* ಶಿರಹಟ್ಟಿ ಪಟ್ಟಣದಲ್ಲಿ ಗುಡುಗಿದ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್
* ಅಂಬೇಡ್ಕರ್ ಜಯಂತಿ ಕೇವಲ ಮಂದಿರ ಮಠಗಳಲ್ಲಿ ಆಚರಿಸಿದರೆ ಸಾಲದು, ಮಸೀದಿಗಳಲ್ಲಿಯೂ ಆಚರಿಸಿ
* ಭಾರತದಲ್ಲಿ ಹಿಂದು ಧರ್ಮದ ಜಾಗೃತಿ ಬಗ್ಗೆ ಶ್ರೀರಾಮ ಸೇನೆ ಹೋರಾಟ
ಶಿರಹಟ್ಟಿ(ಏ.15): ನಮ್ಮ ಪುಣ್ಯ ಭೂಮಿಯಲ್ಲಿ ಎಲ್ಲ ಧರ್ಮಿಯರಿಗೆ ಬದುಕಲು ಅವಕಾಶವಿದೆ. ಎಲ್ಲರೂ ಒಂದು, ಎಲ್ಲರೂ ಸರಿಸಮಾನರು ಎಂಬ ಭಾವನೆಯೊಂದಿಗೆ ಸಂವಿಧಾನಬದ್ಧ ಜೀವನಕ್ಕೆ ಮಾಡಿಕೊಟ್ಟಾಗಲೂ ಕೆಲ ಧರ್ಮಿಯರು ಹಿಂದೂಗಳ ಮನಸ್ಸುಗಳನ್ನು ಒಡೆದು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇನ್ನು ಮುಂದೆ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್(Pramod Mutalik) ಗುಡುಗಿದರು.
ಪಟ್ಟಣದಲ್ಲಿ ಬುಧವಾರ ಸಂಜೆ ಶ್ರೀರಾಮ ಸೇನೆ(Sri Ram Sene) ತಾಲೂಕು ಘಟಕ ಉದ್ಘಾಟಿಸಿದ ಅವರು, ಕೋಮುಸಾಮರಸ್ಯ ಕೇವಲ ಒಂದು ಧರ್ಮದವರಿಂದ ಆಗುವುದಿಲ್ಲ. ಎಲ್ಲರೂ ಸಹಕಾರ ನೀಡಿದಾಗ ಮಾತ್ರ ಶಾಂತಿ ಸಹಬಾಳ್ವೆ ಸಾಧ್ಯ ಎಂಬುದನ್ನು ಮುಸ್ಲಿಮರು(Muslim) ಮೊದಲು ಅರಿತುಕೊಳ್ಳಬೇಕು.
Gadag: ಸಂತೋಷ್ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಚಿಂತಿಸುತ್ತೇವೆ: ಸಿಎಂ ಬೊಮ್ಮಾಯಿ
ಚಪ್ಪಾಳೆ ಒಂದು ಕೈಯಿಂದ ಸಾಧ್ಯವಿಲ್ಲ. ನಿರಂತರವಾಗಿ ಹಿಂದೂಗಳ(Hindu) ಮೇಲೆ ದಬ್ಬಾಳಿಕೆ ಮಾಡುತ್ತ ಹಿಂದೂ ಜನಾಂಗದವರ ಮೇಲೆ ದೌರ್ಜನ್ಯ ನಡೆಯುವುದಕ್ಕೆ ಶ್ರೀರಾಮ ಸೇನೆ ಖಂಡಿತ ಅವಕಾಶ ಕೊಡುವುದಿಲ್ಲ. ಲವ್ ಜಿಹಾದಿಯಂತಹ(Love Jihad) ಹೀನ ಕೃತ್ಯಗಳು ನಡೆಯುತ್ತಲೇ ಇವೆ. ಪ್ರೀತಿ ಪ್ರೇಮದ ವಿಷಬೀಜ ಬಿತ್ತಿ ಸಮಾಜದಲ್ಲಿ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ ಕೈಬಿಡಿ. ಇಲ್ಲವೇ ಮುಂದಿನ ಪರಿಣಾಮಗಳನ್ನು ಎದುರಿಸಿ ಎಂದು ಸಂದೇಶ ರವಾನಿಸಿದರು.