ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 204 ಜನರ ರಕ್ಷಣೆ

By Suvarna News  |  First Published Feb 14, 2020, 10:31 AM IST

ಜೀತ ಪದ್ಧತಿ ಇನ್ನೂ ಜೀವಂತ ಇದೆ ಎಂದರೆ ನಂಬಲು ಕಷ್ಟ. ಆದರೆ ಚಿಕ್ಕಬಳ್ಳಾಪುರದಲ್ಲಿ ಇಟ್ಟಿಗೆ ಫ್ಯಾಕ್ಟರಿಯಿಂದ 204 ಜೀತದಾಳುಗಳನ್ನು ರಕ್ಷಿಸಲಾಗಿದೆ.


ಚಿಕ್ಕಬಳ್ಳಾಪುರ(ಫೆ.14): ಜೀತ ಪದ್ಧತಿ ಇನ್ನೂ ಜೀವಂತ ಇದೆ ಎಂದರೆ ನಂಬಲು ಕಷ್ಟ. ಆದರೆ ಚಿಕ್ಕಬಳ್ಳಾಪುರದಲ್ಲಿ ಇಟ್ಟಿಗೆ ಫ್ಯಾಕ್ಟರಿಯಿಂದ 204 ಜೀತದಾಳುಗಳನ್ನು ರಕ್ಷಿಸಲಾಗಿದೆ.

ಸಿಲಿಕಾನ್ ಸಿಟಿ ಹೊರವಲಯದಲ್ಲಿ ಜೀತ ಪದ್ಧತಿ ಇನ್ನೂ ಜೀವಂತವಾಗಿದ್ದು, ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದ 204 ಜನರನ್ನು ರಕ್ಷಣೆ ಮಾಡಲಾಗಿದೆ. ಯಲಹಂಕ ತಾಲೂಕಿನ ಕೊಂಡಶೆಟ್ಟಿಹಳ್ಳಿ ಬಳಿಯ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಜನರನ್ನು ರಕ್ಷಿಸಲಾಗಿದೆ.

Latest Videos

undefined

ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ

ಒರಿಸ್ಸಾ ಮೂಲದ 204 ಜನ ಫ್ಯಾಕ್ಟರಿಯಲ್ಲಿ ಜೀತಕ್ಕಿದ್ದರು. ಫ್ಯಾಕ್ಟರಿಯಿಂದ ಹೊರಹೋಗಲು ಬಿಡದೆ, ಕೂಲಿಯು ನೀಡದೆ ಅಲ್ಪ ಸ್ವಲ್ಪ ಹಣ ನೀಡಿ ಕಾರ್ಮಿಕರನ್ನು ಜೀತಕ್ಕಿಟ್ಟುಕೊಳ್ಳಲಾಗಿತ್ತು.

ಯಲಹಂಕ ತಹಶೀಲ್ದಾರ್ ರಘುಮೂರ್ತಿ ನೇತೃತ್ವದಲ್ಲಿ ಜೀತದಾಳುಗಳ ರಕ್ಷಣೆ ಮಾಡಲಾಗಿದ್ದು, ಮಾಲೀಕ ಗಣೇಶಪ್ಪ ವಿರುದ್ದ ತಹಶೀಲ್ದಾರ್ ರಿಂದ ಪ್ರಕರಣ ದಾಖಲಾಗಿದೆ. 204 ಜನರಿಗೆ ತಾಲೂಕು ಆಡಳಿತದಿಂದ ಯಲಹಂಕದ ಹಾಸ್ಟೆಲ್‌ನಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ರಕ್ಷಣೆ ಮಾಡಿದ ಎಲ್ಲರನ್ನು ಒರಿಸ್ಸಾಗೆ ಕಳಿಸಲು ಸಿದ್ದತೆ ನಡೆಸಲಾಗಿದ್ದು ಯಶವಂತಪುರ ರೈಲ್ವೆ‌ ನಿಲ್ಥಾಣದಿಂದ ಕಳಿಸಲು ವ್ಯವಸ್ಥೆ ಮಾಡಲಾಗಿದೆ. ಅಧಿಕಾರಿಗಳು ದಾಳಿ ಮಾಡ್ತಿದ್ದಂತೆ ಆರೋಪಿ ಮಾಲೀಕ ಎಸ್ಕೇಪ್ ಆಗಿದ್ದಾನೆ.

ಜೀತಕ್ಕೆ ಒಪ್ಪದ ಮಹಿಳೆಯನ್ನು ಬಲವಂತವಾಗಿ ಹೊತ್ತೊಯ್ದ ಮಾಲೀಕರು

click me!