ಕನಕಗಿರಿ: ಸಚ್ಚಿದಾನಂದ ಅವಧೂತರ ದರ್ಶನ ಪಡೆದ ಬಾಬಾ ರಾಮದೇವ್‌

Kannadaprabha News   | Asianet News
Published : Oct 25, 2021, 10:48 AM ISTUpdated : Oct 25, 2021, 10:49 AM IST
ಕನಕಗಿರಿ: ಸಚ್ಚಿದಾನಂದ ಅವಧೂತರ ದರ್ಶನ ಪಡೆದ ಬಾಬಾ ರಾಮದೇವ್‌

ಸಾರಾಂಶ

*  ಸಿದ್ಧಪರ್ವತ ಅಂಬಾದೇವಿ ದರ್ಶನ ಪಡೆದ ಬಾಬಾ ರಾಮದೇವ್‌  *  ಅಂಬಾದೇವಿ ದರ್ಶನಕ್ಕೆ ಬರುವುದು ನನ್ನ ಸಂಕಲ್ಪವಿತ್ತು *  ಸಚ್ಚಿದಾನಂದ ಅವಧೂತರ ಗದ್ದುಗೆಗೆ ಭೇಟಿ ನೀಡಿ ದರ್ಶನ ಬಾಬಾ ರಾಮ್‌ದೇವ್‌   

ಕನಕಗಿರಿ(ಅ.25): ಇಲ್ಲಿನ ಸಚ್ಚಿದಾನಂದ ಅವಧೂತರ ಐಕ್ಯ (ಗದ್ದುಗೆ) ಸ್ಥಳಕ್ಕೆ ಯೋಗಗುರು ಬಾಬಾ ರಾಮದೇವ್‌(Baba Ramdev) ಭಾನುವಾರ ರಾತ್ರಿ ಭೇಟಿ ನೀಡಿ ದರ್ಶನ ಪಡೆದರು.

ರಾಯಚೂರು(Raichur)ಜಿಲ್ಲೆಯ ಸಿಂಧನೂರು(Sindhanur) ತಾಲೂಕಿನ ಸಿದ್ಧಪರ್ವತ ಅಂಬಾದೇವಿ(Ambadevi) ದರ್ಶನ ಪಡೆದ ಬಾಬಾ ರಾಮದೇವ್‌ ಅವರು ಕನಕಗಿರಿಯಲ್ಲಿನ ತಪಸ್ವಿ ಸಚ್ಚಿದಾನಂದ ಕರ್ತೃ ಗದ್ದುಗೆಗೆ ಪುಷ್ಪ ಸಮರ್ಪಿಸಿ ಕೆಲ ಕಾಲ ಧ್ಯಾನ(Meditation) ಮಾಡಿದರು.

Ind Vs Pak ಪಂದ್ಯ 'ರಾಷ್ಟ್ರಧರ್ಮಕ್ಕೆ' ವಿರುದ್ಧ : ಬಾಬಾ ರಾಮದೇವ್

ಪಟ್ಟಣಕ್ಕೆ ಬಾಬಾ ರಾಮದೇವ್‌ ಬರುತ್ತಾರೆ ಎನ್ನುವ ಸುದ್ದಿ ತಿಳಿದ ಹಿಂದೂ ಜಾಗರಣಾ ವೇದಿಕೆ(Hindu Jagarana Vedike), ಆರ್‌ಎಸ್‌ಎಸ್‌(RSS) ಕಾರ್ಯಕರ್ತರು ಮಠದ ಬಳಿ ಜಮಾಯಿಸಿ, ಸಚ್ಚಿದಾನಂದರ ಪವಾಡ, ಅಂಬಾ ದೇವಿಯಿಂದ ಅನುಗ್ರಹ ಪಡೆದಿರುವುದು ಸೇರಿದಂತೆ ಶ್ರೀಮಠದ(Sachchidanand Matha) ಐತಿಹ್ಯ ಕುರಿತ ಮಾಹಿತಿಯನ್ನು ಬಾಬಾ ರಾಮದೇವ್‌ ಅವರಿಗೆ ನೀಡಿದರು.

ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಬಾಬಾ ರಾಮದೇವ್‌, ಶಕ್ತಿ ದೇವತೆಯ ಪೀಠವಾದ ಸಿದ್ಧಪರ್ವತದ ಅಂಬಾದೇವಿ ದರ್ಶನಕ್ಕೆ ಬರುವುದು ನನ್ನ ಸಂಕಲ್ಪವಿತ್ತು. ಅಲ್ಲಿಗೆ ತೆರಳಿ ದರ್ಶನ ಪಡೆದ ನಂತರ ಶಕ್ತಿ ದೇವತೆಯನ್ನು ಒಲಿಸಿಕೊಂಡ ಏಕೈಕ ಜಗದ್ಗುರುಗಳಾದ ಶ್ರೀ ಸಚ್ಚಿದಾನಂದ ಅವಧೂತರು ಎಂದು ತಿಳಿದಿದ್ದು, ಈ ಹಿನ್ನೆಲೆಯಲ್ಲಿ ಕನಕಗಿರಿಯಲ್ಲಿ(Kanakagiri) ಐಕ್ಯರಾದ ಸಚ್ಚಿದಾನಂದ ಅವಧೂತರ ಗದ್ದುಗೆಗೆ ಭೇಟಿ ನೀಡಿ ದರ್ಶನ ಪಡೆದಿರುವುದಾಗಿ ತಿಳಿಸಿದರು. ಈ ವೇಳೆ ಹಿಂದೂ ಜಾಗರಣಾ ವೇದಿಕೆಯ ಅಯ್ಯನಗೌಡ ಅಳ್ಳಳ್ಳಿ, ಹನುಮೇಶ ಯಾದವ್‌ ಸೇರಿದಂತೆ ಹಲವರಿದ್ದರು.
 

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