ಕೆಜಿಎಫ್ ಗಡಿಯಲ್ಲಿ ತಲೆಎತ್ತಲಿದೆ ಬೃಹತ್ ಎಪಿಎಂಸಿ. 3 ರಾಜ್ಯಗಳ ಗಡಿ ಭಾಗವಾದ ಕದರಿಗಾನಕುಪ್ಪದ ಬಳಿ 25 ಎಕರೆ ಪ್ರದೇಶದಲ್ಲಿ ನಿರ್ಮಾಣಕ್ಕೆ ಸಿದ್ಧತೆ. ಕಾಂಪೌಂಡ್ ನಿರ್ಮಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
ವರದಿ: ಬಾಲವೆಂಕಟೇಶ್ ಕೆ.ಎಂ.
ಕೋಲಾರ (ಡಿ.19): ಮೂರು ರಾಜ್ಯಗಳ ಗಡಿ ಭಾಗವಾಗ ತಾಲೂಕಿನ ಕದರಿಗಾನಕುಪ್ಪದ ಬಳಿ 25 ಎಕರೆ ಪ್ರದೇಶದಲ್ಲಿ ಬೃಹತ್ ಎಪಿಎಂಸಿ ಮಾರುಕಟ್ಟೆಪ್ರಾರಂಭಿಸಲು ಸದ್ದಿಲ್ಲದೆ ಸಿದ್ಧತೆಗಳು ನಡೆಯುತ್ತಿವೆ. ಬಂಗಾರಪೇಟೆ ತಾಲೂಕಿನಿಂದ ಕೆಜಿಎಫ್ ತಾಲೂಕು ಪ್ರತ್ಯೇಕಗೊಂಡ ನಂತರ ಎಪಿಎಂಸಿ ಮಾರುಕಟ್ಟೆನಿರ್ಮಾಣಕ್ಕಾಗಿ ಆಂಧ್ರ ಗಡಿ ಭಾಗದ ಕದರಿಗಾನಕುಪ್ಪದ ಬಳಿ 25 ಎಕರೆ ಪ್ರದೇಶವನ್ನು ಗುರುತಿಸಿ 25 ಎಕರೆ ಜಾಗಕ್ಕೆ ಕಾಂಪೌಂಡ್ ನಿರ್ಮಿಸಲು ಸರ್ಕಾರ ಅನುದಾನ ಬಿಡುಗಡೆ ಮಾಡಿದೆ.
undefined
ಸರ್ವೇ ಕಾರ‍್ಯ ಪೂರ್ಣ: ತಹಸೀಲ್ದಾರ್ ಸುಜಾತ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಜೆಸಿಬಿ ಮುಖಾಂತರ ಎಪಿಎಂಸಿ ಮಾರುಕಟ್ಟೆಯ ಜಾಗದ ಗಡಿಯನ್ನು ಗುರುತಿಸಿ ಕದಿರಗಾನಕುಪ್ಪದ ಸರ್ವೇ ನಂ. 3 ರಲ್ಲಿ 20 ಎಕರೆ, ಸರ್ವೇ ನಂ.71 ರಲ್ಲಿ 25 ಎಕರೆ ಭೂಮಿಯನ್ನು ಗುರುತಿಸಿ ಸರ್ಕಾರಕ್ಕೆ ಕಳುಹಿಸಿತ್ತು..
ಮೂರು ರಾಜ್ಯಗಳ ರೈತರಿಗೆ ಮಾರುಕಟ್ಟೆ: ರಾಜ್ಯದ ಕೆಜಿಎಫ್ ತಾಲೂಕು, ಮುಳಬಾಗಿಲು ತಾಲೂಕು ಮತ್ತು ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ರೈತರಿಗೆ ಈ ಮಾರುಕಟ್ಟೆ ಅನುಕೂಲವಾಗಲಿದೆ. ರೈತರು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲು ಎಲ್ಲ ಮೂಲಭೂತಸೌಕರ್ಯಗಳನ್ನು ಒದಗಿಸಲು ಸಿದ್ಧತೆ ನಡೆದಿದೆ. ದಕ್ಷಿಣದ ಮೂರು ರಾಜ್ಯಗಳ ಗಡಿಭಾಗದ ಬೃಹತ್ ಎಪಿಎಂಸಿ ಮಾರುಕಟ್ಟೆಇದಾಗಲಿದೆ. ಬಹುತೇಕ ರೈತರು ಚೆನ್ನೈ ಮತ್ತು ಆಂಧ್ರ ಪ್ರದೇಶದ ಮಾರುಕಟ್ಟೆಗೆಳಿಗೆ ರೈತರು ಬೆಳೆದ ತರಕಾರಿ,ಹಣ್ಣು ಹೂವು ತೆಗೆದುಕೊಂಡು ಹೋಗಿ ಮಾರಾಟ ಮಾಡಿಕೊಂಡು ಬರುತ್ತಿದ್ದರು. ಇನ್ನು ಮುಂದೆ ಇಲ್ಲಿಯೇ ಮಾರುಕಟ್ಟೆಪ್ರಾರಂಭವಾಗುವುದರಿಂದ ರೈತರಿಗೆ ಅನುಕೂಲವಾಗಲಿದೆ.
