ಜೈನ ಮುನಿಗಳ ಹತ್ಯೆ: ಪಾರದರ್ಶಕತೆ ತನಿಖೆಗೆ ನಳಿನ್‌ ಕುಮಾರ್‌ ಕಟಿಲ್‌ ಆಗ್ರಹ

By Kannadaprabha News  |  First Published Jul 12, 2023, 9:09 PM IST

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಆದರೆ, ಜನರಿಗೆ ನೂರಾರು ಸಂಶಯಗಳಿವೆ ಹೀಗಾಗಿ ನಮ್ಮ ಸರ್ಕಾರವಿದ್ದಾಗ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ನಾವು ಹರ್ಷಾ ಕೊಲೆ ಹಾಗೂ ಪ್ರವೀಣ ನೆಟ್ಟಾರು ಕೊಲೆ ಕೇಸ್‌ಗಳನ್ನು ಎನ್‌ಐಎಗೆ ನೀಡಿದ್ದೇವೆ. ಈಗಲೂ ಸಹ ಸರ್ಕಾರ ಅಂತಹ ನಿರ್ಣಯ ಮಾಡಲಿ ಎಂದ ನಳಿನ್‌ ಕುಮಾರ್‌ ಕಟಿಲ್‌ 


ಚಿಕ್ಕೋಡಿ(ಜು.12): ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಮಾಡಿರುವ ಘಟನೆ ಖಂಡನೀಯ. ಯಾವ ಕಾರಣಕ್ಕೆ ಹತ್ಯೆಯಾಗಿದೆ ಎನ್ನುವುದು ಚರ್ಚೆಯ ವಿಷಯವಾಗಿರುವುದರಿಂದ ತನಿಖೆ ಪಾರದರ್ಶಕ ನಡೆಯಬೇಕೆಂದು ನಾವು ಸತ್ಯಶೋಧನೆ ಕಮಿಟಿ ಮಾಡಿಕೊಂಡು ಕ್ಷೇತ್ರಕ್ಕೆ ಬಂದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‌ ಕುಮಾರ್‌ ಕಟಿಲ್‌ ಹೇಳಿದರು.

ಪಟ್ಟಣದ ಸಮೀಪದ ಹಿರೇಕೋಡಿ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಬರ್ಬವಾಗಿ ಕೊಲೆಯಾಗಿರುವ ಜೈನಮುನಿ ಕಾಮಕುಮಾರ ನಂದಿ ಮಹಾರಾಜರ ನಂದಿಪರ್ವತಕ್ಕೆ ಮಂಗಳವಾರ ಭೇಟಿ ನೀಡಿ ಅವರ ಪೂರ್ವಾಶ್ರಮದ ಸಂಬಂಧಿ ಭೀಮಗೊಂಡ ಉಗಾರೆ ಅವರಿಗೆ ಸಾಂತ್ವನ ಹೇಳಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಆದರೆ, ಜನರಿಗೆ ನೂರಾರು ಸಂಶಯಗಳಿವೆ ಹೀಗಾಗಿ ನಮ್ಮ ಸರ್ಕಾರವಿದ್ದಾಗ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ನಾವು ಹರ್ಷಾ ಕೊಲೆ ಹಾಗೂ ಪ್ರವೀಣ ನೆಟ್ಟಾರು ಕೊಲೆ ಕೇಸ್‌ಗಳನ್ನು ಎನ್‌ಐಎಗೆ ನೀಡಿದ್ದೇವೆ. ಈಗಲೂ ಸಹ ಸರ್ಕಾರ ಅಂತಹ ನಿರ್ಣಯ ಮಾಡಲಿ ಎಂದರು.

Tap to resize

Latest Videos

ಜೈನಮುನಿ ಹತ್ಯೆ ಅಪರಾಧಿಗಳಿಗೆ ಮರಣದಂಡನೆ ವಿಧಿಸಲಿ: ರಾಜ್ಯ ಅಲ್ಪಸಂಖ್ಯಾತ ಆಯೋಗ ಅಧ್ಯಕ್ಷ ಅಬ್ದುಲ್

ಮುನಿಗಳು ಶ್ರೇಷ್ಠ ಸಂತ ಎಲ್ಲವನ್ನು ತ್ಯಾಗ ಮಾಡಿದವರು. ಅದ್ಭುತ್‌ವಾದ ಜ್ಞಾನಿಯಾಗಿದ್ದರು. ಸಾಮಾನ್ಯವಾಗಿ ಯಾವುದೇ ರೀತಿಯ ಆರ್ಥಿಕ ವ್ಯವಹಾರದಲ್ಲಿ ತೊಡಗಿಕೊಳ್ಳುವುದಿಲ್ಲ. ಹೀಗಾಗಿ ಸಂಸೆಯ ಬರುವುದು ಸಹಜ ಜೊತೆಗೆ ಇಬ್ಬರೇ ಈ ರೀತಿಯಾಗಿ ಕೊಲೆ ಮಾಡಲು ಸಾಧ್ಯನಾ ಎಂಬುವುದ ಸಂಶಯಕ್ಕೆ ಕಾರಣವಾಗಿದೆ. ಆದ್ದರಿಂದ ಸಂಪೂರ್ಣ ಹಾಗೂ ಪಾರದರ್ಶಕವಾಗಿ ತನಿಖೆಯಾಗಬೇಕೆಂದು ಸರ್ಕಾರವನ್ನು ಬಿಜೆಪಿ ಆಗ್ರಹಿಸುತ್ತದೆ ಎಂದರು.
ನಳಿನ್‌ ಕುಮಾರ್‌ ಪಕ್ಕದಲ್ಲಿಯೇ ಕುಳಿತಿದ್ದ ಮುನಿಗಳ ಪೂರ್ವಾಶ್ರಮದ ಸಂಬಂಧಿ ಭೀಮಗೊಂಡ ಉಗಾರೆ ಕೊಲೆ ಪ್ರಕರಣದ ಆರೋಪಿಗಳನ್ನು ಕೇವಲ 4 ಗಂಟೆಯಲ್ಲಿಯೇ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಪೊಲೀಸರಿಗೆ ಧನ್ಯವಾದ ತಿಳಿಸುತ್ತೇವೆ ಎಂದಾಗ ರಾಜ್ಯಾಧ್ಯಕ್ಷ ಕಟೀಲ ಅವರು ಕಕ್ಕಾಬಿಕ್ಕಿಯಾದ ಪ್ರಸಂಗ ನಡೆಯಿತು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮಾಜಿ ವಿಧಾನ ಪರಿಷತ್‌ ಸದಸ್ಯ ಮಹಾಂತೇಶ ಕವಟಗಿಮಠ, ಸಂಜಯ ಪಾಟೀಲ, ಅನೀಲ ಬೆನಕೆ, ಡಾ.ರಾಜೇಶ ನೇರ್ಲಿ, ರಾಜ್ಯ ವಕ್ತಾರ ಎಂ.ಬಿ.ಜಿರಲಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಸಂಜಯ ಪಾಟೀಲ, ಭರತ ಬನವಣೆ, ಪ್ರಕಾಶ ಪಾಟೀಲ, ತಾತ್ಯಾಸಾಹೇಬ್‌ ಕಾಟ ಸೇರಿದಂತೆ ಬಿಜೆಪಿ ಮುಖಂಡರು ಇದ್ದರು.

click me!