* ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ಹೊಂದಾಣಿಕೆಯಿಂದ ಇದ್ದಾರೆ
* ನಮ್ಮ ಪಕ್ಷದಲ್ಲಿ ಎಲ್ಲವೂ ಬಹಳ ಚೆನ್ನಾಗಿ ಇದೆ
* ಶಾಸಕಾಂಗದ ಸದಸ್ಯರು ನಿರ್ಧರಿಸಿದವರು, ಹೈಕಮಾಂಡ್ ಸೂಚಿಸಿದವರು ಸಿಎಂ ಆಗುವ ಪದ್ಧತಿ ನಮ್ಮಲ್ಲಿದೆ
ವರದಿ: ವರದರಾಜ್, ಏಷ್ಯಾನೆಟ್ ಸುವರ್ಣ್ ನ್ಯೂಸ್, ದಾವಣಗೆರೆ
ದಾವಣಗೆರೆ(ಏ.15): ಸಿದ್ದರಾಮಯ್ಯ(Siddaramaiah) ಕಾಂಗ್ರೆಸ್‌ನಲ್ಲಿ ಸೀನಿಯರ್ ಮೋಸ್ಟ್ ಇದ್ದಾರೆ ಅವರು ಮುಖ್ಯಮಂತ್ರಿಯಾಗುವುದರಲ್ಲಿ ತಪ್ಪಿಲ್ಲ ಎಂದು ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಸ್.ಎಸ್. ಮಲ್ಲಿಕಾರ್ಜುನ್(SS Mallikarjun) ಅಭಿಪ್ರಾಯಪಟ್ಟಿದ್ದಾರೆ. ಇಂದು(ಶುಕ್ರವಾರ) ನಗರದ ಕುಂದವಾಡ ಕೆರೆ ಕಾಮಗಾರಿ ವೀಕ್ಷಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್(DK Shivakumar) ಹೊಂದಾಣಿಕೆಯಿಂದ ಇದ್ದಾರೆ. ನಮ್ಮ ಪಕ್ಷದಲ್ಲಿ ಎಲ್ಲವೂ ಬಹಳ ಚೆನ್ನಾಗಿ ಇದೆ. ಶಾಸಕಾಂಗದ ಸದಸ್ಯರು ನಿರ್ಧರಿಸಿದವರು, ಹೈಕಮಾಂಡ್ ಸೂಚಿಸಿದವರು ಮುಖ್ಯಮಂತ್ರಿ(Chief Minister) ಆಗುವ ಪದ್ಧತಿ ನಮ್ಮಲ್ಲಿದೆ ಎಂದರು.
ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಹೇಳುತ್ತಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಲ್ಲಿಕಾರ್ಜುನ್, ಸಿದ್ದರಾಮಯ್ಯ ಸೀನಿಯರ್ ಮೋಸ್ಟ್ ಇದ್ದಾರೆ. ಅವರು ಮುಖ್ಯಮಂತ್ರಿ ಯಾಕೆ ಆಗಬಾರದು ಎಂದರು. ಈ ಹಿಂದೆ ನಮ್ಮ ತಂದೆ ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿ ಆಗಬೇಕು ಅಂತ ಹೇಳಿದ್ದರು. ಆಸೆ ಪಡುವುದರಲ್ಲಿ ತಪ್ಪೇನಿದೆ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ(Basavaraj Bommai) ಅಂತವರೇ ಮುಖ್ಯಮಂತ್ರಿ ಆಗಿಲ್ಲವೇ ನಾನು ಮುಖ್ಯಮಂತ್ರಿ ಆಗಬಹುದು. ಮುಂದಿನ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಖಚಿತ ಎಂದು ಹೇಳುವ ಮೂಲಕ ಭವಿಷ್ಯದ ರಾಜಕಾರಣ ಬಲ್ಲವರಾರು ಎಂಬ ಅರ್ಥದಲ್ಲಿ ಮಾತನಾಡಿದರು.
