಿಗೆ 120-150...!

40-60ರ ಆಸುಪಾಸಿಗೆ ಸಿಗುತ್ತಿದ್ದ ಕೆಜಿ ಹಸಿ ಮೆಣಸಿನಕಾಯಿ ದರ ಜ.14ರ ಸಂಕ್ರಾಂತಿ ಸಂದರ್ಭದಲ್ಲಿ ಮಾರುಕಟ್ಟೆಗಳಿಗೆ ಸಮರ್ಪಕವಾಗಿ ಪೂರೈಕೆ ಆಗದ ಹಿನ್ನೆಲೆಯಲ್ಲಿ ದಿಢೀರನೆ ಕೆಜಿಗೆ ಚಿಲ್ಲರೆ ಬೆಲೆ 120 ಆಗಿತ್ತು. ಮೊದಲ ಹಂತದ ಗುಣಮಟ್ಟದ ಹಸಿ ಮೆಣಸಿನಕಾಯಿ 150ಗೆ ಮಾರಾಟವಾಗಿತ್ತು. ನಂತರ ಪೂರೈಕೆ ಕೊರತೆ ನೀಗಿತಾದರೂ ಕೆಲವು ಚಿಲ್ಲರೆ ವ್ಯಾಪಾರಿಗಳು ಈಗಲೂ ದುಬಾರಿ ಬೆಲೆ ಮಾರಾಟ ಮಾಡಿರುವುದು ಕಂಡು ಬಂದಿದೆ. ಕಳೆದ ಬುಧವಾರ ಕೆಜಿ ಹಸಿ ಮೆಣಸಿನಕಾಯಿ ಕೆಲವೆಡೆ 90-120ಕ್ಕೆ, ಭಾನುವಾರ 80-100ಗೆ ಮಾರಾಟವಾಗಿದೆ. ಮುಂದಿನ ದಿನಗಳಲ್ಲಿ ಇದರ ಬೆಲೆ ಇನ್ನಷ್ಟು ಇಳಿಕೆಯಾಗಲಿದೆ ಎಂದು ವಿಜಯನಗರ ತರಕಾರಿ ವ್ಯಾಪಾರಿಗಳು ತಿಳಿಸಿದ್ದಾರೆ.

ಹಾಪ್‌ಕಾಮ್ಸ್‌ ದರಪಟ್ಟಿ: ತರಕಾರಿ ಕೆಜಿಗೆ ರು.

ಅವರೇಕಾಯಿ 50
ಬದನೆಕಾಯಿ 54
ಬೀನ್ಸ್‌ 76
ಸೌತೆಕಾಯಿ 28
ಟೋಮೆಟೋ 29
ಈರುಳ್ಳಿ 47
ಏಲಕ್ಕಿ ಬಾಳೆ 44
ಪಚ್ಚ ಬಾಳೆ 22

ಡಬಲ್ ಸೆಂಚುರಿ ಬಾರಿಸಿದ ಬದನೆಕಾಯಿ ದರ: ಕಂಗಾಲಾದ ಗ್ರಾಹಕ..!

ಹುಬ್ಬಳ್ಳಿ: ಮಾರುಕಟ್ಟೆಗಳಲ್ಲಿ ತರಕಾರಿ(Vegetable) ಬೆಲೆ ಗಗನ ಮುಖಿಯಾಗಿದ್ದು, ಬದನೆಕಾಯಿ(Eggplant) ಬೆಲೆ ಡಬಲ್‌ ಸೆಂಚುರಿ ಬಾರಿಸಿದೆ! ಕಳೆದ ತಿಂಗಳು ಕೇಜಿಗೆ 50-60ರ ಆಸುಪಾಸಿನಲ್ಲಿ ಇದ್ದ ಬದನೆ ಈ ವಾರ ಇದ್ದಕ್ಕಿದ್ದಂತೆ 200ರ ಗಡಿ ತಲುಪಿದ್ದ ಘಟನೆ ಕಳೆದ ವರ್ಷ ಡಿ.25 ರಂದು ನಡೆದಿತ್ತು.

Vegetables Price: ಇನ್ನು 2 ತಿಂಗಳು ತರಕಾರಿ ಬೆಲೆ ಬಿಲ್‌ಕುಲ್ ಇಳಿಯಲ್ಲ..!

ಹಳೇಹುಬ್ಬಳ್ಳಿ ಮತ್ತು ಹುಬ್ಬಳ್ಳಿಯ(Hubballi) ಜನತಾ ಬಜಾರ್‌ನ ತರಕಾರಿ ಮಾರುಕಟ್ಟೆಗಳಲ್ಲಿ ತರಕಾರಿಗಳ ಬೆಲೆ ಹೆಚ್ಚಳವಾಗಿದೆ. ಕೆಲವು ದಿನಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ(Untimely Rain)  ತರಕಾರಿ ಬೆಳೆ ಹಾಳಾಗಿದೆ. ಅಲ್ಲದೆ ಇದರಿಂದಾಗಿ ಮಾರುಕಟ್ಟೆಗೆ ತರಕಾರಿ ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಗಿದೆ. ಹೀಗಾಗಿ ಬೆಲೆ ಹೆಚ್ಚಳವಾಗಿತ್ತು. 

ಹಾಗೆಯೇ ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಬದನೆಕಾಯಿ ಬರುತ್ತಿದೆ. 15 ಕೇಜಿಯ ಒಂದು ಬಾಕ್ಸ್‌ಗೆ 2,200-2,400 ಇದ್ದು, ಇದು ಸಾರ್ವಕಾಲಿಕ ಏರಿಕೆಯಾಗಿದೆ. ಬದನೆಕಾಯಿ ಬೆಲೆ ಹೆಚ್ಚಳ ವ್ಯಾಪಾರಸ್ಥರಲ್ಲೂ ಅಚ್ಚರಿ ಮೂಡಿಸಿದೆ. ಇನ್ನು ಟೊಮಟೋ ಹಳೇಹುಬ್ಬಳ್ಳಿ ಮಾರುಕಟ್ಟೆಯಲ್ಲಿ 30-40, ಜನತಾ ಬಜಾರ್‌ನಲ್ಲಿ 50 ಇದೆ. ಬದನೆಕಾಯಿ ಹಳೇಹುಬ್ಬಳ್ಳಿಯಲ್ಲಿ 120-140, ಜನತಾ ಬಜಾರ್‌ನಲ್ಲಿ 200ಕ್ಕೆ ಮಾರಾಟವಾಗುತ್ತಿದೆ. ತರಕಾರಿ ಬೆಲೆಗಳಲ್ಲಿ ನಿತ್ಯವೂ ಹೆಚ್ಚು ಕಮ್ಮಿಯಾಗುತ್ತದೆ. ಆದರೆ, ಇತ್ತೀಚಿನ ಕೆಲವು ದಿನಗಳಲ್ಲಿ ಬೆಂಡೆಕಾಯಿ, ಬೀನ್ಸ್‌, ಬದನೆಕಾಯಿ, ಚೌಳಿಕಾಯಿ ಬೆಲೆ ತುಂಬಾ ಹೆಚ್ಚಾಗಿತ್ತು. 
 

click me!