* ಮೇ ತಿಂಗಳಲ್ಲಿ ಸರಕು ಸಾಗಾಟದಿಂದ ಮೊದಲ ಬಾರಿ 2 ಕೋಟಿಗೂ ಹೆಚ್ಚು ಆದಾಯ
* ನಿಯಮಿತವಾಗಿ ಸಂವಾದಗಳ ಪರಿಣಾಮವಾಗಿ ರೈಲ್ವೆಯ ಪಾರ್ಸೆಲ್ ವ್ಯವಹಾರ ವೃದ್ಧಿ
* ಹುಬ್ಬಳ್ಳಿ ವಿಭಾಗವು ಪಾರ್ಸಲ್ ಸೇವೆಗೆ ಹಲವು ವಿನೂತನ ಕ್ರಮ
ಹುಬ್ಬಳ್ಳಿ(ಜೂ.07): ಇಲ್ಲಿನ ವಲಯದ ಹುಬ್ಬಳ್ಳಿ ವಿಭಾಗವೂ ಮೇ ತಿಂಗಳಲ್ಲಿ 2.03 ಕೋಟಿ ಆದಾಯವನ್ನು ಪಾರ್ಸಲ್‌ನಿಂದ ಗಳಿಸಿದೆ. ಇದು ಈ ವರೆಗಿನ ಪಾರ್ಸಲ್ ಸಾಗಾಣಿಕೆಯಲ್ಲಿ ಗಳಿಸಿದ ಗರಿಷ್ಠ ಆದಾಯವಾಗಿದೆ. ಏಪ್ರಿಲ್ ತಿಂಗಳಲ್ಲಿ 1.44 ಕೋಟಿ ಆದಾಯ ಗಳಿಸಿತ್ತು.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿರುವ ಹುಬ್ಬಳ್ಳಿ ವಿಭಾಗದ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಅವರು, ಅಕ್ಟೋಬರ್ 2020ರಿಂದ ಪ್ರತಿ ತಿಂಗಳು ಕನಿಷ್ಠ 1 ಕೋಟಿ ಪಾರ್ಸಲ್ ಆದಾಯವಾಗುತ್ತಿದೆ. ಇದೇ ಮೊದಲ ಬಾರಿಗೆ . 2 ಕೋಟಿ ದಾಟಿದಂತಾಗಿದೆ.
ವಿಭಾಗವು ವ್ಯಾಪಾರ ಮತ್ತು ಗಳೊಂದಿಗೆ ನಿಯಮಿತವಾಗಿ ನಡೆಸುತ್ತಿರುವ ಸಂವಾದಗಳ ಪರಿಣಾಮವಾಗಿ ರೈಲ್ವೆಯ ಪಾರ್ಸೆಲ್ ವ್ಯವಹಾರ ವೃದ್ಧಿಗೊಳ್ಳುತ್ತಿದೆ. ಗ್ರಾಹಕರು ಮತ್ತು ವ್ಯಾಪಾರ ಸಮುದಾಯಗಳು ತಮ್ಮ ಪಾರ್ಸೆಲ್ ಸಾಗಣೆಗೆ ರೈಲ್ವೆ ಸಾರಿಗೆಯತ್ತ ಆಸಕ್ತಿ ಹೊಂದಿರುವುದು ಸಾಬೀತಾಗಿದೆ. ಬಳಕೆಯಾಗದ ಸಾಮಾನ್ಯ ದ್ವಿತೀಯ ದರ್ಜೆಯ ಬೋಗಿಗಳು ಮತ್ತು ಆಟೋಮೊಬೈಲ್‌ಗಳ ಸಾಗಣೆಗೆ ಬಳಸುವ ಎನ್.ಎಮ್.ಜಿ. ರೇಕ್‌ಗಳನ್ನು ಪಾರ್ಸೆಲ್ ಸಾಗಣೆಗೆ ಬಳಸಿಕೊಳ್ಳುವುದೂ ಸೇರಿದಂತೆ ಹುಬ್ಬಳ್ಳಿ ವಿಭಾಗವು ಪಾರ್ಸಲ್ ಸೇವೆಗೆ ಹಲವು ವಿನೂತನ ಕ್ರಮಗಳನ್ನು ಕೈಗೊಂಡಿದೆ. ಇವುಗಳ ಮೂಲಕ ರೈಲ್ವೆಯು ಚಾಕೊಲೇಟ್ಸ್, ಔಷಧಿಗಳು, ಮೀನು, ಟೈರ್‌ಗಳು ಮತ್ತು ಇತರ ಕೈಗಾರಿಕಾ ಉತ್ಪನ್ನಗಳನ್ನು ಸಾಗಿಸಿದೆ.