ಡಿಕೆಶಿ ಬಗ್ಗೆ ಬೇಗ ಎಚ್ಚೆತ್ತುಕೊಳ್ಳಿ, ನಿಮಗೂ ಖೆಡ್ಡಾ ತೋಡ್ಬಹುದು: ಸಿದ್ದುಗೆ ಎಚ್ಚರಿಕೆ ನೀಡಿದ ರೇಣುಕಾಚಾರ್ಯ
ಗುತ್ತಿಗೆದಾರ ಸಂತೋಷ್ ಪಾಟೀಲ್(Santosh Patil) ಆತ್ಮಹತ್ಯೆ(Suicide) ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ಗುರುವಾರ ಬಾಕಿ ಉಳಿದ ಫೈಲ್‌ಗಳಿಗೆ ಸಹಿ ಮಾಡಿ ರಾಜೀನಾಮೆ ಕೊಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಅನ್ಯಾಯವಾಗಿ ಒಂದು ಜೀವ ಬಲಿ ಕೊಟ್ಟಿದ್ದಾರೆ. ಕಾಮಗಾರಿ ಮಾಡಿದ್ದಾರೆ ಎಂದರೆ ನಿರ್ದೇಶನ ಇಲ್ಲದೆ ಮಾಡ್ತಾರಾ?. ಜಾತ್ರೆಗೆ ಅರ್ಜೆಂಟ್ ಇದೆ ಬೇಗ ಮಾಡಿ ಎಂದು ಹೇಳಿ, 40% ಕಮಿಷನ್ ಕೇಳಿದ್ರೆ ಅವನು ಎಲ್ಲಿ ಹೋಗಬೇಕು ಹೇಳಿ ಅಂತ ಕೇಳಿದರು.
ಕುಂದುವಾಡ ಕೆರೆಯ ಅಂದ ಹಾಳು ಮಾಡಿದ ಬಿಜೆಪಿ
ಬೇಸಿಗೆ ಆರಂಭವಾಗಿದೆ ಆದರೆ ಕುಡಿಯುವ ನೀರಿನ ಪ್ರಮುಖ ಮೂಲ ಕುಂದವಾಡ ಕೆರೆಯಲ್ಲಿ ಕಾಮಗಾರಿ ವಿಳಂಬದಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ನಿತ್ಯ ವಾಯುವಿಹಾರಕ್ಕೆ ಬರುವವರಿಗೂ ಅನಾನುಕೂಲವಾಗುತ್ತಿದೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ್ ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಕುಂದುವಾಡ ಕೆರೆಗೆ ಬರುವ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಇಂದು ಕೆರೆ ವೀಕ್ಷಿಸಲು ಆಗಮಿಸಿದ್ದೇನೆ ಇಲ್ಲಿನ ಅವ್ಯವಸ್ಥೆ, ಕೆರೆಯ ದುಸ್ಥಿತಿ ನೋಡಿ ಬೇಸರವಾಯಿತು. 15 ಕೋಟಿ ರೂ ಅನುದಾನದಲ್ಲಿ(Grants) ಕೇವಲ ಎರಡು ಗುಂಡಿ ಅಗೆದಿದ್ದಾರೆ ಕೆರೆಯ ಅಗಲ ಹಾಗೂ ಆಳ ಹೆಚ್ವಿಸಲು ಪ್ರಾಮುಖ್ಯತೆ ನೀಡದೆ ವಾಕ್ ಪಾಥ್ ಹೆಚ್ಚಿಸಿದ್ದಾರೆ ಅಷ್ಟೇ. ಅದನ್ನು ಬಿಟ್ಟು ಸ್ಟೋರೇಜ್ ಹೆಚ್ಚಳ ಮಾಡಿಲ್ಲ ಇದನ್ನು ನೋಡಿದರೆ ಇಲ್ಲಿಯೂ 40 ಪರ್ಸೆಂಟೇಜ್ ದಂಧೆ ತಪ್ಪಿಲ್ಲ ಎಂದು ಕಾಣುತ್ತಿದೆ.
