ಜನರ ಆಕ್ರೋಶದಿಂದ ಪ್ರಧಾನಿ ಮೋದಿ ಭಸ್ಮಾಸುರನಂತೆ ನಾಶವಾಗ್ತಾರೆ: ಉಗ್ರಪ್ಪ

By Suvarna NewsFirst Published Jun 13, 2021, 1:31 PM IST
Highlights

* ಯಡಿಯೂರಪ್ಪ ಸಿಎಂ ಆದ್ರೇ ಏನು? xyz ಯಾರಾದರೂ ನಮಗೇನು..?
* ಬಿಜೆಪಿಯಲ್ಲಿ ಅಂತರಿಕವಾಗಿ ಎಲ್ಲವೂ ಸರಿಯಿಲ್ಲ 
* ಪೆಟ್ರೋಲ್ ಬೆಲೆ ಡಬಲ್ ಸೆಂಚೂರಿ ಹೋದ್ರೂ ಅಚ್ಚರಿ ಪಡಬೇಕಿಲ್ಲ 

ಬಳ್ಳಾರಿ(ಜೂ.13): ಪೆಟ್ರೋಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ಸಾಲದ ಕೂಪಕ್ಕೆ ತಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ವಿದ್ಯುತ್ ದರ ಮತ್ತು ಕೇಂದ್ರ ಸರ್ಕಾರ ಪೆಟ್ರೋಲ್‌, ಡಿಸೈಲ್ ದರ ಹೆಚ್ಚು ಮಾಡುತ್ತಿದೆ. ಇದೇನಾ ನಿಮ್ಮ ಅಚ್ಚೆ ದಿನ್‌ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ಎಂದು ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಪೆಟ್ರೋಲ್ ಬೆಲೆ ಏರಿಕೆ ವಿರೋಧಿಸಿದ ಪ್ರತಿಭಟನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಉಗ್ರಪ್ಪ, ಎರಡು ಕೋಟಿ ಉದ್ಯೋಗ, ವಿದೇಶಿ ಹಣ ವಾಪಸ್ ತರೊದೋ, ಬಡ ಜನರಿಗೆ ಅಕೌಂಟ್‌ಗೆ ಹಣ ಹಾಕೋದು ನಿಮ್ಮ ವಾಗ್ದಾನ ಏನಾಯ್ತು?, ಕೊರೋನಾ ವೇಳೆ ದರ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 

ಪ್ರಧಾನಿ ಮೋದಿ ಆಧುನಿಕ ಭಸ್ಮಾಸುರ, ಸಿಎಂ ಯಡಿಯೂರಪ್ಪ ದೃತರಾಷ್ಟ್ರವಾಗಿದ್ದಾರೆ. ಜನರ ಆಕ್ರೋಶದಿಂದ ಮೋದಿ ಭಸ್ಮಾಸುರನಂತೆ ನಾಶವಾಗುತ್ತಾರೆ. ಪೆಟ್ರೋಲ್ ಬೆಲೆ ಡಬಲ್ ಸೆಂಚೂರಿ ಹೋದ್ರೂ ಅಚ್ಚರಿ ಪಡಬೇಕಿಲ್ಲ. ಸಮಯಸಾಧಕ ಮೋದಿ, ದೇಶದ ಅತ್ಯಂತ ದುರ್ಬಲ ಪ್ರಧಾನಿಯಾಗಿದ್ದಾರೆ. ಮೋದಿ ಚುನಾವಣೆ ಅಂದ್ರೇ ಹೋಗ್ತಾರೆ, ಕೊರೋನಾ ಮಿಟಿಂಗ್ ಅಂದ್ರೇ ಹೋಗೋದಿಲ್ಲ ಎಂದು ಟೀಕಿಸಿದ್ದಾರೆ. 

ಲಸಿಕೆ ಹಾಕಿಸಿಕೊಂಡ್ರೆ ಪುರುಷತ್ವ ಹೋಗುತ್ತೆ: ಆರೋಗ್ಯ ಸಿಬ್ಬಂದಿಗಳ ಜತೆ ಗ್ರಾಮಸ್ಥರ ವಾಗ್ವಾದ

ಯಡಿಯೂರಪ್ಪ ರಾಜೀನಾಮೆ ಮತ್ತು ಬಿಜೆಪಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಉಗ್ರಪ್ಪ, ಇದು ಅವರ ಪಕ್ಷದ ಅಂತರಿಕ ವಿಚಾರವಾಗಿದೆ. ಯಡಿಯೂರಪ್ಪ ಸಿಎಂ ಆದ್ರೇ ಏನು? xyz ಯಾರಾದರೂ ನಮಗೇನು..?. ಆದ್ರೇ, ಬಿಜೆಪಿ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯಾಗುತ್ತದೆ. ಬಿಜೆಪಿಯಲ್ಲಿ ಅಂತರಿಕವಾಗಿ ಎಲ್ಲವೂ ಸರಿಯಿಲ್ಲ ಅನಿಸುತ್ತಿದೆ ಎಂದು ತಿಳಿಸಿದ್ದಾರೆ. 

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳ್ತಾರೆ ಯಾವುದೋ ಒಂದು ಸಿಡಿ ಇದೆ ಅಂತಾರೆ. ಯಡಿಯೂರಪ್ಪ ಮತ್ತೊಬ್ಬ ರಮೇಶ್ ಜಾರಕಿಹೊಳಿ ಅಗ್ತಾರೆ ಅಂತಾರೆ. ಸಚಿವ ಯೋಗಿಶ್ವರ್‌ ಬಳಿ ಸಿಡಿ ಇದೆ ಅಂತಾರೆ. ಅದೆಲ್ಲ ಬಹಿರಂಗವಾಗಲಿ. ಯಡಿಯೂರಪ್ಪ ಮಾದರಿಯಲ್ಲಿ ಯಾರ ಮಕ್ಕಳ ಕೂಡ ಇಷ್ಟೊಂದು ಅಧಿಕಾರ ದುರ್ಬಳಕೆ ಮಾಡಿಕೊಂಡಿಲ್ಲ ಎಂದು ಬಿಎಸ್‌ವೈ ವಿರುದ್ಧ ಕೆಂಡಕಾರಿದ್ದಾರೆ. 
 

click me!