* ಆನಂದ ಸಿಂಗ್ ಜಿಲ್ಲೆಯಲ್ಲಿ 228 ಕೋಟಿ ಕಾಮಗಾರಿ
* 67 ಕಾಮಗಾರಿಗಳಿಗೆ ಜೊಲ್ಲೆ ಭೂಮಿ ಪೂಜೆ* ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ
* ನೂತನವಾಗಿ ನಿರ್ಮಾಣವಾದ ಜಿಲ್ಲೆ
ಹೊಸಪೇಟೆ(ಫೆ. 21) ವಿಜಯನಗರ (Vijayanagara) ಜಿಲ್ಲಾ ಕೇಂದ್ರದ ಅಭಿವೃದ್ಧಿಗಾಗಿ 228.94 ಕೋಟಿ ವೆಚ್ಚದ 67 ಕಾಮಗಾರಿಗಳಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಲಾಯಿತು. ನಗರದ ಮುನ್ಸಿಪಲ್ ಮೈದಾನದಲ್ಲಿ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ (Shashikala Jolle) ವಿಜಯನಗರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕನಸು ಕಂಡಿದ್ದಾರೆ. ಅವರ ಕನಸನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ನನಸು ಮಾಡೋಣ ಎಂದರು.
83 ಎಕರೆ ಜಾಗ: ತುಂಗಭದ್ರಾ ಸ್ಟೀಲ್ ಪ್ರಾಡಕ್ಟ್ (ಟಿಎಸ್‌ಪಿ) ಕಾರ್ಖಾನೆಯ 83 ಎಕರೆ ಜಾಗದಲ್ಲಿ ಇನ್ನೆರಡು ತಿಂಗಳಲ್ಲಿ ವಿಜಯನಗರ ಜಿಲ್ಲಾ ಕಚೇರಿ ನಿರ್ಮಾಣ ಆರಂಭಿಸಲಾಗುವುದು. ತಾಂತ್ರಿಕ ಕಾರಣದಿಂದ 83 ಎಕರೆ ಹಸ್ತಾಂತರ ಆಗಿಲ್ಲ. ಇನ್ನೆರಡು ತಿಂಗಳಲ್ಲಿ ಭೂಮಿ ಹಸ್ತಾಂತರ ಆಗಲಿದೆ ಎಂದರು.
Vijayanagara: ಹೆಣ್ಣು ಒಲಿದರೆ ನಾರಿ, ಮುನಿದರೆ ಮಾರಿ: ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಜೊಲ್ಲೆ
ಹೊಸ ಜಿಲ್ಲೆಯಲ್ಲಿ ಜಿಲ್ಲಾಸ್ಪತ್ರೆ ಇಲ್ಲ. ನಗರದ 100 ಹಾಸಿಗೆ ಆಸ್ಪತ್ರೆಯನ್ನೇ 250 ಹಾಸಿಗೆ ಆಸ್ಪತ್ರೆಯನ್ನಾಗಿ . 10 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ತಿಳಿಸಿದರು. ಪ್ರವಾಸೋದ್ಯಮ ಸಚಿವ ಮತ್ತು ಹೊಸಪೇಟೆ ಶಾಸಕ ಆನಂದ ಸಿಂಗ್ ಮಾತನಾಡಿ, ವಿಜಯನಗರ ಜಿಲ್ಲಾ ಕೇಂದ್ರ ಹೊಸಪೇಟೆ ಹೆರಿಟೇಜ್ ಯೋಜನೆಯಲ್ಲಿ ಸ್ಥಾನ ಪಡೆದಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ಇನ್ನಷ್ಟುಅನುದಾನ ಜಿಲ್ಲೆ ಅಭಿವೃದ್ಧಿಗೆ ದೊರೆಯಲಿದೆ ಎಂದರು.
