Davanagere: ರಾಷ್ಟ್ರೀಯ ಲೋಕ ಅದಾಲತ್‌ ಕೌಟುಂಬಿಕ ನ್ಯಾಯಾಲಯದಲ್ಲಿ 17 ಪ್ರಕರಣಗಳು ರಾಜಿ ಸಂಧಾನ

By Suvarna NewsFirst Published Nov 12, 2022, 6:53 PM IST
Highlights

ಧಾರವಾಡದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ಒಟ್ಟು 32 ಪ್ರಕರಣಗಳಲ್ಲಿ 17 ಜೋಡಿ ಸತಿ-ಪತಿಗಳ ಪ್ರಕರಣಗಳನ್ನು ಈಗಾಗಲೇ ರಾಜಿ ಸಂಧಾನ ಮಾಡುವುಲ್ಲಿ ಯಶಸ್ವಿಯಾಗಿದೆ. 

ವರದಿ: ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್

ಧಾರವಾಡ (ನ.12): ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‌ನ ಕೌಟುಂಬಿಕ ನ್ಯಾಯಾಲಯದಲ್ಲಿ ಒಟ್ಟು 32 ಪ್ರಕರಣಗಳಲ್ಲಿ 17 ಜೋಡಿ ಸತಿ-ಪತಿಗಳ ಪ್ರಕರಣಗಳನ್ನು ಈಗಾಗಲೇ ರಾಜಿ ಸಂಧಾನ ಮಾಡುವುಲ್ಲಿ ಯಶಸ್ವಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ಅವರು ಹೇಳಿದರು. ಇಲ್ಲಿನ ಕರ್ನಾಟಕ ಉಚ್ಚ ನ್ಯಾಯಾಲಯ ಪೀಠದಲ್ಲಿ ಇಂದು ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ.ಶಾಂತಿ ಅವರ ಮಾರ್ಗದರ್ಶನದಲ್ಲಿ ಧಾರವಾಡದಲ್ಲಿ 17 ಪ್ರಕರಣಗಳು ಸೇರಿದಂತೆ  ಒಟ್ಟು 14 ಪೀಠಗಳನ್ನು ಸ್ಥಾಪಿಸಲಾಗಿತ್ತು. ಧಾರವಾಡದ ಕೌಟುಂಬಿಕ ನ್ಯಾಯಾಲಯದ ಪೀಠಾಧೀಶೆ ಎಸ್. ನಾಗಶ್ರೀ ಅವರ ನೇತೃತ್ವದಲ್ಲಿ ಮತ್ತು ಸಂಧಾನಕಾರರಾದ ಎಮ್.ಎಲ್. ದೇಸಾಯಿರವರನ್ನೊಳಗೊಂಡ ಲೋಕ್ ಅದಾಲತ್ ಪೀಠವು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಕೆ.ಜಿ.ಶಾಂತಿ ಮತ್ತು  2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಸಿ. ಸದಾನಂದಸ್ವಾಮಿ ಅವರು ಭಾಗವಹಿಸಿ, ಸುಮಾರು 17  ಜೋಡಿ ದಂಪತಿಗಳನ್ನು  ಒಂದಾಗಿಸಿದ್ದಾರೆ.

National lok adalat: ಒಂದೇ ದಿನದಲ್ಲಿ  20,444  ಪ್ರಕರಣ ಇತ್ಯರ್ಥ!

ಧಾರವಾಡದ ಪ್ರಧಾನ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶ ಗೀರಿಶ ಆರ್.ಬಿ. ಮತ್ತು ಸಂಧಾನಕಾರ ಬಸವರಾಜ ತಲವಾಯಿ ಇವರನ್ನೊಳಗೊಂಡ ಲೋಕ್ ಅದಾಲತ್ ಪೀಠದಲ್ಲಿ  ಸುಮಾರು 94 ವರ್ಷದ ಹಿರಿಯ ನಾಗರಿಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ವ್ಯಾಜ್ಯವನ್ನು ಇತ್ಯರ್ಥಪಡಿಸಿಕೊಂಡರು.

Lok Adalat: ಮುರಿದ ಮನಸ್ಸುಗಳಿಗೆ ಮತ್ತೆ ಬೆಸುಗೆ : ಮತ್ತೆ ಒಂದಾದ ದಂಪತಿ

ಸಾವಿರಾರು ಸಂಖ್ಯೆಯಲ್ಲಿ ಬಂದಿರುವ ಕಕ್ಷಿಧಾರರ ಪೈಕಿ ಎಲ್ಲರೂ ಹೆಚ್ಚಿನ ಹಾಗೂ ಸಣ್ಣಪುಟ್ಟ ಅಪರಾದ ಪ್ರಕರಣಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ರಾಜಿವಾಗಿವೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಹಾಗೂ ಒಳ್ಳೆಯ ಜೀವನ ಸಾಗಿಸುವದಕ್ಕೆ ಇಂತಹ ರಾಜಿ ಸಂಧಾನಗಳು ಮಹತ್ವದಾಗಿದೆ ಎಂದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಎಂ.ಪುಷ್ಪಲತ  ಹಾಗೂ ಸಂಧಾನಕಾರರಾದ ನೂರಜಾನ ಕಿಲ್ಲೇದಾರ ಅವರು ಉಪಸ್ಥಿತರಿದ್ದರು.

ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ
ಹಾರೋಹಳ್ಳಿ: ಕೆ.ಗೊಲ್ಲಹಳ್ಳಿ ತೋಟದ ಮನೆಯೊಂದರಲ್ಲಿ ವಾಸವಾಗಿದ್ದ ಕುಟುಂಬದ ಬಾಲಕಿ ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರವೆಸಗಿದ್ದ ಆರೋಪಿಗೆ ​ಬೆಂಗ​ಳೂರು ಗ್ರಾಮಾಂತರ ಎಫ್‌ಟಿಎಸ್‌ಸಿ - 2 ನ್ಯಾಯಾಲಯ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ. ಕಗ್ಗಲೀಪುರ ಪೊಲೀಸ್‌ ಠಾಣಾ ವ್ಯಾಪ್ತಿಯ ಕೆ.ಗೊಲ್ಲಹಳ್ಳಿ ಗ್ರಾಮದ ಪಾದರಿ ಎಂಬುವರ ತೋಟದಲ್ಲಿ ಕುಟುಂಬವೊಂದು ಕೂಲಿ ಮಾಡುತ್ತಾ ಜೀವನ ಕಳೆಯುತ್ತಿತ್ತು. ಅದೇ ತೋಟದಲ್ಲಿ ಸಂಸಾರ ಸಮೇತ ವಾಸವಿದ್ದ ಕಾಶಿ 14 ವರ್ಷದ ಬಾಲ​ಕಿ​ಯನ್ನು ಕೊಲೆ ಮಾಡುವುದಾಗಿ ಹೆದರಿಸಿ ನಿರಂತರ ಅತ್ಯಾಚಾರವೆಸಗಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು.

ಬಾಲಕಿಯ ತಾಯಿ ಆತನ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು 2021ರ ಮೇ 6ರಂದು ಕಗ್ಗಲಿಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ​ರು. ಕಗ್ಗಲೀಪುರ ಠಾಣೆ ಪೊಲೀಸರು ಆರೋಪಿ ಕಾಶಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ನಂತರ ಆರೋಪಿ ವಿರುದ್ಧ ಐಪಿಸಿ 376(3),506, ಪೋಕ್ಸೋ ಕಾಯ್ದೆಯಡಿ ದೋಷಾರೋಪ ಪಟ್ಟಿಸಲ್ಲಿಸಿದ್ದರು. ವಿಚಾರಣೆಯನ್ನು ಕೈಗೆತ್ತಿಕೊಂಡ ಬೆಂಗ​ಳೂರು ಗ್ರಾಮಾಂತರ ಎಫ್‌ಟಿಎಸ್‌ಸಿ -2 ನ್ಯಾಯಲಯ ಆರೋಪಿ ಕಾಶಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರ​ಡಿ​ಸಿದೆ. ಸಿ.ಕೆ.​ಶ್ರೀ​ವೇಣಿ ಸರ್ಕಾರಿ ಅಭಿ​ಯೋ​ಜ​ಕ​ರಾಗಿ ವಾದ ಮಂಡಿ​ಸಿ​ದ​ರು

click me!