Suicide Case: ಈಶ್ವರಪ್ಪನವರೇ ಮೊದಲು ರಾಜೀನಾಮೆ ನೀಡಿ: ಹೆಚ್.ಡಿ.ಕುಮಾರಸ್ವಾಮಿ
ದಾವಣಗೆರೆಯಲ್ಲಿ 20: 20 ಪರ್ಸೆಂಟೇಜ್
ದಾವಣಗೆರೆಯಲ್ಲಿ(Davanagere) ಶೇ 20 ರಷ್ಟು ಮೇಲಿನವರಿಗೆ, ಇಲ್ಲಿಯವರಿಗೆ 20 ರಂಗೆ ಹಂಚಿಕೆಯಾಗುತ್ತಿದೆ. ನಾವೇ ಕೆಲಸ ಮಾಡಿದ್ದೇವೆ ಎಂದು ಬಿಜೆಪಿಯವರು(BJP) ಬೊಬ್ಬೆ ಹೊಡೆಯುತ್ತಾರೆ ಯಾವ ಕೆಲಸ ಮಾಡಿದ್ದಾರೆ ಅಂತ ಬರೆದಿಡಲಿ ನಾವು ಬರುತ್ತೇವೆ. ಸುಮ್ಮನೆ ಮಾತನಾಡುವುದಲ್ಲ ಯಾವುದಾದರೂ ಒಂದು ಒಳ್ಳೆಯ ಹೆಸರು ತರುವ ಕೆಲಸವನ್ನು ಈ ನಾಲ್ಕು ವರ್ಷದಲ್ಲಿ ಮಾಡಿದ್ದಾರಾ ತೋರಿಸಲಿ ಎಂದು ಸವಾಲು ಹಾಕಿದರು. ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿಯ ಕೆಲಸವೇ ಇನ್ನೂ ಪೂರ್ಣಗೊಂಡಿಲ್ಲ ಅವರಿಂದ ಅದನ್ನೇ ಪೂರ್ಣ ಮಾಡಲು ಸಾಧ್ಯವಾಗಿಲ್ಲ. ನಗರದಲ್ಲಿ ವಿದ್ಯುತ್ ದೀಪ,ಜ ಲಶ್ರೀ ಯೋಜನೆ, ಯುಜಿಡಿ ಸಮಸ್ಯೆ, ಅಂಡರ್ ಗ್ರೌಂಡ್ ಕೇಬಲ್, ನೀರಿನ ಸಮಸ್ಯೆ ನೀಗಿಲ್ಲ.ರಸ್ತೆ ಹಾಳುಮಾಡುತ್ತಿದ್ದಾರೆಯೇ ಹೊರತು ಸ್ಮಾರ್ಟ್ ಸಿಟಿ ಕೆಲಸ ಎಂದು ಅಂದಿನ ಕಾಮಗಾರಿಗೆ ಬೋರ್ಡ್ ಹಾಕಿಸಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಹಿಂದೆ ದಾವಣಗೆರೆ ನಗರ ನೋಡಿ ಹೋದವರು ನಮ್ಮೂರನ್ನು ಇದೇ ರೀತಿ ಅಭಿವೃದ್ಧಿ ಮಾಡಬೇಕು ಎನ್ನುತ್ತಿದ್ದರು ಆದರೆ ಇಂದು ನಮ್ಮೂರು ರಸ್ತೆ ಗುಂಡಿಗಳ ನಗರವಾಗಿದೆ.ನಮ್ಮ ಅಧಿಕಾರವಾಧಿಯಲ್ಲಿ ಎಲ್ಲಾ ಖಾತೆಗೂ ಸಮರ್ಪಕ ಅನುದಾನ ಹಂಚಿಕೆಮಾಡಿ ಕೆಲಸ ಮಾಡಲಾಗುತ್ತಿತ್ತು ಆದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ಹಾಳುಮಾಡಿದೆ. ಇಂದಿರಾ ಕ್ಯಾಂಟೀನ್ ಬಂದ್ ಮಾಡಲಾಗಿದೆ. ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ.ಚಾಟಿ ಹಿಡಿದವರೇ ಮೇಯಲು ಹೊರಟರೆ ಉಳಿದವರು ಯಾವ ದಾರಿ ಹಿಡಿಯಲು ಸಾಧ್ಯ ಎಂದರು ಈ ವೇಳೆ ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿಪಕ್ಷ ನಾಯಕ ಮಂಜುನಾಥ್ ಗಡಿಗುಡಾಳ್, ಎ. ನಾಗರಾಜ್, ದಿನೇಶ್ ಕೆ ಶೆಟ್ಟಿ, ಗಣೇಶ್ ಹುಲ್ಲುಮನಿ ಹಾಗೂ ಕಾರ್ಯಕರ್ತರಿದ್ದರು.