ರೈತರು ಬೆಳೆದ ತರಕಾರಿಯನ್ನು ಸಾಗಟ ಮಾಡಲು ಎಕ್ಸ್‌ಪ್ರೆಸ್ ಕಾರಿಡಾರ್ ಪಕ್ಕದಲ್ಲೇ ಎಪಿಎಂಸಿ ಮಾರುಕಟ್ಟೆಸ್ಥಾಪನೆ ಮಾಡುತ್ತಿರುವುರಿಂದ ರೈತರು ಬೆಳೆದಿರುವ ತರಕಾರಿ ಕೊಳ್ಳಲು ಸಗಟು ವ್ಯಾಪರಿಗಳು ಮೂರು ರಾಜ್ಯಗಳಿಂದ ವ್ಯಾಪಾÜರಿಗಳು ಬಂದುಹೋಗಲು ಅನುಕೂಲವಾಗಲಿದೆ. ರೈತರು ಬೆಳೆದ ತರಕಾರಿ ಹಾಗೂ ಇತರೆ ಅಹಾರ ಉತ್ಪನ್ನಗಳ ಸಾಗಾಣಿಕೆ ಮಾಡಲು ಅನುಕೂಲವಾಗಲಿದ್ದು ಇದರಿಂದ ಸಾವಿರಾರು ರೈತರಿಗೆ ಈ ಮಾರುಕಟ್ಟೆ ಸಂಜೀವಿನಿಯಾಗಲಿದೆ.
Ballari: ಎಪಿಎಂಸಿಯಲ್ಲಿ ರೈತರ ಮೆಕ್ಕೆಜೋಳ ಖರೀದಿಸದೇ ದಲ್ಲಾಳಿಗಳ ಕಿರುಕುಳ
ಕೆಜಿಎಫ್ ತಾಲೂಕಿನ ಎಪಿಎಂಸಿ ಮಾರುಕಟ್ಟೆಗೆ ಅಗತ್ಯವಿರುವ 25 ಎಕರೆ ಭೂಮಿಯನ್ನು ಗುರುತಿಸಿ ಸರ್ಕಾರದ ವಶಕ್ಕೆ ಕೊಡಲಾಗಿದೆ, ಮುಂದಿನ ದಿನಗಳಲ್ಲಿ ಕೃಷಿ ಇಲಾಖೆ ವತಿಯಿಂದ ತಾಲೂಕಿನಲ್ಲಿ ಬೃಹತ್ ಎಪಿಎಂಸಿ ಮಾರುಕಟ್ಟೆಸ್ಥಾಪನೆಯಾಗಲಿದ್ದು ಇದರಿಂದ ರೈತಾಪಿ ವರ್ಗಕ್ಕೆ ಉತ್ತಮ ಮಾರುಕಟ್ಟೆದೊರೆತಂತಾಗಲಿದೆ.
ಸುಜಾತ, ತಹಸೀಲ್ದಾರ್, ಕೆಜಿಎಫ್
ಧಾರವಾಡ ಎಪಿಎಂಸಿ ಕಾರ್ಯದರ್ಶಿ ವಿರುದ್ದ ಲೋಕಾಯುಕ್ತಕ್ಕೆ ದೂರು
ಕೆಜಿಎಫ್ ತಾಲೂಕು ಪ್ರತ್ಯೇಕಗೊಂಡ ನಂತರ ರೈತರಿಗೆ ಎಪಿಎಂಸಿ ಮಾರುಕಟ್ಟೆಯನ್ನು ಸ್ಥಾಪಿಸಲು ಸರ್ಕಾರಕ್ಕೆ ಮನವಿ ಮಾಡಿದ ಮೇರೆಗೆ ಎಪಿಎಂಸಿ ಮಾರುಕಟ್ಟೆಗೆ ಅನುಮತಿ ನೀಡಿದೆ. ಮೂರು ರಾಜ್ಯಗಳು ಸಂಗಮವಾಗುವ ಜಾಗದಲ್ಲಿ ಎಪಿಎಂಸಿ ಮಾರುಕಟ್ಟೆಸ್ಥಾಪನೆಯಾಗಲಿದೆ. ಇದರಿಂದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ.
-ರೂಪಕಲಾಶಶಿಧರ್, ಶಾಸಕಿ, ಕೆಜಿಫ್