ಕೊರೋನಾ ಸಮಯದಲ್ಲಿ ಗಾಯದ ಮೇಲೆ ಬರೆ: 35 ದಿನಗಳಲ್ಲಿ 18 ಬಾರಿ ಇಂಧನ ಬೆಲೆ ಏರಿಕೆ
ಏನೇನು ಸಾಗಾಟ:
ಮೇ ತಿಂಗಳಿನಲ್ಲಿ ಹುಬ್ಬಳ್ಳಿ ವಿಭಾಗವು ವಾಸ್ಕೋ ಡಿ ಗಾಮಾ ದಿಂದ ಅಸ್ಸಾಂನ ಗುವಾಹಟಿಗೆ 5 ನಿಗದಿತ ವೇಳಾಪಟ್ಟಿಯ ಪಾರ್ಸೆಲ್ ವಿಶೇಷ ರೈಲುಗಳನ್ನು ಓಡಿಸುವ ಮೂಲಕ 87 ಲಕ್ಷ ಆದಾಯ ಗಳಿಸಿದೆ. ವಾಸ್ಕೋ ಡಿ-ಗಾಮಾದಿಂದ ಹರಾರಯಣದ ಖೋರಿಗೆ ತಲಾ 25 ವ್ಯಾಗನ್‌ಗಳ 2 ಎನ್.ಎಮ್.ಜಿ. ರೇಕ್ ಮತ್ತು ಮಿರ್ಜಾಪುರ್ ಬಾಛೌದ್‌ಗೆತಲಾ 25 ವ್ಯಾಗನ್‌ಗಳ 5 ಎನ್.ಎಂ.ಜಿ. ರೇಕ್‌ಗಳನ್ನು ಓಡಿಸಿ 83 ಲಕ್ಷ ಪಾರ್ಸೆಲ್ ಆದಾಯ ಗಳಿಸಿದೆ. ವಾಸ್ಕೋ ಡಿ-ಗಾಮಾದಿಂದ ಮಹಾರಾಷ್ಟ್ರದ ನಾಗ್ಪುರ ಬಳಿಯಿರುವ ಕಲ್ಮೇಶ್ವರ್‌ಗೆ ಸಾಮಾನ್ಯ ದ್ವಿತೀಯ ದರ್ಜೆಯ ಕೋಚ್‌ಗಳಿಂದ ಕೂಡಿದ ಒಂದು ಪಾರ್ಸೆಲ್ ವಿಶೇಷ ರೈಲನ್ನು ಓಡಿಸಲಾಯಿತು. ಇದರಿಂದ 7 ಲಕ್ಷ ಆದಾಯ ಬಂದಿದೆ.
ಈ ಪಾರ್ಸೆಲ್ ವಿಶೇಷ ರೈಲುಗಳಲ್ಲದೆ ಪ್ರಯಾಣಿಕ ವಿಶೇಷ ರೈಲುಗಳ ಲಗೇಜ್ ಬೋಗಿಗಳ ಮೂಲಕವೂ ಪಾರ್ಸೆಲ್ ಸಾಗಣೆ ಮಾಡಲಾಗಿದೆ. ಪಾರ್ಸೆಲ್ ವಿಶೇಷ ರೈಲುಗಳ ಮೂಲಕ ವಾಸ್ಕೋ ಡಿ-ಗಾಮಾದಿಂದ ಆಹಾರ ಉತ್ಪನ್ನಗಳು, ವೈಯಕ್ತಿಕ ಶುಚಿತ್ವದ ಉತ್ಪನ್ನಗಳು, ಟೈರ್‌ಗಳು, ಔಷಧಿಗಳು ಮತ್ತು ಇತರ ವಸ್ತುಗಳು, ಹುಬ್ಬಳ್ಳಿ, ಕೊಪ್ಪಳ, ಹೊಸಪೇಟೆಗಳಿಂದ ಒಣ ಮತ್ತು ಶೈತ್ಯೀಕರಿಸಿದ ಮೀನು, ಕೊಪ್ಪಳ, ಹೊಸಪೇಟೆಯಿಂದ ಮಾನವ ಕೂದಲು, ಹುಬ್ಬಳ್ಳಿ ವಿಭಾಗದ ವಿವಿಧ ನಿಲ್ದಾಣಗಳಿಂದ ಮೋಟರ್ ಸೈಕಲ್‌ಗಳು, ಗೃಹೋಪಯೋಗಿ ವಸ್ತು ಇತ್ಯಾದಿಗಳನ್ನು ಸಾಗಿಸಲಾಗಿದೆ. ಪ್ರಯಾಣಿಕ ವಿಶೇಷ ರೈಲುಗಳ ಲಗೇಜ್ ಬೋಗಿಗಳ ಮೂಲಕ ಹುಬ್ಬಳ್ಳಿ ಮತ್ತು ಧಾರವಾಡದಿಂದ ಮಾವಿನಹಣ್ಣುಗಳು ಮತ್ತು ದಪ್ಪ ಮೆಣಸಿನಕಾಯಿ ಸಾಗಿಸಲಾಗಿದೆ.
ಹೊಸ ಹೊಸ ವಿಧದ ಪಾರ್ಸೆಲ್ ಸಾಗಣೆಯು ವಿಭಾಗಕ್ಕೆ ದೊರೆಯುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ವರಿಷ್ಠ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೈಯದ್ ಇಮ್ತಿಯಾಜ್ ಅಹಮದ್ ನೇತೃತ್ವದ ವಾಣಿಜ್ಯ ವಿಭಾಗದ ತಂಡಕ್ಕೆ ಅರವಿಂದ ಮಾಲಖೇಡ್ ಅಭಿನಂದಿಸಿದ್ದಾರೆ.