ಅಂತರ್‌ ರಾಜ್ಯ ಸಂಚಾರ ಅವಕಾಶ: ಇವಿಷ್ಟು ನಿಯಮ ಅನುಸರಿಸಲೇ ಬೇಕು

By Kannadaprabha NewsFirst Published Jun 3, 2020, 9:56 AM IST
Highlights

ಅಂತರ್‌ ರಾಜ್ಯ ಸಂಚಾರ ಸಂಬಂಧಿಸಿದಂತೆ ಕಾಸರಗೋಡಿನ ಜಿಲ್ಲಾಧಿಕಾರಿ ಕೊನೆಗೂ ಜೂ. 3ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದಾರೆ. ಕಾಸರಗೋಡು ಪ್ರವೇಶಿಸುವವರೂ, ಮಂಗಳೂರಿಗೆ ಹೋಗುವವರೂ ಅನುಸರಿಸಲೇ ಬೇಕಾದ ಮಾರ್ಗ ಸೂಚಿ ಹೀಗಿದೆ.

ಮಂಗಳೂರು(ಜೂ.03): ಅಂತರ್‌ ರಾಜ್ಯ ಸಂಚಾರ ಸಂಬಂಧಿಸಿದಂತೆ ಕಾಸರಗೋಡಿನ ಜಿಲ್ಲಾಧಿಕಾರಿ ಕೊನೆಗೂ ಜೂ. 3ರಿಂದ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಕಾಸರಗೋಡು ಜಿಲ್ಲೆಗೆ ಪ್ರವೇಶಿಸಲು ಬಯಸುವ ವ್ಯಕ್ತಿಗಳು ಕೋವಿಡ್‌-19 ಜಾಗೃತಾ ಪೋರ್ಟಲ್‌ನಲ್ಲಿ ಎಮರ್ಜೆನ್ಸಿ ಪಾಸ್‌ಗಾಗಿ ನೋಂದಣಿ ಮಾಡಬೇಕು. ಮತ್ತು ಅದಕ್ಕೆ ಇಂಟರ್‌ಸ್ಟೇಟ್‌ ಟ್ರಾವೆಲ್‌ ಆನ್‌ ಡೈಲಿ ಬೇಸಿಸ್‌ ಎಂಬ ಕಾರಣವನ್ನು ನಮೂದಿಸಬೇಕು.

ಚಂಡಮಾರುತ ಹಿನ್ನೆಲೆ ರೈಲುಗಳ ಮಾರ್ಗ ಬದಲಾವಣೆ

ಈ ಆನ್‌ಲೈನ್‌ ಅರ್ಜಿ ಲಭಿಸಿದ ಒಂದು ಗಂಟೆಯೊಳಗಾಗಿ ಕಾಸರಗೋಡು ಅಡಿಶನಲ್‌ ಡಿಸ್ಟ್ರಿಕ್ಟ್ ಮ್ಯಾಜಿಸ್ಪ್ರೇಟ್‌ ಅಥವಾ ಕಾಞಂಗಾಡ್‌ ಡಿವಿಷನಲ್‌ ಮ್ಯಾಜಿಸ್ಪ್ರೇಟ್‌ ಪಾಸ್‌ ಗಳನ್ನು ವಿತರಿಸಲು ಆದೇಶ ನೀಡುವರು.

ಈ ಪಾಸ್‌ಗಳಿಗೆ 28 ದಿವಸಗಳ ಅವಧಿ ಇರುತ್ತವೆ. ಈ ಪಾಸ್‌ಗಳನ್ನು ವಿತರಿಸುವ ವೇಳೆ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಪ್ರೇಟ್‌, ಕಾಸರಗೋಡು/ಉಪ ವಿಭಾಗೀಯ ಮ್ಯಾಜಿಸ್ಪ್ರೇಟ್‌, ಕಾಞಂಗಾಡ್‌ ಅವರು Comply with the direction in the order of the DISTRICT COLLECTOR dated on 02&06&2020 vide order No 1331 /2020/KL ಎಂದು ನಮೂದಿಸಬೇಕಾಗಿದೆ.

ಮಂಗಳೂರಿಗೆ ಎನ್‌ಡಿಆರ್‌ಎಫ್‌ ತಂಡ ಆಗಮನ

ಈ ಪಾಸ್‌ ಒದಗಿಸಿದ ಬಳಿಕ , ಪಾಸ್‌ನ ಸಮಗ್ರ ಮಾಹಿತಿಗಳನ್ನು ಚೆಕ್‌ಪೋಸ್ವ್‌ ಸಮೀಪ ಕ್ಯಾಂಪ್‌ ನಡೆಸುತ್ತಿರುವ ಮಂಜೇಶ್ವರ ತಹಸೀಲ್ದಾರ್‌ ಅವರ ಸಮಕ್ಷಮ ನೀಡಬೇಕಿದೆ.

ವ್ಯಕ್ತಿಯ ಹೆಸರು, ವಿಳಾಸ, ಫೋನ್‌ ನಂಬರ್‌, ಪ್ರವೇಶಿಸುವ ದಿನಾಂಕ, ಮರಳಿ ಹೋಗುವ ದಿನಾಂಕವನ್ನು ನೀಡಬೇಕಿದೆ. ರಿಜಿಸ್ಟರ್‌ನಲ್ಲಿ ಅನುಕ್ರಮವಾಗಿ ಪಾಸ್‌ ನಂಬರ್‌ ನಮೂದಿಸಬೇಕಾಗಿದೆ.

ಬಸ್‌ಗಳಿಗೆ ಪ್ರಯಾಣಿಕರ ಕೊರತೆ: ನಿಯಮ ಉಲ್ಲಂಘಿಸಿದ 15 ಬಸ್‌ಗೆ ದಂಡ

ಪಾಸ್‌ ಲಭಿಸಿದ ಕೂಡಲೇ ನಿತ್ಯ ಪ್ರಯಾಣಿಕರು ತಲಪಾಡಿ ಬಳಿ ಇರುವ ಚೆಕ್‌ಪೋಸ್ವ್‌ನಲ್ಲಿ ಹಾಜರಾಗಿ, ಅಲ್ಲಿರುವ ವೈದ್ಯಕೀಯ ತಂಡದ ಕೋವಿಡ್‌ 19 ಪರಿಶೋಧನೆಗೆ ಒಳಪಡಬೇಕಿದೆ. ಮೇಲಿನ ಎಲ್ಲ ಪ್ರಕ್ರಿಯೆ ಕಾಸರಗೋಡು ಜಿಲ್ಲೆಗೆ ಪ್ರವೇಶಿಸುವಾಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂಚರಿಸುವಾಗ ಕಡ್ಡಾಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

click me!