ಮಲೆ ಮಹದೇಶ್ವರ ಜಾತ್ರೆಯ ಭಕ್ತಾದಿಗಳಿಗೆ 2 ಲಕ್ಷ ಲಾಡು ಸಿದ್ಧ; ಬೆಟ್ಟಕ್ಕೆ ಬರುವ ಮುನ್ನ ಈ ರೂಲ್ಸ್ ತಿಳಿಯಿರಿ!

Published : Nov 05, 2026, 05:21 PM IST
2 Lakh Laddus Ready For Male Mahadeshwara Jathra Devotees

ಸಾರಾಂಶ

ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ನವೆಂಬರ್ 6 ರಿಂದ 10ರವರೆಗೆ ದೀಪಾವಳಿ ಜಾತ್ರಾ ಮಹೋತ್ಸವ ನಡೆಯಲಿದೆ. ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, 2 ಲಕ್ಷಕ್ಕೂ ಹೆಚ್ಚು ಲಾಡು ಪ್ರಸಾದ ತಯಾರಿಸಲಾಗುತ್ತಿದೆ.

ಚಾಮರಾಜನಗರ: ಮಾದಪ್ಪನ ಬೆಟ್ಟದಲ್ಲಿ ದೀಪಾವಳಿ ಜಾತ್ರೆಯ ತಯಾರಿ ಭರ್ಜರಿ ಜೋರಾಗಿದೆ. ನವೆಂಬರ್ 6 ರಿಂದ 10ವರೆಗೆ ಅಂದರೆ ಐದು ದಿನಗಳ ಕಾಲ ಜಾತ್ರೆ ನಡೆಯಲಿದೆ. ಇದಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಲಕ್ಷಾಂತರ ಭಕ್ತರು ಮಾದಪ್ಪನ ಸನ್ನಿಧಿಗೆ ಆಗಮಿಸುವ ನಿರೀಕ್ಷೆ ಇದೆ.

ನಾಳೆಯಿಂದ ಜಾತ್ರಾ ಮಹೋತ್ಸವದ ಧಾರ್ಮಿಕ ವಿಧಿವಿಧಾನಗಳಿಗೆ ಚಾಲನೆ ನೀಡಲಾಗುತ್ತದೆ. ನವೆಂಬರ್ 7 ರಂದು ಮಾದಪ್ಪನಿಗೆ ಎಣ್ಣೆ ಮಜ್ಜನ ಮಾಡಲಾಗುತ್ತದೆ. ನವೆಂಬರ್ 8 ರಂದು ನರಕ ಚತುರ್ದಶಿ ಅಂಗವಾಗಿ ವಿಶೇಷ ಪೂಜೆ, ದೇವರಿಗೆ ನೈವೇದ್ಯ ಅರ್ಪಣೆ ಮಾಡಲಾಗುತ್ತದೆ. ನವೆಂಬರ್ 9 ರಂದು ಅಮಾಸ್ಯೆ ಹಾಗೂ ಬೆಳಗ್ಗೆ 9.30ಕ್ಕೆ ನಡೆಯುವ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾಲೂರು ಶ್ರೀಗಳು ಭಾಗಿಯಾಗಲಿದ್ದಾರೆ. ಶ್ರೀಗಳ ಸಮ್ಮುಖದಲ್ಲಿ ಹಾಲರವಿ ಉತ್ಸವ ನಡೆಯಲಿದೆ. ಇನ್ನು, ನವೆಂಬರ್ 10 ರಂದು ಜಾತ್ರೆಯ ಪ್ರಮುಖ ಘಟ್ಟವಾದ ಮಹಾರಥೋತ್ಸವ ಜರುಗಲಿದೆ. ಬೆಳಗ್ಗೆ 7.30 ರಿಂದ 8.40 ವರೆಗೆ ರಥೋತ್ಸವ ನಡೆಯಲಿದೆ. ನಂತರ ಗುರು ಗುರುಬ್ರಹ್ಮೋತ್ಸವ, ಅನ್ನಬ್ರಹ್ಮೋತ್ಸವ ಹಾಗೂ ರಾತ್ರಿ ತೆಪ್ಪೋತ್ಸವ ಜರುಗಲಿದೆ.

ಜಾತ್ರೆ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಮಂಡಳಿ ಮತ್ತು ಸ್ಥಳೀಯ ಆಡಳಿ ಸಿದ್ಧತೆ ನಡೆಸುತ್ತಿದೆ. ಅಂತೆಯೇ ನವೆಂಬರ್ 6 ರಿಂದ 10 ರವರೆಗೂ ದ್ವಿಚಕ್ರ,ತ್ರಿಚಕ್ರ ವಾಹನಗಳಿಗೆ ನಿರ್ಬಂಧ ಮಾದಪ್ಪನ ಬೆಟ್ಟಕ್ಕೆ ನಿರ್ಬಂಧ ಹೇರಲಾಗಿದೆ. ಯಾವುದೇ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳಿಗೆ ಅನುಮತಿ ಇರುವುದಿಲ್ಲ. ಈ ವಾಹನಗಳಿಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯನ್ನ ಮಾಡಲಾಗಿದೆ. ಕೌದಳ್ಳಿ ಬಳಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಭಕ್ತರು, ಸಾರ್ವಜನಿಕರು ಸಹಕರಿಸಬೇಕು ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕೋರಿದೆ.

ಟ್ರಾಫಿಕ್ ಜಾಮ್ ತಡೆಗೆ ಕ್ರಮ

ಪಾದಯಾತ್ರೆ ಸೇರಿದಂತೆ ಬಸ್ಸುಗಳಲ್ಲಿಯೂ ಅಸಂಖ್ಯಾತ ಭಕ್ತರು ಬರುತ್ತಾರೆ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗುವ ಸಂಭವ ಇರುತ್ತದೆ. ಇದನ್ನು ತಡೆಯಲು ಜಿಲ್ಲಾಡಳಿತ ಸಿದ್ಧತೆ ನಡೆಸ್ತಿದೆ. ಜೊತೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆಯೂ ಬಿಗಿ ಬಂದೋಬಸ್ತ್‌ಗೆ ಬೇಕಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳುತ್ತಿದೆ.

2 ಲಕ್ಷಕ್ಕೂ ಹೆಚ್ಚು ಲಾಡು ತಯಾರಿ

ಈ ಜಾತ್ರೆಗೆ ಲಕ್ಷಾಂತರ ಭಕ್ತರು ರಾಜ್ಯದ ವಿವಿಧ ಮೂಲೆ ಮೂಲೆಗಳಿಂದ ಹರಿದು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಪ್ರಸಾದವಾಗಿ ನೀಡಲು ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಲಾಡುಗಳನ್ನ ತಯಾರಿಸಲಾಗುತ್ತಿದೆ. ಲಾಡು ತಯಾರಿ ಮಾಡಿದ ವಿಡಿಯೋ ಹಾಗೂ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

PREV
Read more Articles on
click me!

Recommended Stories

ಹಾಲಿನಿಂದ ಬಸ್‌ವರೆಗೆ ಎಲ್ಲದರ ದರ ಏರಿಕೆ ಮಾಡಿ ಸರ್ಕಾರಿ ನೌಕರರಿಗೆ DA ಹೆಚ್ಚಳ ಮಾಡಿದ ರಾಜ್ಯ ಸರ್ಕಾರ
ಬೆಲೆ ಏರಿಕೆ ಬರೆ ನಡುವೆ ರೈತರಿಗೆ ಗುಡ್‌ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ, ನಿಮ್ಮ ಅಕೌಂಟ್‌ಗೆ ಬರುತ್ತೆ ₹5000