ಬಿಎಂಟಿಸಿಗೆ ವರದಾನವಾಯ್ತಾ ಎಲೆಕ್ಟ್ರಿಕ್ ಬಸ್, 2030 ರೊಳಗೆ ಬೆಂಗಳೂರಾಗುತ್ತಾ ಎಲೆಕ್ಟ್ರಿಕ್ ಮಯ!

By Suvarna NewsFirst Published Nov 12, 2022, 5:54 PM IST
Highlights

ಬಿಎಂಟಿಸಿ ಇಕೋ ಫ್ರೆಂಡ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸ್ತಿದೆ. ಆದ್ರೆ bmtc ಪಾಲಿಗೆ ಇದೀಗ ಇದೇ ಎಲೆಕ್ಟ್ರಿಕ್ ಬಸ್‌ಗಳು ವರದಾನವಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಡೀ ಬೆಂಗಳೂರಲ್ಲಿ ಎಲೆಕ್ಟ್ರಿಕ್ ಮಯ ಮಾಡಲು ಬಿಎಂಟಿಸಿ ನಿರ್ಧರಿಸಿದೆ.

ವರದಿ; ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಂಗಳೂರು (ನ.11); ಬಿಎಂಟಿಸಿ ಇಕೋ ಫ್ರೆಂಡ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸ್ತಿದೆ. ಆದ್ರೆ bmtc ಪಾಲಿಗೆ ಇದೀಗ ಇದೇ ಎಲೆಕ್ಟ್ರಿಕ್ ಬಸ್‌ಗಳು ವರದಾನವಾಗಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಇಡೀ ಬೆಂಗಳೂರಲ್ಲಿ ಎಲೆಕ್ಟ್ರಿಕ್ ಮಯ ಮಾಡಲು ಬಿಎಂಟಿಸಿ ನಿರ್ಧರಿಸಿದೆ. ಡೀಸೆಲ್ ಬಸ್ ಗಳಿಂದ ಕೋಟಿ ಕೋಟಿ ನಷ್ಟ ಕಾಣುತ್ತಿದ್ದ ಬಿಎಂಟಿಸಿ ಇದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್  ಬಸ್‌ಗಳನ್ನು ರಸ್ತೆಗಿಳಿಸ್ತಿದೆ. ಮೊದಲ ಹಂತದಲ್ಲಿ 90 ಹಾಗೂ ಎರಡನೇ ಬ್ಯಾಚ್ ನಲ್ಲಿ 300 ಬಸ್‌ಗಳನ್ನು ರಸ್ತೆಗಿಳಿಸಿದೆ. ಇದೀಗ ಮೂರನೇ ಬ್ಯಾಚಲ್ಲಿ 921 ಎಲೆಕ್ಟ್ರಿಕ್ ಬಸ್‌ಗಳಿಗೆ ಟೆಂಡರ್ ಕೂಡ ಕರೆದಿದೆ. ಮೊದಲ ಹಾಗೂ ಎರಡನೇ ಬ್ಯಾಚಲ್ಲಿ ಖರೀದಿಸಿರುವ ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿ‌ ನಷ್ಟದ ಭಾರವನ್ನು ತಗ್ಗಿಸಿದೆ. ಹೀಗಾಗಿ ಮೂರನೇ ಬ್ಯಾಚಲ್ಲೂ ಅತೀ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಬಿಎಂಟಿಸಿ ಹೆಜ್ಜೆ ಇಟ್ಟಿದೆ. 

ಡೀಸೆಲ್ ಬಸ್ ಖರೀದಿಯಿಂದ ಕೈ ಸುಟ್ಟುಕೊಂಡಿರುವ ನಿಗಮ ಎಲೆಕ್ಟ್ರಿಕ್ ಬಸ್‌ಗಳಿಂದ ನಷ್ಟವನ್ನು ಕಡಿಮೆ ಮಾಡ್ತಿದೆ. ಈ ಹಿಂದೆ ಡೀಸೆಲ್ ಬಸ್‌ಗೆ ಪ್ರತಿ ಕಿ.ಮೀ 65 ರೂ ಖರ್ಚಾಗ್ತಿತ್ತು. ಆದ್ರೆ ಎಲೆಕ್ಟ್ರಿಕ್ ಬಸ್‌ಗಳು ಪ್ರತಿ ಕಿ.ಮೀ ಗೆ 51 ರೂ ಖರ್ಚಾಗ್ತಿದೆ. ಹೀಗಾಗಿ ಎಲೆಕ್ಟ್ರಿಕ್ ಬಸ್‌ಗಳಿಂದ 14 ರೂ ಪ್ರತೀ ಕಿ ಮೀ ಗೆ ಹೊರೆ ತಪ್ಪಿಸ್ತಿದೆ. ಕೋವಿಡ್ನಿಂದ ತೀವ್ರ ಪಾತಾಳಕ್ಕೆ ಇಳಿದಿದ್ದ ಬಿಎಂಟಿಸಿಯನ್ನು ಎಲೆಕ್ಟ್ರಿಕ್ ಬಸ್‌ಗಳು ಕೈಹಿಡಿದು ಮೇಲೆತ್ತಿದೆ. ಹೀಗಾಗಿ ಹಂತ ಹಂತವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಳಿಸುವ ಮೂಲಕ ಬಿಎಂಟಿಸಿ ನಷ್ಟದ ಹೊರೆಯನ್ನು ತಪ್ಪಿಸುತ್ತಿದೆ. ಮುಂದಿನ ಹಂತದಲ್ಲಿ ಇನ್ನಷ್ಟು ಬಸ್ ಖರೀದಿಗೆ ಪ್ಲಾನ್ ಮಾಡಿದೆ.