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ(BR Ambedkar Jayanti) ಕೇವಲ ಮಂದಿರ ಮಠಗಳಲ್ಲಿ ಆಚರಿಸಿದರೆ ಸಾಲದು. ಮಸೀದಿಗಳಲ್ಲಿಯೂ(Masjid) ಆಚರಿಸಿ. ನಿಮ್ಮ ಜಾತ್ಯಾತೀತ ನಿಲುವು ಹಾಗೂ ದೇಶದ ಕಾನೂನುಗಳನ್ನು ಗೌರವಿಸುತ್ತಿರಿ ಎಂಬುದರ ಬಣ್ಣ ಬಯಲಾಗುತ್ತೆ. ಭಾರತದಲ್ಲಿ(India) ಹಿಂದು ಧರ್ಮದ ಜಾಗೃತಿ ಬಗ್ಗೆ ಶ್ರೀರಾಮ ಸೇನೆ ಹೋರಾಟ ಮಾಡುತ್ತಿದೆ. ಕೆಲ ಹಿಂದು ಮುಖಂಡರ ಮೂಲಕ ನಮ್ಮ ಧ್ವನಿ ನಿಲ್ಲಿಸಲು ಮಾಡುತ್ತಿರುವ ಪ್ರಯತ್ನ ಇನ್ನು ಮುಂದೆ ಫಲಿಸದು ಎಂದರು.
ಪ್ರಗತಿಪರರು ನಾಯಿಗಳು, ಹಿಂದೂ ವಿರೋಧಿಗಳು: ಪ್ರಮೋದ್ ಮುತಾಲಿಕ್
ಶ್ರೀರಾಮ ಸೇನೆ ಜಿಲ್ಲಾ ಘಟಕ ಅಧ್ಯಕ್ಷ ರಾಜು ಖಾನಪ್ಪನವರ ಮಾತನಾಡಿ, ಶ್ರೀರಾಮ ಸೇನೆ ಕಾರ್ಯಕ್ರಮ ನಿಲ್ಲಿಸಬೇಕು ಹಾಗೂ ಪ್ರಮೋದ್ ಮುತಾಲಿಕ್ ಪಟ್ಟಣಕ್ಕೆ ಬರಲು ಅವಕಾಶ ನೀಡಬೇಡಿ ಎಂದು ಕೆಲ ಮುಸ್ಲಿಂ ಮುಖಂಡರು ತಹಸೀಲ್ದಾರ್ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ಪಾಕಿಸ್ತಾನ ಅಥವಾ ಬೇರೆ ಯಾವದೋ ದೇಶದಲ್ಲಿ ಕಾರ್ಯಕ್ರಮ ಮಾಡುತ್ತಿಲ್ಲ. ಇನ್ನು ಮುಂದೆ ಇಂತಹ ಚಟುವಟಿಕೆ ನಡೆದರೆ ಪರಿಣಾಮ ನೆಟ್ಟಗಿರುವದಿಲ್ಲ ಎಂದು ಎಚ್ಚರಿಸಿದರು.
ಸ್ಥಳೀಯ ಮುಂಡನೊಬ್ಬ ಕೆಲ ಶರಣರ ವಚನ ಹೇಳಿ ಹಿಂದೂಗಳ ಮತ ಪಡೆದು ರಾಜಕೀಯ ಮಾಡುತ್ತಿದ್ದಾನೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹಾಗೂ ಮತ ಪಡೆಯುವುದಕ್ಕೆ ಹಿಂದೂಗಳಿಗೆ ವಂಚನೆ ಮಾಡುತ್ತಿದ್ದು, ಅದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಿದೆ ಎಂದರು. ಶ್ರೀರಾಮ ಸೇನೆ ತಾಲೂಕು ಘಟಕದ ಅಧ್ಯಕ್ಷ ಸಂತೋಷ ಕುರಿ, ಸುರೇಶ ಅಕ್ಕಿ, ಗೂಳಪ್ಪ ಕರಿಗಾರ, ಪರಸುರಾಮ ಡೊಂಕಬಳ್ಳಿ, ಮಂಜುನಾಥ ಸೊಂಟನೂರ ಸೇರಿ ಅನೇಕರು ಇದ್ದರು.