ಜನ್ಮ ನೀಡಿದ 2 ದಿನದಲ್ಲಿ ಸೋಂಕಿತ ತಾಯಿ ಸಾವು

By Kannadaprabha News  |  First Published May 27, 2021, 2:26 PM IST
  • ಮಗುವಿಗೆ ಜನ್ಮ ನೀಡಿ ಎರಡು ದಿನದಲ್ಲೇ ಮಹಿಳೆ ಸಾವು
  • ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಮಹಿಲೆ ಚಿಕಿತ್ಸೆ ಫಲಿಸದೆ ಸಾವು
  • ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮಹಿಳೆ 

ಮಂಡ್ಯ (ಮೇ.27): ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಉಪನ್ಯಾಸಕಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ ಎರಡೇ ದಿನದೊಳಗೆ ಕೊನೆಯುಸಿರೆಳೆದಿರುವ ದಾರುಣ ಪ್ರಸಂಗ ಮಂಗಳವಾರ ನಡೆದಿದೆ.

 ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಅರೆತಿಪ್ಪೂರು ಗ್ರಾಮದ ಡಿ.ಆರ್‌.ಗುಣಶ್ರೀ (35) ಮೃತಪಟ್ಟಉಪನ್ಯಾಸಕಿ. ಗುಣಶ್ರೀ ಮಳವಳ್ಳಿ ಶಾಂತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. 

Tap to resize

Latest Videos

undefined

ಆಸ್ಪತ್ರೆ ಬಾಗಿಲಲ್ಲೇ ಗರ್ಭದಿಂದ ಜಾರಿದ ಮಗು ಸಾವು : ವೈದ್ಯರ ವಿರುದ್ಧ ಆರೋಪ

ಏಳೂವರೆ ತಿಂಗಳ ಗರ್ಭಿಣಿಯಾಗಿದ್ದ ಗುಣಶ್ರೀ ಅವರಿಗೆ ಕೋವಿಡ್‌ ತಗುಲಿತ್ತು. ಉಸಿರಾಟದ ಸಮಸ್ಯೆಯಿಂದ ಮಿಮ್ಸ್‌ಗೆ ದಾಖಲು ಮಾಡಲಾಗಿತ್ತು.

ತೀವ್ರ ಶ್ವಾಸಕೋಶ ಸೋಂಕಿನ ಪರಿಣಾಮ ಭಾನುವಾರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಮಗು ಹೊರತೆಗೆದಿದ್ದರು ಚಿಕಿತ್ಸೆಗೆ ಸ್ಪಂದಿಸದ ಅವರು ಮೃತಪಟ್ಟಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!