ಮೊದಲ ಹೆಂಡ್ತಿ ನೋಡಲು ಎರಡನೇ ಹೆಂಡ್ತಿ ಜೊತೆ ಬಂದ :ಮಗನೊಂದಿಗೆ ವಿಷ ಕುಡಿದು ಪ್ರಾಣ ಬಿಟ್ಟ

Suvarna News   | Asianet News
Published : Jan 23, 2020, 12:54 PM IST
ಮೊದಲ ಹೆಂಡ್ತಿ ನೋಡಲು ಎರಡನೇ ಹೆಂಡ್ತಿ ಜೊತೆ ಬಂದ :ಮಗನೊಂದಿಗೆ ವಿಷ ಕುಡಿದು ಪ್ರಾಣ ಬಿಟ್ಟ

ಸಾರಾಂಶ

ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಇಬ್ಬರು ಮೃತರಾಗಿದ್ದು ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. 

ಶಿವಮೊಗ್ಗ [ಜ.23]: ಕಾರಿನಲ್ಲಿ ತೆರಳಿ ಒಂದೇ ಕುಟುಂಬರು ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ, ಇಬ್ಬರು ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಶಿವಮೊಗ್ಗ ಜಿಲ್ಲೆಯ ಆಯನೂರು ಬಳಿಯ ಮಲ್ಲಾಪುರದಲ್ಲಿ ಜ್ಞಾನಮೂರ್ತಿ[60], ಪುತ್ರ ಚನ್ನೇಶ[35], ರತ್ನಮ್ಮ [53] ವಿಷ ಸೇವಿಸಿದ್ದು,  ಜ್ಞಾನಮೂರ್ತಿ ಹಾಗೂ ಚನ್ನೇಶ ಸಾವನ್ನಪ್ಪಿದ್ದಾರೆ. 

ರತ್ಮಮ್ಮ ಸ್ಥಿತಿ ಚಿಂತಾಜನಕವಾಗಿದ್ದು, ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

ಬಾಂಬಿಟ್ಟದ್ದು ಯಾಕೆ? ತನಿಖೆಯಲ್ಲಿ ಬಾಯ್ಬಿಟ್ಟ ಮಂಗಳೂರು ಬಾಂಬರ್‌

ಜ್ಞಾನಮೂರ್ತಿ ಎರಡನೇ ಪತ್ನಿ ರತ್ಮಮ್ಮ ಜೊತೆಗೆ ಮೈಸೂರಿನಲ್ಲಿ ವಾಸವಾಗಿದ್ದು, ಶಿವಮೊಗ್ಗದ ಮಲ್ಲಾಫುರ ಗ್ರಾಮದಲ್ಲಿ ಮೊದಲ ಪತ್ನಿ ಶಂಕರಮ್ಮ ವಾಸವಿದ್ದರು. ಶಂಕರಮ್ಮ ನೋಡಲು ಆಗಮಿಸಿದ್ದ ವೇಳೆ ಅವರ ಮನೆಗೆ ಹೋಗದೇ ದಾರಿಯಲ್ಲಿಯೇ ವಿಷ ಸೇವಿಸಿದ್ದಾರೆ. 

ಚಿಕ್ಕಬಳ್ಳಾಪುರದ ರಾಧಾ-ವೆಂಕಟೇಶ, ಪ್ರಿಯತಮೆಗೆ ವಿಷ ಕುಡಿಸಿದ!.

ವಿಷ ಸೇವಿಸಿದ್ದ ವಿಚಾರ ಸ್ಥಳೀಯರಿಗೆ ತಿಳಿದು ತಕ್ಷಣ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ತಂದೆ ಮಗ ಮೃತಪಟ್ಟಿದ್ದು, ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ. 

ಶಿವಮೊಗ್ಗ ತಾಲೂಕಿನ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. 

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು