199 ಅಬಕಾರಿ ಪ್ರಕರಣ ದಾಖಲು: 2.49 ಕೋಟಿ ಮೌಲ್ಯದ ವಸ್ತು ವಶ

Published : Dec 01, 2019, 07:47 AM ISTUpdated : Dec 01, 2019, 07:53 AM IST
199 ಅಬಕಾರಿ ಪ್ರಕರಣ ದಾಖಲು: 2.49 ಕೋಟಿ ಮೌಲ್ಯದ ವಸ್ತು ವಶ

ಸಾರಾಂಶ

ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ನ.11ರಿಂದ 29ರವರೆಗೆ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯಿಂದ ಒಟ್ಟು 199 ಪ್ರಕರಣಗಳನ್ನು ದಾಖಲಿಸಿ, 119 ಆರೋಪಿಗಳನ್ನು ಬಂಧಿಸಿ, .2.49 ಕೋಟಿ ಮೌಲ್ಯದ ಮದ್ಯ, ವಾಹನ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೈಸೂರು(ಡಿ.01): ಹುಣಸೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾದ ನ.11ರಿಂದ 29ರವರೆಗೆ ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯಿಂದ ಒಟ್ಟು 199 ಪ್ರಕರಣಗಳನ್ನು ದಾಖಲಿಸಿ, 119 ಆರೋಪಿಗಳನ್ನು ಬಂಧಿಸಿ, 2.49 ಕೋಟಿ ಮೌಲ್ಯದ ಮದ್ಯ, ವಾಹನ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ನರಭಕ್ಷಕ ಚಿರತೆಗೆ ದೊಡ್ಡ ಮಳಲವಾಡಿ ರೈತ ಬಲಿ

2680.645 ಲೀ. ಮದ್ಯ, 275.870 ಲೀ.ಬಿಯರ್‌, 39 ಲೀ. ಸೇಂದಿ, 1 ಕೆ.ಜಿ. ಗಾಂಜಾ, 1 ಲಕ್ಷ ಲೀ. ಇಎನ್‌ಎ ಮದ್ಯಸಾರ, 12 ವಾಹನ ವಶಪಡಿಸಿಕೊಳ್ಳಲಾಗಿದೆ. ಸದ್ವರ್ತನೆಗಾಗಿ ಈ ಹಿಂದಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 114 ಆರೋಪಿತ ವ್ಯಕ್ತಿಗಳಿಂದ ಸಿಆರ್‌ಪಿಸಿ ಸೆಕ್ಷನ್‌ 110ರಲ್ಲಿ ಮುಚ್ಚಳಿಕೆಯನ್ನು ಪಡೆದುಕೊಳ್ಳಲಾಗಿರುತ್ತದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಜಪ್ತಿ ಮಾಡಲಾಗಿದ್ದ 1684.196 ಲೀ. ಮದ್ಯ, 264.150 ಲೀ. ಬಿಯರ್‌, 465 ಲೀ. ಸೇಂದಿಯನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ನಾಶಪಡಿಸಲಾಗಿದೆ.

ಹುಣಸೂರು ಕ್ಷೇತ್ರದಲ್ಲಿ:

ಇನ್ನೂ ಹುಣಸೂರು ತಾಲೂಕು ವ್ಯಾಪ್ತಿಯಲ್ಲಿ ಅಬಕಾರಿ ಇಲಾಖೆಯಿಂದ ಒಟ್ಟು 78 ಪ್ರಕರಣ ದಾಖಲಿಸಿ, 70 ಆರೋಪಿಗಳನ್ನು ಬಂಧಿಸಿ, .1.67 ಕೋಟಿ ಮೌಲ್ಯದ 2157.525 ಲೀ. ಮದ್ಯ, 268.640 ಲೀ. ಬಿಯರ್‌, 19 ಲೀ. ಸೇಂದಿ, 1 ಲಕ್ಷ ಇಎನ್‌ಎ ಮದ್ಯಸಾರ, 9 ವಾಹನ ವಶಪಡಿಸಿಕೊಳ್ಳಲಾಗಿದೆ. ಸದ್ವರ್ತನೆಗಾಗಿ ಈ ಹಿಂದಿನ ಪ್ರಕರಣಗಳಲ್ಲಿ ಭಾಗಿಯಾಗಿದ್ದ 22 ಆರೋಪಿತ ವ್ಯಕ್ತಿಗಳಿಂದ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ.

‘ದೆವ್ವ’ವನ್ನು ಕಂಬಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿದ ಗ್ರಾಮಸ್ಥರು!

ಹಾಡಿಗಳಲ್ಲಿ ಅಕ್ರಮ, ನಕಲಿ ಮತ್ತು ಕಲಬೆರಕೆ ಮದ್ಯಗಳಿಂದ ಆರೋಗ್ಯದ ಮೇಲೆ ಉಂಟಾಗಬಹುದಾದ ದುಷ್ಪರಿಣಾಮಗಳು ಮತ್ತು ಇದರಿಂದ ಸಂಭವಿಸಬಹುದಾದ ಪ್ರಾಣಹಾನಿಗಳ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಹುಣಸೂರು ತಾಲೂಕಿನ 52 ಹಾಡಿಗಳಲ್ಲಿ, ಪಿರಿಯಾಪಟ್ಟಣ ಹಾಗೂ ಎಚ್‌.ಡಿ. ಕೋಟೆ ತಾಲೂಕುಗಳ ಹಾಡಿಗಳಲ್ಲಿ ಸಹ ಹಮ್ಮಿಕೊಳ್ಳಲಾಗಿತ್ತು.

ಈಗಿನ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು: ಕುಮಾರಸ್ವಾಮಿ.

ಚುನಾವಣಾ ವೇಳೆ ಆಗಬಹುದಾದ ಯಾವುದೇ ಅಬಕಾರಿ ಅಕ್ರಮಗಳು, ಮದ್ಯ ವಿತರಣೆ ಕುರಿತು ಅಬಕಾರಿ ಇಲಾಖೆಗೆ ಕಂಟ್ರೋಲ್‌ ರೂಂ ದೂ. 0821- 2541863, 08222- 251690 ಸಾರ್ವಜನಿಕರು ಮಾಹಿತಿ ಒದಗಿಸಬಹುದು. ಮಾಹಿತಿ ಒದಗಿಸಿದವರ ವಿವರವನ್ನು ಗೌಪ್ಯವಾಗಿ ಇರಿಸಲಾಗುವುದು ಎಂದು ಅಬಕಾರಿ ಉಪ ಆಯುಕ್ತ ಕೆ.ಎಸ್‌. ಮುರಳಿ ತಿಳಿಸಿದ್ದಾರೆ.

ಡಿಸೆಂಬರ್ 9ರ ನಂತರ ಬಿಜೆಪಿ ಸರ್ಕಾರ ಮನೆಗೆ ಹೋಗುತ್ತೆ ಎಂದ ರೇವಣ್ಣ

PREV
click me!

Recommended Stories

ತೀರ್ಥಹಳ್ಳಿಯ ವಿದ್ಯಾರ್ಥಿನಿಗೆ ಹೃದಯಾಘಾತ, ಶೃಂಗೇರಿ ಕಾಲೇಜು ಹಾಸ್ಟೆಲ್‌ನಲ್ಲಿ ಕುಸಿದು ಬಿದ್ದು ಸಾವು
ಬೆಂಗಳೂರು ಏರ್ಪೋರ್ಟ್ ಹೊಸ ಪಿಕ್‌ಅಪ್‌, ಪಾರ್ಕಿಂಗ್ ರೂಲ್ಸ್; ಪ್ರಯಾಣಿಕರ ಸಮಸ್ಯೆ 30 ದಿನಗಳೊಳಗೆ ನಿವಾರಣೆ