ಈಗಾಗಲೇ ಹೊರರಾಜ್ಯದಿಂದ ಉಡುಪಿಗೆ ಬರುವುದಕ್ಕೆ ಮೊದಲ ಹಂತದಲ್ಲಿ 6,000 ಮಂದಿ ಹೆಸರು ನೊಂದಾಯಿಸಿದ್ದು, ರಾಜ್ಯ ಸರ್ಕಾರ ಅನುಮತಿಗೆ ಕಾಯಲಾಗುತ್ತಿದೆ. ಒಟ್ಟು ವಿದೇಶ ಮತ್ತು ಹೊರರಾಜ್ಯದಿಂದ ಜಿಲ್ಲೆಗೆ ಸುಮಾರು 20,000 ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ಡಿಸಿ ತಿಳಿಸಿದ್ದಾರೆ.
ಉಡುಪಿ(ಮೇ.09): ಹೊರದೇಶ ಮತ್ತು ಹೊರ ರಾಜ್ಯಗಳಿಂದ ಉಡುಪಿ ಜಿಲ್ಲೆಗೆ ಬರುವವರಿಗೆ ಕ್ವಾರಂಟೈನ್ ಕಡ್ಡಾಯವಾಗಿದೆ. ಆದ್ದರಿಂದ ಜಿಲ್ಲೆಯ ಖಾಸಗಿ ಶಾಲಾ-ಕಾಲೇಜುಗಳನ್ನು ಮತ್ತು ಹಾಸ್ಟೆಲ್ ಗಳನ್ನು ಜಿಲ್ಲಾಡಳಿತ ಕೋರಿದ ತಕ್ಷಣ ಬಿಟ್ಟುಕೊಡಬೇಕು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸೂಚಿಸಿದ್ದಾರೆ.
ಜಿಲ್ಲೆಯ ಸರ್ಕಾರಿ, ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯಲ್ಲಿ ಮಾತನಾಡಿದರು. ಹೊರ ದೇಶ, ರಾಜ್ಯಗಳಿಂದ ಬರುವವರಿಂದ ಜಿಲ್ಲೆಯ ಜನರಿಗೆ ಕೋವಿಡ್ ಹರಡದಂತೆ ರಕ್ಷಿಸುವುದು ಅತ್ಯಂತ ಸವಾಲಿನ ಕೆಲಸ. ಅದಕ್ಕಾಗಿ ಜಿಲ್ಲೆಯ ಹಾಸ್ಟೆಲ್, ಶಾಲಾ ಕಾಲೇಜುಗಳನ್ನು ಬಳಸಿಕೊಳ್ಳಲಾಗುತ್ತದೆ.
12ರಂದು ಕಣ್ಣೂರಿಗೆ, 14ರಂದು ಮಂಗಳೂರಿಗೆ ಭಾರತೀಯರ ಏರ್‌ಲಿಫ್ಟ್
ಆದ್ದರಿಂದ ಯಾವುದೇ ಸಬೂಬುಗಳನ್ನು ಹೇಳದೆ ತಮ್ಮ ಕಟ್ಟಡವನ್ನು ಜಿಲ್ಲಾಡಳಿತಕ್ಕೆ ಬಿಟ್ಟು ಕೊಡಬೇಕು. ಕಟ್ಟಡಕ್ಕೆ ಸಣ್ಣಪುಟ್ಟದುರಸ್ತಿಗಳಿದ್ದರೆ ತಕ್ಷಣ ಮಾಡಿಸಿ ಎಂದು ಹೇಳಿದರು.
ಈಗಾಗಲೇ ಹೊರರಾಜ್ಯದಿಂದ ಉಡುಪಿಗೆ ಬರುವುದಕ್ಕೆ ಮೊದಲ ಹಂತದಲ್ಲಿ 6,000 ಮಂದಿ ಹೆಸರು ನೊಂದಾಯಿಸಿದ್ದು, ರಾಜ್ಯ ಸರ್ಕಾರ ಅನುಮತಿಗೆ ಕಾಯಲಾಗುತ್ತಿದೆ. ಒಟ್ಟು ವಿದೇಶ ಮತ್ತು ಹೊರರಾಜ್ಯದಿಂದ ಜಿಲ್ಲೆಗೆ ಸುಮಾರು 20,000 ಮಂದಿ ಆಗಮಿಸುವ ನಿರೀಕ್ಷೆಯಿದೆ ಎಂದು ಡಿಸಿ ತಿಳಿಸಿದ್ದಾರೆ. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಎಸಿ ರಾಜು, ಡಿಎಚ್‌ಒ ಡಾ.ಸುಧೀರ್ ಚಂದ್ರ ಸೂಡಾ, ಡಿಡಿಪಿಐ ಶೇಷಶಯನ ಕಾರಿಂಜ ಉಪಸ್ಥಿತರಿದ್ದರು.
ಕ್ವಾರಂಟೈನ್ ಕೇಂದ್ರಕ್ಕೆ ಅಡ್ಡಿ ಮಾಡಿದರೆ ಜೈಲು
ಕ್ವಾರಂಟೈನ್ ಕೇಂದ್ರ ಆರಂಭಕ್ಕೆ ಯಾರೂ ವಿರೋಧಿಸುವಂತಿಲ್ಲ. ವಿರೋಧ ವ್ಯಕ್ತಪಡಿಸಿ, ಅಡ್ಡಿಪಡಿಸಿದರೆ ಸೆಕ್ಷನ್ 188, 269, 270ರ ಪ್ರಕಾರ ಜೈಲು ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಗದೀಶ್ ಎಚ್ಚರಿಸಿದ್ದಾರೆ. ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲಾಗುತ್ತದೆ. ಗ್ರಾ.ಪಂ. ಮೂಲಕ ನೀರಿನ ವ್ಯವಸ್ಥೆ ಮಾಡಲಾಗುತ್ತದೆ. ಸಂಬಂಧಿಸಿದ ಸಂಸ್ಥೆಯ ಸಿಬ್ಬಂದಿಯನ್ನು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದವರು ತಿಳಿಸಿದ್ದಾರೆ.