ಕೋಲಾರ : ಕೊರೋನಾಗೆ ತುತ್ತಾದ 24 ವರ್ಷದ PSI

By Suvarna News  |  First Published May 18, 2021, 12:29 PM IST
  • 24 ವರ್ಷದ ಪಿಎಸ್‌ಐ ಕೊರೋನಾ ಮಹಾಮಾರಿಗೆ ಬಲಿ
  • ಕೋಲಾರ ಮೂಲದ ಪೊಲೀಸ್ ಚಿಕಿತ್ಸೆ ಫಲಿಸದೆ ನಿಧನ
  • ದಕ್ಷಿಣ ಕನ್ನಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್‌ಐ ಶಾಮಿಲಿ

ಕೋಲಾರ (ಮೇ.18): ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಕೋಲಾರದಲ್ಲಿಂದು 24 ವರ್ಷದ ಪೊಲೀಸ್ ಸಬ್ ಇನ್ಸ್ಪೆಕ್ಟರ್‌ ಸೋಂಕಿಗೆ ತುತ್ತಾಗಿದ್ದಾರೆ.  

"

Latest Videos

undefined

ಕೋಲಾರ ಮೂಲದ PSI ಶಾಮಿಲಿ (24) ಇಂದು ಕೊರೋನಾ ಮಹಾಮಾರಿಯಿಂದ ಚಿಕಿತ್ಸೆ ಫಲಕಾರಿಯಾಗದೇ ಇಲ್ಲಿನ ಜಾಲಪ್ಪ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಮಿಲಿ ಕಳೆದ ಮೇ.1 ರಂದು ಅನಾರೋಗ್ಯದ ಕಾರಣ ತಮ್ಮ ಹುಟ್ಟೂರಾದ ಕೋಲಾರಕ್ಕೆ ಆಗಮಿಸಿ ಇಲ್ಲಿನ ಜಾಲಪ್ಪ ಆಸ್ಪತ್ರೆಗೆ ದಾಖಲಾಗಿದ್ದರು.  18 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. 

ಕೋಲಾರದಲ್ಲೇಕೆ ಕೋವಿಡ್ ಕೇಸ್‌ಗಳು ಏರುತ್ತಿವೆ ..?

ಇದೇ ವರ್ಷ ಜನವರಿ 11 ರಂದು ದಕ್ಷಿಣ ಕನ್ನಡದ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಆಗಿ ಸೇರ್ಪಡೆಯಾಗಿದ್ದ  ಶಾಮಿಲಿ ಐದೇ ತಿಂಗಳಲ್ಲಿ ತಮ್ಮ ಪಯಣ ಮುಗಿಸಿದ್ದಾರೆ. 

 

Youngest member of the police family to succumb to Covid. 24 year old, PSI Shamili of Kolar, attached to DK district lost her battle with COVID.
May her soul rest in peace.
But it could be any of us. Please cooperate with police, stay home and stay safe. pic.twitter.com/s7ecNSdZ67

— DGP KARNATAKA (@DgpKarnataka)

ಶಾಮಿಲಿ ನಿಧನಕ್ಕೆ ಪೊಲೀಸ್ ಇಲಾಖೆ ಕಂಬನಿ ಮಿಡಿದಿದ್ದು, ಮಹಾಮಾರಿಯಿಂದ ದೂರವಿರಿ, ಎಚ್ಚರ ವಹಿಸಿ ನೀವು ಸುರಕ್ಷಿತವಾಗಿದ್ದು, ನಿಮ್ಮವರನ್ನು ಸುರಕ್ಷಿತವಾಗಿಡಿ ಎಂದು ಕಳಕಳಿಯ ಮನವಿ ಮಾಡಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!