ಅದಮಾರು ಮಠದ 2 ಶಾಲೆಗಳ 1 ತಿಂಗಳ ಶುಲ್ಕ 21 ಲಕ್ಷ ರು. ರಿಯಾಯ್ತಿ

By Kannadaprabha News  |  First Published May 12, 2020, 9:04 AM IST

ಲಾಕ್‌ಡೌನ್‌ನಿಂದಾಗಿ ಸಮಾಜದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಇಲ್ಲಿನ ಅದಮಾರು ಮಠವು ತನ್ನ 2 ಶಾಲೆಗಳ ವಿದ್ಯಾರ್ಥಿಗಳ ಒಂದು ತಿಂಗಳ ಶುಲ್ಕ ಸುಮಾರು 21 ಲಕ್ಷ ರು.ಗಳನ್ನು ತಾನೇ ಭರಿಸಲಿದೆ ಎಂದು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.


ಉಡುಪಿ(ಮೇ 12): ಲಾಕ್‌ಡೌನ್‌ನಿಂದಾಗಿ ಸಮಾಜದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿ ಇಲ್ಲಿನ ಅದಮಾರು ಮಠವು ತನ್ನ 2 ಶಾಲೆಗಳ ವಿದ್ಯಾರ್ಥಿಗಳ ಒಂದು ತಿಂಗಳ ಶುಲ್ಕ ಸುಮಾರು 21 ಲಕ್ಷ ರು.ಗಳನ್ನು ತಾನೇ ಭರಿಸಲಿದೆ ಎಂದು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಅವರು ಸೋಮವಾರ ತಮ್ಮ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದ್ದಾರೆ. ತಮ್ಮ ಮೂಲಮಠ ಇರುವ ಅದಮಾರು ಗ್ರಾಮದ ಪೂರ್ಣಪ್ರಜ್ಞಾ ಶಾಲೆ ಮತ್ತು ಪಕ್ಕದ ಪಡುಬಿದ್ರೆಯ ಗಣಪತಿ ಹೈಸ್ಕೂಲುಗಳ ಸುಮಾರು 2000 ಮಂದಿ ವಿದ್ಯಾರ್ಥಿಗಳು ಈ ಶುಲ್ಕ ರಿಯಾಯತಿ ಲಾಭ ಪಡೆಯಲಿದ್ದಾರೆ. ಜೊತೆಗೆ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವುದಕ್ಕೂ ನಿರ್ಧರಿಸಲಾಗಿದೆ ಎಂದು ಹೇಳಿದರು.

Latest Videos

undefined

ಊರಿಗೆ ಕಳಿಸ್ತೀವಂತ ಹಣ ಕೀಳ್ತಿದ್ದಾರೆ ಮಧ್ಯವರ್ತಿಗಳು: ಮೋಸದ ಜಾಲ

ಈಗಾಗಲೇ ಮಠದ ಕಡೆಯಿಂದ 2000 ಕುಟುಂಬಗಳಿಗೆ ದಿನಸಿ ಕಿಟ್‌ ಗಳನ್ನು ವಿತರಿಸಿದ್ದೇವೆ, ಪ್ರಧಾನಮಂತ್ರಿ ಪರಿಹಾರ ನಿಧಿಗೆ 55,55,555 ರು. ದೇಣಿಗೆ ನೀಡಿದ್ದೇವೆ. ಲಾಕ್‌ಡೌನ್‌ನಿಂದಾಗಿ ಮಠಕ್ಕೆ ಭಕ್ತರು ಬರುತ್ತಿಲ್ಲ, ಆದ್ದರಿಂದ ಮಠದ ಆದಾಯಕ್ಕೂ ತಡೆಯಾಗಿದೆ. ಆದರೆ ಮಠದ ಮತ್ತು ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳ ವೇತನದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದರು. ಜನ ಉದ್ಯೋಗ ಇಲ್ಲದೆ ಗೃಹಬಂಧನದಲ್ಲಿದ್ದಾರೆ, ಮನುಷ್ಯನ ತನ್ನ ಮಿತಿಮೀರಿದ ನಡವಳಿಕೆಯಿಂದ ಆಪತ್ತು ಎರಗಿದೆ. ಈ ಸಂದರ್ಭದಲ್ಲಿ ಸರ್ಕಾರದ ನಿಮಯಗಳನ್ನು ಪಾಲಿಸುವುದರ ಜೊತೆಗೆ ಭಗವಂತನ ಸ್ಮರಣೆ ಕೂಡ ಹೆಚ್ಚು ಅಗತ್ಯವಾಗಿದೆ ಎಂದ ಶ್ರೀಗಳು ಕರೆ ನೀಡಿದರು.

click me!