ಕೆಎಸ್‌ಆರ್‌ಟಿಸಿ ಮೊದಲ ಎಲೆಕ್ಟ್ರಿಕ್‌ ಬಸ್‌ ಸಂಚಾರ ಶೀಘ್ರ

ಬಿಎಂಟಿಸಿ ಖರೀದಿಸಿರುವ ಎಲೆಕ್ಟ್ರಿಕ್ ಬಸ್‌ಗಳು ಸಂಪೂರ್ಣವಾಗಿ ವಿದ್ಯುತ್ ರಹಿತ ಹಾಗೂ ಹೊಗೆ ರಹಿತ. 6 ಗಂಟೆ ಚಾರ್ಜ್ ಮಾಡಿದ್ರೆ 250 ಕಿ.ಮೀ ಸಂಚಾರ ಮಾಡುತ್ತೆ. ಹೊಗೆ ರಹಿತ ಎಲೆಕ್ಟ್ರಿಕ್ ಬಸ್‌ಗಳಿಂದ ಪರಿಸರದ ಮೇಲಾಗುವ ಹಾನಿಯೂ ತಪ್ಪುತ್ತದೆ. ಹೀಗಾಗಿ ಡೀಸೆಲ್ ಬಸ್‌ಗೆ ಪರ್ಯಾಯವಾಗಿ ಎಲೆಕ್ಟ್ರಿಕ್ ಬಸ್‌ಗಳನ್ನು ಪರ್ಚೇಸ್ ಮಾಡಿದೆ. ಆರಂಭದ ದಿನದಲ್ಲಿ ನಷ್ಟ ಕಾಣುತ್ತಿದ್ದ ಎಲೆಕ್ಟ್ರಿಕ್ ಬಸ್‌ಗಳು ಈಗ ಲಾಭದತ್ತ ಸಾಗ್ತಿದೆ. ನಗರದಲ್ಲಿ ಪ್ರಯಾಣಿಜರು ಕೂಡ ಡೀಸೆಲ್ ಬಸ್‌ಗಳಿಗಿಂತ ಹೆಚ್ಚಿನ ಸಂಖದಯೆಯಲ್ಲಿ ಎಲೆಕ್ಟ್ರಿಕ್ ಬಸ್‌ಗಳತ್ತ ಮುಖ ಮಾಡ್ತಿದ್ದಾರೆ. ಇದು ಬಿಎಂಟಿಸಿ ನಿಗಮದಲ್ಲಿ ಖುಷಿ ತಂದಿದೆ.

ಬೆಂಗಳೂರಿನಲ್ಲಿ ತಯಾರಾದ ವೋಲ್ವೋ ಎಲೆಕ್ಟ್ರಿಕ್ SUV XC40 ಕಾರು ಡೆಲಿವರಿ ಆರಂಭ!

ಒಟ್ನಲ್ಲಿ ಕೋಟಿ ವೆಚ್ಚದಲ್ಲಿ ಖರೀದಿಸಿದ್ದ ಮಾರ್ಕೊ ಪೋಲೋ ವೋಲ್ವೋ ಬಸ್‌ಗಳು ಬಿಎಂಟಿಸಿಗೆ ಶಾಪವಾಗಿ ಪರಿಣಮಿಸಿತ್ತು. ಈ ಎರಡೂ ದುಬಾರಿ ಬಸ್‌ಗಳಿಂದ ಬಿಎಂಟಿಸಿ ಲಾಭದತ್ತ ಮುಖ ಮಾಡಿರಲಿಲ್ಲ. ಆದ್ರೂ ಇದೀಗ ದಿನಕಳೆದಂತೆ ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿ ಪಾಲಿಗೆ ವರದಾನವಾಗ್ತಿದೆ. ಹೀಗಾಗಿ ಇದನ್ನೆ ಮುಂದಿಟ್ಟುಕೊಂಡು ಇದೇ ಮಾದರಿಯ ಬಸ್‌ಗಳನ್ನು ಖರೀದಿಸಿ ಬೆಂಗಳೂರು ಎಲೆಕ್ಟ್ರಿಕ್ ಮಯ ಮಾಡಲು ಪ್ಲಾನ್ ಮಾಡ್ತಿದೆ.

click me!