ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಅದ್ಧೂರಿ ಮದುವೆ ನಡೆಯುತ್ತಿಲ್ಲ. ಬದಲಾಗಿ ಸಂಪ್ರದಾಯದಂತೆ ಸರಳ ರೀತಿಯಲ್ಲಿ ವಿವಾಹ ನಡೆಯುತ್ತಿದೆ. ಮೂಲ ಸಂಪ್ರದಾಯದಂತೆ ಮದುವೆ ಮಾಡುವತ್ತ ಮುಖ ಮಾಡಿರುವ ಕೊಡವರು, ಹಳೆಯ ಸಂಪ್ರದಾಯದಂತೆ ಮನೆಯಲ್ಲೇ ಮದುವೆ ಮಾಡುತ್ತಿದ್ದಾರೆ.
ವಿರಾಜಪೇಟೆ(ಮೇ.03): ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಅದ್ಧೂರಿ ಮದುವೆ ನಡೆಯುತ್ತಿಲ್ಲ. ಬದಲಾಗಿ ಸಂಪ್ರದಾಯದಂತೆ ಸರಳ ರೀತಿಯಲ್ಲಿ ವಿವಾಹ ನಡೆಯುತ್ತಿದೆ. ಮೂಲ ಸಂಪ್ರದಾಯದಂತೆ ಮದುವೆ ಮಾಡುವತ್ತ ಮುಖ ಮಾಡಿರುವ ಕೊಡವರು, ಹಳೆಯ ಸಂಪ್ರದಾಯದಂತೆ ಮನೆಯಲ್ಲೇ ಮದುವೆ ಮಾಡುತ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆಯಾಗಿ ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿ ಕೊಡವರ ಪುರಾತನ ಮನೆ ಮಂಗಲ ಸಂಪ್ರದಾಯದಂತೆ ಮನೆಯಲ್ಲಿಯೇ ಮದುವೆ ಸಮಾರಂಭ ಸರಳವಾಗಿ ನಡೆದಿದೆ. ನಾಯಕಂಡ ಎನ್.ಸೋನಾ ಎಂಬುವವರನ್ನು ಕರ್ತಮಾಡ ಪುನೀತ್ ಕೈಹಿಡಿದಿದ್ದಾರೆ.
ಹಣ್ಣು-ತರಕಾರಿ ಮಾರಲು ಬಂದ್ರೆ ಕಲ್ಲೆಸೆಯುವಂತೆ ಗ್ರಾಮ ಪಂಚಾಯತ್ ಸೂಚನೆ
ಮನೆ ಮಂಗಲ ಸಂಪ್ರದಾಯವನ್ನು ಕೇವಲ ಕೇಳಿಯೇ ತಿಳಿದುಕೊಂಡಿದ್ದ ಯುವಪೀಳಿಗೆ, ಈಗ ನಿಜವಾದ ಪುರಾತನ ಸಂಪ್ರದಾಯದಂತೆ ಮದುವೆ ಸಮಾರಂಭವನ್ನು ಕಣ್ತುಂಬಿಕೊಂಡರು. ಹಿಂದಿನ ಕಾಲದಲ್ಲಿ ಛತ್ರಗಳಲ್ಲಿ ಮದುವೆ ಮಾಡದೆ ವರನ ಮನೆಯಲ್ಲೇ ಮದುವೆ ಶಾಸ್ತ್ರ ನಡೆಯುತ್ತಿತ್ತು. ನಂತರ ವಧುವಿನ ಮನೆಗೆ ಹೋಗಿ ಬರುವ ಶಾಸ್ತ್ರ ಇತ್ತು. ಕಳೆದ 30 ವರ್ಷದಿಂದ ಈ ಸಂಪ್ರದಾಯ ನಿಂತು ಹೋಗಿತ್ತು.