ಸಚಿವೆಗೆ ತವರಿನ ಸಿರಿ: ಇನ್ನು ಸಚಿವೆ ಶಶಿಕಲಾ ಜೊಲ್ಲೆ ವಿಜಯನಗರ ನನ್ನ ತವರು ಮನೆ ಎಂದು ಕಾರ್ಯಕ್ರಮದಲ್ಲಿ ಪದೇ ಪದೇ ಹೇಳಿದರು. ಇದನ್ನು ಆಲಿಸಿದ ಸಚಿವ ಆನಂದ ಸಿಂಗ್ ಬಿಜೆಪಿ ಉಪಾಧ್ಯಕ್ಷೆ ಕವಿತಾ ಸಿಂಗ್ ಅವರಿಗೆ ಸಚಿವೆ ಶಶಿಕಲಾ ಜೊಲ್ಲೆಯವರಿಗೆ ಉಡಿ ತುಂಬುವ ಕಾರ್ಯ ಮಾಡಬೇಕು ಎಂದರು. ಬಳಿಕ ಕವಿತಾ ಸಿಂಗ್ ಮತ್ತು ಮಹಿಳೆಯರು ಸೇರಿ ಸಚಿವೆಗೆ ಉಡಿ ಸೀರೆ, ಬಳೆ, ಹೂವು ಮುಡಿಸುವ ಮೂಲಕ ಉಡಿ ತುಂಬಿದರು.
ಹೊಲದಲ್ಲಿ ಕೆಲಸ ಮಾಡುವಾಗ ಕುಡುಗೋಲಿನಿಂದ ಬೆರಳಿಗೆ ಗಾಯವಾದ ತಕ್ಷಣ ಕೂಡ್ಲಿಗಿ ಸರ್ಕಾರಿ (Govt Hospital) ಆಸ್ಪತ್ರೆಗೆ ಬೆಳಗ್ಗೆ 8 ಗಂಟೆಗೆ ಬಂದು 3 ಗಂಟೆ ಕಾದರೂ ವೈದ್ಯರು ಮತ್ತು ಸಿಬ್ಬಂದಿ ಸುಳಿವು ಸಹ ಇರಲಿಲ್ಲ. ಕೊನೆಗೆ ಗಾಯಾಳು ಪಕ್ಕದ ಖಾಸಗಿ(Private Hospital) ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದ ಪ್ರಸಂಗ ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ಬೆಳಗ್ಗೆ ಕೂಡ್ಲಿಗಿ ( Kudligi )ತಾಲೂಕಿನ ಈಚಲಬೊಮ್ಮನಹಳ್ಳಿಯ ಕೊಟ್ರೇಶ್ ಕೈಬೆರಳಿಗೆ ಆದ ಗಾಯಕ್ಕೆ ಚಿಕಿತ್ಸೆ ಪಡೆಯಲು ಬೆಳಗ್ಗೆ 8 ಗಂಟೆಗೆ ಕೂಡ್ಲಿಗಿ ಆಸ್ಪತ್ರೆಗೆ ಬಂದಾಗ ಯಾವೊಬ್ಬ ಸಿಬ್ಬಂದಿ ಕಾಣಲಿಲ್ಲ. ವೈದ್ಯರ ಕೊಠಡಿಗಳು ಬೀಗ ಜಡಿದಿದ್ದವು ಸ್ಟಾಫ್ ನರ್ಸ್‌ಗಳು ಸಹ ಕಾಣಿಸಲಿಲ್ಲ. ಇಂತಹ ಅವ್ಯವಸ್ಥೆ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಕಂಡುಬಂದಿತು ಎನ್ನುತ್ತಾರೆ ಗಾಯಾಳು ಕರೆದುಕೊಂಡು ಬಂದಿದ್ದ ಶಿವರಾಜ.
ಗಾಯಾಳು ಮೇಲೆ ಅವಾಜ್: ಗಾಯಾಳು ಮತ್ತು ಜತೆಗೆ ಬಂದವರು ಅಲ್ಲಿ ಕುಳಿತಿದ್ದ ತರಬೇತಿ ವಿದ್ಯಾರ್ಥಿಗಳಿಗೆ ವೈದ್ಯರು ಯಾವಾಗ ಬರುತ್ತಾರೆ? ಎಂದು ವಿಚಾರಿಸಿದರೆ ಬಾಯಿಗೆ ಬಂದಂತೆ ಬೈದಿದ್ದಾರೆ. ನೆಲ ಒರೆಸುವ ದಿನಗೂಲಿ ನೌಕರ ಸಹ ಗಾಯಾಳು ಮೇಲೆ ಅವಾಜ್ ಹಾಕಿದ್ದಾರೆ. ಹೀಗಾಗಿ ದಿಕ್ಕುತೋಚದೆ ಕಣ್ಣೀರಿಡುತ್ತ 11 ಗಂಟೆ ಸುಮಾರಿಗೆ ಪಕ್ಕದ ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಕೊಡಿಸಲಾಯಿತು ಎಂದು ಗಾಯಾಳು ಚಿಕ್ಕಪ್ಪ ಶಿವರಾಜ್ ಆರೋಪಿಸಿದ್ದಾರೆ.