ಕುಖ್ಯಾತ ಗೂಬೆ ಗ್ಯಾಂಗ್​- ಹಾಲಿ ಸಚಿವರಿಗೂ ಇದ್ಯಾ ಲಿಂಕ್​..?

Published : Dec 08, 2018, 10:17 PM IST
ಕುಖ್ಯಾತ ಗೂಬೆ ಗ್ಯಾಂಗ್​- ಹಾಲಿ ಸಚಿವರಿಗೂ ಇದ್ಯಾ ಲಿಂಕ್​..?

ಸಾರಾಂಶ

ಗೂಬೆಯನ್ನೇ ಬಂಡವಾಳ ಮಾಡಿಕೊಂಡು ರಾಜಕಾರಣಿಗಳು ಹಾಗೂ ಶ್ರೀಮಂತರನ್ನು  ವಂಚಿಸಿ ಹಣ ದೋಚುತ್ತಿದ್ದ ಕುಖ್ಯಾತ ವಂಚಕರ ತಂಡವನ್ನ  ಸುವರ್ಣ ನ್ಯೂಸ್​​​ ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ. ಆದ್ರೆ ಈ ಪ್ರಕರಣದಲ್ಲಿ ಹಾಲಿ ಸಚಿವರೊಬ್ಬರ ಹೆಸರು ಕೇಳಿಬಂದಿದೆ.

ತುಮಕೂರು, [ಡಿ.08]: ಜನರು ಅಪಶಕುನ ಎಂದು ನಂಬುವ ಗೂಬೆಯನ್ನೇ ಬಂಡವಾಳ ಮಾಡಿಕೊಂಡು ರಾಜಕಾರಣಿಗಳು ಹಾಗೂ ಶ್ರೀಮಂತರನ್ನು  ವಂಚಿಸಿ ಹಣ ದೋಚುತ್ತಿದ್ದ ಕುಖ್ಯಾತ ವಂಚಕರ ತಂಡವನ್ನ  ಸುವರ್ಣ ನ್ಯೂಸ್​​​ ಕವರ್ ಸ್ಟೋರಿ ತಂಡ ಬಯಲಿಗೆಳೆದಿದೆ. 

ಐದು  ಬೆರಳುಳ್ಳ  ವಿಶೇಷ ಗೂಬೆಯನ್ನ  ಎರಡು  ಲಕ್ಷ  ರೂಪಾಯಿಗೆ ಮಾರುತಿದ್ದ ಖದೀಮರನ್ನ ಕೊರಟಗೆರೆಯ ಕಾಶಾಪುರದ ಬಳಿ ತಮ್ಮ ತಂಡ ರೆಡ್​ ಹ್ಯಾಂಡ್​ ಆಗಿ  ಸೆರೆಹಿಡಿದಿದೆ.

ಇನ್ನು  ಗೂಬೆ ಗ್ಯಾಂಗ್  ತನಿಖೆ ವೇಳೆ  ರಾಜ್ಯದ ಕೃಷಿ ಸಚಿವ ಶಿವಶಂಕರ್​ ರೆಡ್ಡಿ ಅವರು ಸಹ ಗೂಬೆಯನ್ನ ಖರೀದಿಸಿಯೇ  ಗೆದ್ದಿದ್ದು  ಎಂದು  ಬಂಧಿತ  ತಿಮ್ಮ ಅಲಿಯಾಸ್ ಆನಂದ್, ದೀಪು  ಮತ್ತು ಜಯಕುಮಾರ್ ಹೇಳಿಕೊಂಡಿದ್ದು, ಗೂಬೆ ಗ್ಯಾಂಗ್​ ಗೂ ಹಾಲಿ ಸಚಿವರಿಗೂ ಲಿಂಕ್ ಇದ್ಯಾ​ ಎನ್ನುವ ಅನುಮಾನಗಳು ಶುರುವಾಗಿವೆ.

ಈ ಪ್ರಕರಣದ ಕುರಿತು ಸುವರ್ಣನ್ಯೂಸ್​ ಸಚಿವ ಶಿವಶಂಕರ್​ ರೆಡ್ಡಿ ಅವರ ಬಳಿ ಹೋಗಿ ಕೇಳಿದ್ರೆ,  ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಪ್ರಶ್ನೆ ಕೇಳುತ್ತಿದ್ದಂತೆ ಅದು ಬೇಡ ಎಂದು ಗಾಬರಿಯಿಂದ ಕಾರು ಹತ್ತಿ ನಿರ್ಗಮಿಸಿದ್ದಾರೆ.

ಒಟ್ಟಿನಲ್ಲಿ ಈ ಗೂಬೆ ಗ್ಯಾಂಗ್ ಸದಸ್ಯನ ಹೇಳಿಕೆ ಈಗ ಹಾಲಿ ಸಚಿವರ ಕುತ್ತಿಗೆಗೆ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಪ್ರಕರಣ ಯಾವ ರೀತಿ ಪಡೆದುಕೊಳ್ಳುತ್ತೆ ಎನ್ನುವುದನ್ನ ಕಾದುನೋಡಬೇಕಿದೆ.

PREV
click me!

Recommended Stories

ಬೆಂಗಳೂರು ಮುಂಬೈ ನಡುವೆ ಹೊಸ ದ್ವಿಸಾಪ್ತಾಹಿಕ ಎಕ್ಸಪ್ರೆಸ್‌ ರೈಲು ಆರಂಭ, ಸಚಿವ ಜೋಶಿ ಚಾಲನೆ, ವೇಳಾಪಟ್ಟಿ ಇಲ್ಲಿದೆ
ಪ್ರೀತಿ ವಿಚಾರಕ್ಕೆ 17ರ ಮಗಳನ್ನೇ ಕೊಂದ ಪಾಪಿ ತಂದೆ! ಶವ ಹೂತು ಹಾಕಿ ತಿಂಗಳ ಕಾಲ ನಾಟಕವಾಡಿದ್ದ ಆರೋಪಿ ಅರೆಸ್ಟ್