ಚಿಕ್ಕಮಗಳೂರು ಜೈಲಲ್ಲಿ ಕೈದಿಗಳಿಗೆ ಸೋಂಕು

By Kannadaprabha News  |  First Published May 17, 2021, 7:08 AM IST
  • ಜೈಲಿನಲ್ಲಿ ಕೈದಿಗಳಿಗೆ ತಗುಲಿದ ಕೊರೋನಾ ಸೋಂಕು
  • ಚಿಕ್ಕಮಗಳೂರಿನ ಜೈಲಿನಲ್ಲಿ ಕೋವಿಡ್ ಸೋಂಕು
  •  ಈ ಜೈಲಿನಲ್ಲಿ ಒಟ್ಟು 260 ವಿಚಾರಣಾಧೀನ ಕೈದಿಗಳಿದ್ದಾರೆ

ಚಿಕ್ಕಮಗಳೂರು (ಮೇ.17): ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ 15 ಮಂದಿ ವಿಚಾರಣಾಧೀನ ಕೈದಿಗಳಿಗೆ ಕೋವಿಡ್‌ ಸೋಂಕಿರುವುದು ದೃಢಪಟ್ಟಿದೆ. 

ಇದೇ ಕಾರಾಗೃಹದಲ್ಲಿದ್ದ ಕೇರಳದ ಅಲೆಕ್ಸಾಂಡರ್‌ ಹೆಸರಿನ ವಿಚಾರಣಾಧೀನ ಕೈದಿ ಅನಾರೋಗ್ಯದಿಂದ ಮೃತಪಟ್ಟಿದ್ದರು. ಅವರಿಗೆ ಕೋವಿಡ್‌ ಸೋಂಕಿರುವುದು ದೃಢವಾಗಿತ್ತು. 

Latest Videos

undefined

ಜೈಲಿನಲ್ಲಿದ್ದ 35 ಕೈದಿಗಳಿಗೆ ಕೊರೋನಾ ಟೆಸ್ಟ್‌ ಮಾಡಿಸಿದ್ದಾಗ, ಅದರಲ್ಲಿ 15 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಜೈಲಿನಲ್ಲಿ ಒಟ್ಟು 260 ವಿಚಾರಣಾಧೀನ ಕೈದಿಗಳಿದ್ದಾರೆ. ಇದರಿಂದಾಗಿ ಜೈಲಿನಲ್ಲಿರುವ ಇತರೆ ಕೈದಿಗಳಿಗೆ ಆತಂಕ ಎದುರಾಗಿದೆ.

ಗುಡ್‌ನ್ಯೂಸ್: ಮೊದಲ ಬಾರಿ ರಾಜ್ಯದಲ್ಲಿ ಪಾಸಿಟಿವ್ ಕೇಸ್‌ಗಿಂತ ಡಿಸ್ಚಾರ್ಜ್ ಹೆಚ್ಚಳ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona 

click me!