22 ಟ್ರಾಲ್‌ ಬೋಟ್‌ಗೆ ಸಿಕ್ಕಿದ್ದು 460 ಕೆಜಿ ಮೀನು ಮಾತ್ರ..!

By Kannadaprabha News  |  First Published May 9, 2020, 9:34 AM IST

ಕಾರವಾರ ತಾಲೂಕಿನ ವಿವಿಧ ಕಡೆಗಳಿಂದ 22 ಟ್ರಾಲ್‌ ಬೋಟ್‌ಗಳು ಮೀನುಗಾರಿಕೆಗೆ ತೆರಳಿದ್ದು, ಬಹುತೇಕ ಬೋಟ್‌ ಖಾಲಿ ಬಂದಿವೆ. ಕೆಲವೇ ಕೆಲವು ಬೋಟ್‌ಗಳಿಗೆ ಮೀನು ಲಭ್ಯವಾಗಿದೆ.


ಉತ್ತರ ಕನ್ನಡ(ಮೇ 09): ಕಾರವಾರ ತಾಲೂಕಿನ ವಿವಿಧ ಕಡೆಗಳಿಂದ 22 ಟ್ರಾಲ್‌ ಬೋಟ್‌ಗಳು ಮೀನುಗಾರಿಕೆಗೆ ತೆರಳಿದ್ದು, ಬಹುತೇಕ ಬೋಟ್‌ ಖಾಲಿ ಬಂದಿವೆ. ಕೆಲವೇ ಕೆಲವು ಬೋಟ್‌ಗಳಿಗೆ ಮೀನು ಲಭ್ಯವಾಗಿದೆ.

ಮಂಡಿ 200 ಕೆಜಿ, ತೆಂಬಲಿ 180 ಕೆಜಿ, ಕರಿಕಡಿ ಜಾತಿಯ ಮೀನು 80 ಕೆಜಿ ಲಭ್ಯವಾಗಿದ್ದು, 460 ಕೆಜಿ ಮೀನು ಬಲೆಗೆ ಬಿದ್ದಂತಾಗಿದೆ. ಒರಿಸ್ಸಾ, ಜಾರ್ಖಂಡ್‌, ಬಿಹಾರ ಮೊದಲಾದ ಕಡೆಗಳಿಂದ ಟ್ರಾಲ್‌ ಹಾಗೂ ಪರ್ಸೈನ್‌ ಬೋಟ್‌ಗಳಿಗೆ ದುಡಿಯಲು ಬರುತ್ತಾರೆ.

Latest Videos

undefined

ರಾಜ್ಯದಲ್ಲಿ 11 ಜನರಿಂದ 354 ಮಂದಿಗೆ ವೈರಸ್‌!

ಆದರೆ ಈ ಮೊದಲು ಬಂದರು ವಿಸ್ತರಣೆ ವಿರೋಧಿಸಿ ಮೀನುಗಾರರು ಹೋರಾಟ ನಡೆಸಿದ್ದರು. ಈ ವೇಳೆಯಲ್ಲಿ ಕೆಲಸವಿಲ್ಲದೇ ಬಹುತೇಕ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳಿದ್ದರು. ನಂತರ ಲಾಕ್‌ಡೌನ್‌ನಿಂದ ತಮ್ಮ ತಮ್ಮ ಊರುಗಳಿಂದ ವಾಪಸ್‌ ಆಗಲು ಸಾಧ್ಯವಾಗದೇ ಕಾರ್ಮಿಕರು ಇಲ್ಲದಂತಾಗಿದೆ.

ಶೀಲ ಶಂಕಿಸಿ ಪತ್ನಿಯ ರುಂಡ ಚೆಂಡಾಡಿದ ಪಾಪಿ ಗಂಡ..!

ತಾಲೂಕಿನಲ್ಲಿ 100ಕ್ಕೂ ಅಧಿಕ ಪರ್ಸೈನ್‌ ಬೋಟ್‌ಗಳಿದ್ದು, ಕಾರ್ಮಿಕರು ಇಲ್ಲದ ಕಾರಣ ಬಹುತೇಕ ಬೋಟ್‌ಗಳನ್ನು ಸಮುದ್ರ ತೀರದಲ್ಲಿ ಲಂಗರು ಹಾಕಲಾಗಿದೆ. ಜೂನ್‌, ಜುಲೈ ತಿಂಗಳಲ್ಲಿ ಮೀನುಗಳ ಸಂತಾನೋತ್ಪತ್ತಿ ಕಾಲವಾದ್ದರಿಂದ 2 ತಿಂಗಳು ಮೀನುಗಾರಿಕೆ ನಿಷೇಧಿಸಿ ಸರ್ಕಾರ ಆದೇಶಿಸುತ್ತದೆ.

click me!