ಗಾಯಗೊಂಡವರ ಪೈಕಿ 4 ಜನರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ತಾಳಿಕೋಟೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಈ ಕುರಿತು ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಳಿಕೋಟೆ(ಡಿ.05): ಹೊಟ್ಟೆ ಪಾಡಿಗಾಗಿ ದುಡಿಯಲು ಕೂಲಿ ಅರಸಿಕೊಂಡು ಬೇರೆ ಬೇರೆ ಗ್ರಾಮಗಳಿಗೆ ನಿತ್ಯ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ವಾಹನವು ಪಲ್ಟಿಯಾಗಿ ವಿದ್ಯಾರ್ಥಿನಿ ಮೃತಪಟ್ಟು, 20 ಜನರು ಗಾಯಗೊಂಡಿರುವ ಘಟನೆ ತಾಲೂಕಿನ ಪತ್ತೇಪೂರ ಗ್ರಾಮದ ಬಳಿ ಸೋಮವಾರ ಬೆಳಗ್ಗೆ ನಡೆದಿದೆ.
ವಾಹನದಲ್ಲಿ ಕುಳಿತಿದ್ದ ವಿದ್ಯಾರ್ಥಿನಿ ಕಲ್ಪನಾ ಭಜಂತ್ರಿ (16) ಮೃತಪಟ್ಟಿದ್ದು, 20 ಜನರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಳಿಕೋಟೆ ತಾಲೂಕಿನ ಬಳೇಭಾವಿ ಗ್ರಾಮದ ಬಡ ಕುಟುಂಬಸ್ಥರನ್ನು ನಿತ್ಯ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದ ಮೈಲೇಶ್ವರ ಗ್ರಾಮದ ಸುನಿಲ ಕೊಕನೂರ ಎಂಬುವವರಿಗೆ ಸೇರಿದ್ದ ಗೂಡ್ಸ್ ವಾಹನ ಇದಾಗಿದೆ. ಚಾಲಕ ಸೋಮವಾರ ಬೆಳಗ್ಗೆ ಎಂದಿನಂತೆ 21 ಜನರನ್ನು ವಾಹನದಲ್ಲಿ ಜನರನ್ನು ತುಂಬಿಕೊಂಡು ತೆರಳುತ್ತಿದ್ದಾಗ ಪತ್ತೇಪೂರ ಗ್ರಾಮದ ಹತ್ತಿರ ನಡುದಾರಿಯಲ್ಲಿಯೇ ವಾಹನ ಪಲ್ಟಿಯಾಗಿದೆ.
ಬೆಂಗಳೂರು: ಬಿಎಂಟಿಸಿ ಬಸ್‌ಗೆ ಡಿಕ್ಕಿ ಹೊಡೆದ ಕಾರು ಧಗ ಧಗ..!
ಅಪಘಾತದಿಂದ ವಾಹನದಲ್ಲಿ ಕುಳಿತಿದ್ದ 20 ಜರಿಗೆ ಗಂಭೀರ ಗಾಯಗಳಾಗಿದ್ದು, ಪಾಲಕರ ಜೊತೆ ಸುಮಾರು ೬ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೂಡ ಶಾಲೆಯನ್ನು ಬಿಟ್ಟು ಕೂಲಿ ಕೆಲಸಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.
ಗಾಯಗೊಂಡವರ ಪೈಕಿ 4 ಜನರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಘಟನಾ ಸ್ಥಳಕ್ಕೆ ತಾಳಿಕೋಟೆ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಈ ಕುರಿತು ತಾಳಿಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದ ಶಾಸಕ
ಕೂಲಿ ಕೆಲಸಕ್ಕೆ ಜನರನ್ನು ಹೊತ್ತುಕೊಂಡು ಹೊರಟಿದ್ದ ವಾಹನ ಅಪಘಾತ ಸಂಭವಿಸಿದ ಸುದ್ದಿ ಅರಿತ ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ತೆರಳಿದ್ದರೂ ಅಪಘಾತ ಸ್ಥಳಕ್ಕೆ ತಮ್ಮ ಕಾರ್ಯಕರ್ತರನ್ನು ಮತ್ತು ತಾಳಿಕೋಟೆ ಸಮುದಾಯ ಆರೋಗ್ಯದ ಸಿಬ್ಬಂದಿಯನ್ನು ಕಳುಹಿಸಿ ಆಂಬುಲೆನ್ಸ್ ಮತ್ತು ಇನ್ನಿತರ ವಾಹನಗಳ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.