ದಾಂಡೇಲಿ: ಮೀನು ಹಿಡಿ​ಯಲು ಹೋಗಿ ಮೊಸಳೆ ಪಾಲಾದ ಬಾಲ​ಕ..!

By Kannadaprabha News  |  First Published Oct 25, 2021, 11:24 AM IST

*  ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಪಟ್ಟಣದಲ್ಲಿ ನಡೆದ ಘಟನೆ
*  ಮೊಹೀನ ಮೊಹಮ್ಮ​ದ್‌ ಗುಲ್ಬ​ರ್ಗ ಮೊಸಳೆಗೆ ಪಾಲಾದ ಬಾಲಕ
*  ಕಾಳಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಶೋಧಕಾರ್ಯಕ್ಕೆ ಅಡ್ಡಿ
 


ದಾಂಡೇಲಿ(ಅ.25): ಕಾಳಿ ನದಿಯಲ್ಲಿ ಬೆಳಗ್ಗೆ ಮೀನು(Fish) ಹಿಡಿಯಲು ಹೋದ ಬಾಲಕನನ್ನು ಮೊಸಳೆಯೊಂದು(Crocodile) ಹಿಡಿದುಕೊಂಡ ಹೋದ ಘಟನೆ ಭಾನು​ವಾರ ಸಂಭ​ವಿ​ಸಿ​ದೆ.

ವಿನಾಯಕ ನಗರದ ಮೊಹೀನ ಮೊಹಮ್ಮ​ದ್‌ ಗುಲ್ಬ​ರ್ಗ (15) ಮೊಸಳೆಗೆ ಸಿಲುಕಿದ ಬಾಲಕ. ಆ ಭಾಗದ ಜನರು ಬಟ್ಟೆ ತೊಳೆಯಲು ಹೋಗುವ ಜಾಗದಲ್ಲಿ ಬಾಲಕ ಮೀನು ಹಿಡಿಯಲು ಗಾಳ ಹಾಕಿ ಕುಳಿತುಕೊಂಡಾಗ ಕಾಳಿ ನದಿಯಿಂದ(Kali River) ಹೊರಬಂದ ಮೊಸಳೆಯೊಂದು ಬಾಲಕನನ್ನು ಎಳೆದುಕೊಂಡು ಹೋಗಿದೆ ಎಂದು ಅಲ್ಲಿದ್ದ ಸ್ಥಳೀಯರು ತಿಳಿಸಿದ್ದಾರೆ.

Tap to resize

Latest Videos

ವಿಷಯ ತಿಳಿದು ಸ್ಥಳಕ್ಕೆ ಸಿಪಿಐ ಪ್ರಭು ಗಂಗನಹಳ್ಳಿ, ನಗರದ ಗ್ರಾಮೀಣ ಪೊಲೀಸ್‌(Police) ಠಾಣೆಯ ಪಿಎಸ್‌ಐ ಯುನೀಸ್‌ ಗಡ್ಡೆಕರ ಹಾಗೂ ಪೊಲೀಸ್‌ ಸಿಬ್ಬಂದಿ ಘಟನಾ ಸ್ಥಳಕ್ಕಾಗಮಿಸಿ ಬಾಲಕನ ಹುಡುಕಾಟ ಆರಂಭಿಸಿದರು. ಆರ್‌ಎಫ್‌ಒ ವಿನಯ ಭಟ್ಟ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ, ರವಿ ನಾಯ್ಕ ಅವರ ರಾರ‍ಯಫ್ಟಿಂಗ್‌ ತಂಡವು(Rafting Team) ಬಾಲಕನ ಶೋಧ ಕಾರ್ಯದಲ್ಲಿ ನಿರತರಾಗಿದೆ. ತಹಸೀಲ್ದಾರ್‌ ಶೈಲೇಶ ಪರಮಾನಂದ, ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ, ರುಕ್ಮಿಣಿ ಬಾಗಡೆ ಉಪಸ್ಥಿತರಿದ್ದರು.

'ಒಗ್ಗಟ್ಟು ಇಲ್ಲ​ದಿ​ರು​ವುದೇ ಜೆಡಿ​ಎಸ್‌ ಸಂಘ​ಟ​ನೆಗೆ ಕಷ್ಟ'

ಬಾಲಕನ ಹುಡುಕಾಟಕ್ಕೆ ಒಂದು ದೊಡ್ಡ ಬೋಟು(Boat) ಹಾಗೂ ಸಣ್ಣ 6 ಬೋಟುಗಳನ್ನು ಬಳಸಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಬಾಲಕನ ಸುಳಿವು ಸಿಕ್ಕಿಲ್ಲ. ತಡರಾತ್ರಿ ವರೆಗೆ ಬಾಲಕನ ಶೋಧಕಾರ್ಯವನ್ನು ಮಾಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಾರಾಂತ್ಯವಾದ ಕಾರಣ ಕಾಳಿ ನದಿಗೆ ಸೂಪಾ ಜಲಾಶಯದಿಂದ(Supa Dam) ನೀರು ಹರಿಬಿಟ್ಟಿದ್ದರಿಂದ ಕಾಳಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ಶೋಧಕಾರ್ಯಕ್ಕೆ ತೊಂದರೆಯಾಗಿದೆ.

ಸೂಪಾ ಜಲಾಶಯದಿಂದ ಬಿಟ್ಟಿರುವ ನೀರಿನ ಹರಿವು ಕಡಿಮೆ ಮಾಡುವಂತೆ ಗಣೇಶಗುಡಿಯ ಕರ್ನಾಟಕ ವಿದ್ಯುತ್‌ ನಿಗಮದ(Karnataka Electricity Corporation) ಅಧಿಕಾರಿಗಳಲ್ಲಿ ವಿನಂತಿಸಲಾಗಿದ್ದು, ನೀರಿನ ಹರಿವು ಕಡಿಮೆಯಾಗುತ್ತಿದ್ದು, ಬಾಲಕನ ಶೋಧಕಾರ್ಯಕ್ಕೆ ಅನುಕೂಲವಾಗುವುದು ಎಂದು ಸಿಪಿಐ ಪ್ರಭು ಗಂಗನಹಳ್ಳಿ ತಿಳಿಸಿದ್ದಾರೆ.
 

click me!