ಕೊರೋನಾ ಆತಂಕ: ಮುಂಬೈ-ಗದಗ ರೈಲು ಮೂಲಕ ವಿಜಯಪುರ ಜಿಲ್ಲೆಗೆ 210 ಜನ ಆಗಮನ

By Kannadaprabha News  |  First Published Jun 3, 2020, 10:10 AM IST

ಮುಂಬೈಯಿಂದ ವಿಜಯಪುರಕ್ಕೆ ಆಗಮಿಸಿದ ವಲಸೆ ಕಾರ್ಮಿಕರು| ಆಯಾ ತಾಲೂಕಿಗೆ ಬಸ್‌ ಮೂಲಕ ವಲಸೆ ಕಾರ್ಮಿಕರ ರವಾನೆಗೆ ಕ್ರಮ: ಆಯುಕ್ತ ಶ್ರೀಹರ್ಷ ಶೆಟ್ಟಿ| ವಿಜಯಪುರ ರೈಲು ನಿಲ್ದಾಣಕ್ಕೆ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಜನರು ಆಗಮಿಸಿದ್ದು ಅವರನ್ನು ಆಯಾ ಜಿಲ್ಲೆಗೆ ಕಳುಹಿಸಿಕೊಡಲು ನಿರ್ಧಾರ| 


ವಿಜಯಪುರ(ಜೂ.03):  ಮುಂಬೈ-ಗದಗ ರೈಲು ಮೂಲಕ ಮಂಗಳವಾರ ಬೆಳಗ್ಗೆ 7.30 ಗಂಟೆಗೆ ಜಿಲ್ಲೆಗೆ ಒಟ್ಟು 210 ಜನ ವಲಸೆ ಕಾರ್ಮಿಕರು ಆಗಮಿಸಿದ್ದು, ಅವರನ್ನು ಜಿಲ್ಲಾಡಳಿತ ಆಯಾ ತಾಲೂಕಿಗೆ ಬಸ್‌ ವ್ಯವಸ್ಥೆ ಕಲ್ಪಿಸಿ ಕಳುಹಿಸಲಾಯಿತು.

ಮುಂಬೈಯಿಂದ ಆಗಮಿಸಿದ ವಲಸೆ ಕಾರ್ಮಿಕರು ಮುಂಬೈ-ಗದಗ ರೈಲು ಮೂಲಕ ವಿಜಯಪುರ ರೈಲು ನಿಲ್ದಾಣಕ್ಕೆ ಆಗಮಿಸಿದ್ದು, ವಿಜಯಪುರದ 95 ಜನರು, ಇಂಡಿ ತಾಲೂಕಿನ 40 ಜನರು, ಸಿಂದಗಿ ತಾಲೂಕಿನ 28 ಜನರು, ಮುದ್ದೇಬಿಹಾಳ ತಾಲೂಕಿನ 18 ಜನರು ಹಾಗೂ ಬಸವನ ಬಾಗೇವಾಡಿ ತಾಲೂಕಿನ 29 ಜನರನ್ನು ಆಯಾ ತಾಲೂಕಿಗೆ ಬಸ್‌ ವ್ಯವಸ್ಥೆ ಕಲ್ಪಿಸುವುದರ ಮೂಲಕ ಕಳುಹಿಸಲಾಯಿತು.

Latest Videos

undefined

ವಿವಾಹಿತನ ಕಾಮದಾಟದಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ 13ರ ಬಾಲೆ

ಮಹಾನಗರ ಪಾಲಿಕೆ ಆಯುಕ್ತ ಶ್ರೀಹರ್ಷ ಶೆಟ್ಟಿ ಮಾತನಾಡಿದ ಅವರು, ಮುಂಬೈಯಿಂದ ಜಿಲ್ಲೆಗೆ ಆಗಮಿಸಿದ ಜನರನ್ನು ಆಯಾ ತಾಲೂಕಿನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಲಾಗುವುದು. ಹೆಲ್ತ್‌ ಸ್ರೀನಿಂಗ್‌ ಮಾಡಲಾಗುವುದು. ಏಳು ದಿನಗಳವರೆಗೆ ಸಾಂಸ್ಥಿಕ ಕ್ವಾರಂಟೈನ್‌ ಸಂದರ್ಭದಲ್ಲಿ ಯಾರಿಗಾದರೂ ಕೊರೋನಾ ಲಕ್ಷಣಗಳು ಕಂಡು ಬಂದರೆ ಅಂತವರ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲಾಗುವುದು. ಅಂಥವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುವುದು. ಲಕ್ಷಣಗಳು ಕಂಡು ಬರದೇ ಇರುವವರು 7 ದಿನ ಸಾಂಸ್ಥಿಕ ಕ್ವಾರಂಟೈನ್‌ ಪೂರ್ಣಗೊಂಡ ನಂತರ ಅವರನ್ನು ಹೋಂ ಕ್ವಾರಂಟೈನ್‌ ಮಾಡಿ ನಿಗಾ ಇಡಲಾಗುವುದು ಎಂದರು.

ಜಿಲ್ಲೆಯ ರೈಲು ನಿಲ್ದಾಣಕ್ಕೆ ವಿಜಯಪುರ ಜಿಲ್ಲೆ ಸೇರಿದಂತೆ ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಜನರು ಆಗಮಿಸಿದ್ದು ಅವರನ್ನು ಆಯಾ ಜಿಲ್ಲೆಗೆ ಕಳುಹಿಸಿಕೊಡಲು ಬಸ್‌ ವ್ಯವಸ್ಥೆ ಹಾಗೂ ಆಹಾರ ಕಿಟ್‌ಗಳ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ತಹಸೀಲ್ದಾರ್‌ ಮೋಹನಕುಮಾರಿ, ವಿಜಯಪುರ ಉಪವಿಭಾಗಾಧಿಕಾರಿ ಸೋಮಲಿಂಗ ಗೆಣ್ಣೂರ, ಡಿ.ವೈ.ಎಸ್‌.ಪಿ ಲಕ್ಷೀನಾರಾಯಣ ಸೇರಿದಂತೆ ಇತರ ಅಧಿಕಾರಿಗಳಿದ್ದರು.
 

click me!