ಚಾಮರಾಜನಗರ ಆಯ್ತು ಈಗ ತುಮಕೂರಿನಲ್ಲೂ ನಡೆಯಿತು ವಿಷ ಆಹಾರ ದುರಂತ

By Web DeskFirst Published 16, Dec 2018, 5:31 PM IST
Highlights

ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ದೇವಸ್ಥಾನದ ವಿಷ ಮಿಶ್ರಿತ ಆಹಾರ ಸೇವಿಸಿ 13 ಜನ ದಾರುಣ ಸಾವನ್ನಪ್ಪಿರುವ ಕರಾಳ ಘಟನೆ ಮಾಸುವ ಮುನ್ನೇ, ಇಂತದ್ದೇ ವಿಷಪೂರಿತ ಉಪಹಾರ ಸೇವಿಸಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ.

ತುಮಕೂರು, [ಡಿ.16]: ಹಾಸ್ಟಲ್‌ನಲ್ಲಿ ಉಪಹಾರ ಸೇವಿಸಿ ವಿದ್ಯಾರ್ಥಿಗಳು ಅಸ್ವಸ್ಥ ಗೊಂಡಿರುವ ಘಟನೆ ಜಿಲ್ಲೆಯ ತಿಪಟೂರು ತಾಲೂಕಿನ ಕೊನೆಹಳ್ಳಿಯಲ್ಲಿ ನಡೆದಿದೆ. 

ಇಲ್ಲಿನ  ಪಶುಸಂಗೋಪನ ವಿದ್ಯಾರ್ಥಿ‌ ನಿಲಯದಲ್ಲಿ ವಿದ್ಯಾರ್ಥಿಗಳು ಬೆಳಗ್ಗೆ ಇಡ್ಲಿ, ಸಾಂಬಾರ್ ಸೇವಿಸಿದ್ದಾರೆ. ಬಳಿಕ  15 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. 

ಏರುತ್ತಿರುವ ಸಾವಿನ ಸಂಖ್ಯೆಗೆ ಕಾರಣವೇನು..?

 ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನ ತಿಪಟೂರು ತಾಲೂಕಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಕ್ಕೆ ಕಾರಣ ತಿಳಿದು ಬಂದಿಲ್ಲ.

ಮೊನ್ನೇ ಅಷ್ಟೇ ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದಲ್ಲಿ 13 ಜನ ಸಾವನ್ನಪ್ಪಿದ್ದು, ಇನ್ನು ಹಲವರು ಚಾಮರಾಜನಗರ ಹಾಗೂ ಮೈಸೂರಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕೆತ್ಸೆ ಪಡೆಯುತ್ತಿದ್ದಾರೆ.

ಇದರ ಕರಾಳ ನೆನಪುಗಳು ಜನರ ಮನಸ್ಸಿನಿಮದ ಮಾಸುವ ಮುನ್ನವೇ ಈ ತುಮಕೂರಿನಲ್ಲಿ ನಡೆದಿದೆ. 

Last Updated 16, Dec 2018, 5:31 PM IST