Asianet Suvarna News Asianet Suvarna News

ವಿವಾಹಿತನ ಕಾಮದಾಟದಿಂದ ಹೆಣ್ಣು ಮಗುವಿಗೆ ಜನ್ಮ ನೀಡಿದ 13ರ ಬಾಲೆ

ಕಾಮುಕನ ಕಾಮದಾಟಕ್ಕೆ ಸಿಲುಕಿದ 13 ವರ್ಷದ ಬಾಲೆಯೊಬ್ಬಳು, ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ಸಿಂದಗಿ ತಾಲೂಕಿನ ಗೊರವಗುಂಡಗಿ ಗ್ರಾಮದ ಕಟ್ಟಡ ಕಾರ್ಮಿಕ ಶರಣಬಸು ಅವರಾದಿ (35) ಬಾಲೆ‌ ಮೇಲೆ ಅತ್ಯಾಚಾರ ಎಸಗಿದ ಕಾಮುಕ.

13 year old girl gives birth to babygirl in vijayapura
Author
Bangalore, First Published Jun 2, 2020, 1:25 PM IST

ವಿಜಯಪುರ(ಜೂ. 02): ಕಾಮುಕನ ಕಾಮದಾಟಕ್ಕೆ ಸಿಲುಕಿದ 13 ವರ್ಷದ ಬಾಲೆಯೊಬ್ಬಳು, ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಸಿಂದಗಿ ತಾಲೂಕಿನಲ್ಲಿ ನಡೆದಿದೆ. ಸಿಂದಗಿ ತಾಲೂಕಿನ ಗೊರವಗುಂಡಗಿ ಗ್ರಾಮದ ಕಟ್ಟಡ ಕಾರ್ಮಿಕ ಶರಣಬಸು ಅವರಾದಿ (35) ಬಾಲೆ‌ ಮೇಲೆ ಅತ್ಯಾಚಾರ ಎಸಗಿದ ಕಾಮುಕ.

ಈತ ಬಾಲೆಯನ್ನು ಮದುವೆಯಾಗುವುದಾಗಿ ನಂಬಿಸಿ ಒಂದು ವರ್ಷದಿಂದ ಬಾಲೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಈತನಿಗೆ ಮದುವೆಯಾಗಿ ಮಕ್ಕಳಿವೆ. ಮೂವರು ಮಕ್ಕಳೊಂದಿಗೆ ಬೆಂಗಳೂರಿನ ಕೆಂಗೇರಿ ಬಳಿಯ ಅನೆಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ.

ಕಾಲ್‌ಗರ್ಲ್ಸ್‌ ಜೊತೆ ಸಿಕ್ಕಾಕೊಂಡ ಪತ್ರಕರ್ತ: ವಾಟ್ಸಾಪ್‌ನಲ್ಲಿ ಸೆಕ್ಸ್ ರಾಕೆಟ್ ದಂಧೆ!

ಅಪ್ರಾಪ್ತ ಬಾಲಕಿಯ ಕುಟುಂಬದೊಂದಿಗೆ ಸ್ನೇಹ ಬೆಳೆಸಿದ್ದ. ಅಲ್ಲಿಯೇ ಇದ್ದ ಬಸವನ ಬಾಗೇವಾಡಿ ತಾಲೂಕಿನ ಈ ಬಾಲೆಯ ತಾಯಿ ತನ್ನ ಮೂವರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ನೆಲೆಸಿ ಕೂಲಿ ಕೆಲಸ ಮಾಡಿಕೊಂಡಿದ್ದರು.

ತಾಯಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಲಕಿಯೊಂದಿಗೆ ಸಲುಗೆಯಿಂದ ವರ್ತಿಸಿ ಮದುವೆಯಾಗುವುದಾಗಿ ನಂಬಿಸಿ ಆರೋಪಿ ಈ ಕೃತ್ಯ ಎಸಗಿದ್ದಾನೆ. ಈ ವಿಚಾರ ಬಾಲಕಿಯ ತಾಯಿಗೆ ಗೊತ್ತಾದ ಬಳಿಕ ಯಾರಿಗೂ ಹೇಳದಂತೆ ಅವಳಿಗೂ ಜೀವ ಬೆದರಿಕೆ ಹಾಕಿದ್ದ.

ಪತ್ನಿ ಜತೆ ಅನೈತಿಕ ಸಂಬಂಧ; ಸ್ನೇಹಿತನ ಹತ್ಯೆಗೈದ ಚಾಲಕ!

ಲಾಕ್​​ ಡೌನ್ ಬಳಿಕ ಆ ತಾಯಿ ತನ್ನ ಮಕ್ಕಳೊಂದಿಗೆ ವಿಜಯಪುರ ಜಿಲ್ಲೆಯ ಸಿಂದಗಿಗೆ ವಾಪಸ್ಸಾಗಿದ್ದರು. ಆಗ ಆ ಬಾಲಕಿಯನ್ನು ಮದುವೆಯಾಗುವುದಾಗಿ ಮತ್ತೆ ನಂಬಿಸಿದ್ದ ಆರೋಪಿ ಆ ಬಾಲಕಿಯನ್ನು ಬೇರೊಂದು ಊರಿನಲ್ಲಿ ಶೆಡ್ ಹಾಕಿ ಇಟ್ಟಿದ್ದ ಎನ್ನಲಾಗಿದೆ.

ಆತಂಕಕ್ಕೊಳಗಾದ ಬಾಲಕಿಯ ತಾಯಿ ವಿಜಯಪುರ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾಳೆ. ಆಗ ಸಹಾಯವಾಣಿ ಕೇಂದ್ರ ನಿರ್ದೇಶಕಿ ಸುನಂದಾ ತೋಳಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಕೊನೆಗೂ ತಾಯಿಗೆ ಧೈರ್ಯ ಹೇಳಿದ್ದರಿಂದ ಬಾಲಕಿಯ ತಾಯಿ ಸಿಂದಗಿ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸಿಂದಗಿ ಪೊಲೀಸರು, ಆರೋಪಿ ಬಂಧನಕ್ಕೆ ಜಾಲ ಬೀಸಿದ್ದಾರೆ.

Follow Us:
Download App:
  • android
  • ios