ಮಕ್ಕಳಂತೆ ಬೆಳೆಸಿದ್ದ 2 ಎಕರೆ ಅಡಕೆ ಮರಗಳನ್ನು ಕತ್ತರಿಸಿ ಹಾಕಿದರು

Kannadaprabha News   | Asianet News
Published : Aug 20, 2020, 02:32 PM IST
ಮಕ್ಕಳಂತೆ ಬೆಳೆಸಿದ್ದ 2 ಎಕರೆ ಅಡಕೆ ಮರಗಳನ್ನು ಕತ್ತರಿಸಿ ಹಾಕಿದರು

ಸಾರಾಂಶ

ಮಕ್ಕಳಂತೆ ಬೆಳೆಸಿ ಪೋಷಿಸಿದ್ದ 2 ಎಕರೆಯಷ್ಟು ಅಡಕೆ ತೋಟದಲ್ಲಿದ್ದ 600ಕ್ಕೂ ಹೆಚ್ಚು ಅಡಕೆ ಮರಗಳನ್ನು ದುಷ್ಕರ್ಮಿಗಳು ಸರ್ವನಾಶ ಮಾಡಿದ್ದಾರೆ.

ಕುಣಿಗಲ್‌ (ಆ.20): ತಾಲೂಕಿನ ಹೇರುರೂ ಗ್ರಾಮದ ನಾಗರಾಜು ಎಂಬುವವರರಿಗೆ ಸೇರಿದ 2 ಎಕರೆ ಅಡಕೆ ತೋಟದಲ್ಲಿದ್ದ ಸುಮಾರು 600 ಅಡಕೆ ಮರ ಆಗೂ ತೆಂಗು ಸಸಿಗಳು ಮತ್ತು ಬಾಳೆ ಗಿಡಗಳನ್ನು ತಡರಾತ್ರಿ ದುಷ್ಕರ್ಮಿಗಳು ಕತ್ತರಿಸಿ ಹಾಕಿದ್ದಾರೆ.

20 ಗುಂಟೆ ಜಮೀನಿನ ವಿಚಾರವಾಗಿ ನಾಗರಾಜು ಅವರ ಚಿಕ್ಕಪ್ಪನ ಮಗ ಸಜೀವ ಆಗಾಗ ಜಗಳ ತೆಗೆದು ತೊಂದರೆ ಮಾಡುತ್ತಿದ್ದ. ಆತನೆ ಈ ಕೃತ್ಯ ಎಸಗಿದ್ದಾನೆ ಎಂದು ನಾಗರಾಜು ಕುಟುಂಬದವರು ಆರೋಪಿಸಿದ್ದಾರೆ. 

ಅಡಕೆ ಕೊಳೆರೋಗ: ಅಧಿಕ ಮಳೆಯಿಂದಾಗಿ ಬರಬಹುದಾದ ರೋಗದ ಬಗ್ಗೆ ರೈತರಿಗೆ ಸಲಹೆ...

ಅಡಕೆ, ತೆಂಗು ಹಾಗೂ ಬಾಳೆ ಬೆಳೆ ಬೆಳೆಯಲು ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದರು. ಕೆಲವು ಅಡಕೆ ಮರಗಳು ಫಸಲು ಬಿಡುವ ಹಂತಕ್ಕೆ ಬಂದಿದ್ದವು ಎನ್ನಲಾಗಿದೆ. ಅಷ್ಟರಲ್ಲಿ ಕಿಡಿಗೇಡಿಗಳು ಮರಗಳನ್ನು ಕಡಿದು ಹಾಕಿ ನಷ್ಟಉಂಟು ಮಾಡಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಅಡಕೆ ಬೆಲೆ ಹೆಚ್ಚಳ..

ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‌ ಪಟೇಲ್‌ ಹಾಗೂ ರೈತ ಮುಖಂಡರು ಸ್ಥಳಕ್ಕೆ ಭೇಟಿ ನೀಡಿ ರೈತ ನಾಗರಾಜು ಅವರಿಗೆ ಆಗಿರುವ ನಷ್ಟಕ್ಕೆ ಜಿಲ್ಲಾಡಳಿತ ಪರಿಹಾರ ನೀಡಬೇಕು. ಈ ಕೃತ್ಯವೆಸಗಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!